For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್‌ ಅಭಿಮಾನಿಗಳ ದೆಸೆಯಿಂದ ಕ್ರ್ಯಾಶ್ ಆದ ಆಹಾ ಒಟಿಟಿ!

  |

  ಪ್ರೀತಿ ಶಕ್ತಿವಂತವಾದುದು ಎಂದು ಕೇಳಿದ್ದೇವೆ, ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ. ಸ್ಟಾರ್‌ ನಟ ಪ್ರಭಾಸ್‌ರ ಅಭಿಮಾನಿಗಳ ಪ್ರೀತಿಗೆ ಒಟಿಟಿಯೊಂದು ಕ್ರ್ಯಾಶ್ ಆಗಿಬಿಟ್ಟಿದೆ.

  ಆಗಿರುವುದಿಷ್ಟು, ನಟ ಪ್ರಭಾಸ್, ಆಹಾ ಒಟಿಟಿಯಲ್ಲಿ ಪ್ರಸಾರವಾಗುವ 'ಅನ್‌ಸ್ಟಾಪೆಬಲ್' ಟಾಕ್‌ ಶೋನಲ್ಲಿ ಭಾಗವಹಿಸಿದ್ದರು. ಶೋ ನಡೆಸಿಕೊಡುವ ಬಾಲಕೃಷ್ಣ ಜೊತೆಗೆ ತಮಾಷೆಯಾಗಿ ಮಾತನಾಡುತ್ತಾ, ಜೀವನ ನಡೆದು ಬಂದು ಹಾದಿಯ ಬಗ್ಗೆ ಮೆಲುಕು ಹಾಕಿದ್ದರು.

  ಟಿವಿ ಸಂದರ್ಶನಗಳು, ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿಯುವ ಪ್ರಭಾಸ್, ಅನ್‌ಸ್ಟಾಪೆಬಲ್‌ಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಒಟ್ಟಾರೆ ಸಿನಿಮಾ ಪ್ರೇಮಿಗಳು ಹಾಗೂ ಶೋ ನಿರೂಪಕ ಬಾಲಯ್ಯ ಅಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು.

  ಪ್ರಭಾಸ್ ಭಾಗವಹಿಸಿದ್ದ ಟಾಕ್ ಶೋನ ಎಪಿಸೋಡ್ ನ ಮೊದಲ ಭಾಗ ಡಿಸೆಂಬರ್ 29 ರ ರಾತ್ರಿ ಒಂಬತ್ತು ಗಂಟೆಗೆ ಆಹಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿತ್ತು. ಇದಕ್ಕಾಗಿಯೇ ಕೆಲವು ದಿನಗಳಿಂದಲೂ ಕಾಯುತ್ತಲೇ ಇದ್ದ ಅಭಿಮಾನಿಗಳು, ಒಮ್ಮೆಲೆ ಪ್ರಭಾಸ್‌ರ ಎಪಿಸೋಡ್‌ ನೋಡಲು ಆಹಾ ಒಟಿಟಿ ತೆರೆದಿದ್ದರಿಂದ ಓವರ್‌ ಲೋಡ್ ಆಗಿ ಒಟಿಟಿ ಕ್ರ್ಯಾಶ್ ಆಗಿದೆ.

  ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಆಹಾ ಒಟಿಟಿ, ''ಡಾರ್ಲಿಂಗ್ಸ್ (ಪ್ರಭಾಸ್ ತಮ್ಮ ಅಭಿಮಾನಿಗಳನ್ನು ಹೀಗೆ ಕರೆಯುವುದು) ನಮ್ಮ ಅಪ್ಲಿಕೇಶನ್ ಆಫ್‌ಲೈನ್‌ ಆಗಿದೆ. ನಮಗೆ ಸ್ವಲ್ಪವೇ ಸಮಯ ಕೊಡಿ ನಾವಿದನ್ನು ಸರಿ ಮಾಡುತ್ತೇವೆ'' ಎಂದು ಮನವಿ ಮಾಡಿತ್ತು. ಸತತ ಪ್ರಯತ್ನದ ಬಳಿಕ ವೆಬ್‌, ಸ್ಯಾಮ್‌ಸಂಗ್ ಹಾಗೂ ಆಪಲ್ ಟಿವಿಗಳನ್ನು ಆಹಾ ತೆರೆದುಕೊಳ್ಳುವಂತೆ ಮಾಡಲಾಯ್ತು. ಆ ನಂತರ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಆಹಾ ಓಪನ್ ಆಯಿತು.

  ಒಟ್ಟಾರೆ ಸುಮಾರು ಮೂರು-ನಾಲ್ಕು ಗಂಟೆಗಳ ಬಳಿಕವಷ್ಟೆ ಸಮಸ್ಯೆ ಸರಿಹೋಗಿ ಪ್ರಭಾಸ್‌ರ ಎಪಿಸೋಡ್‌ ಅನ್ನು ಅಭಿಮಾನಿಗಳು ವೀಕ್ಷಿಸುವಂತಾಯಿತು. ''ಇಬ್ಬರು ಲಿಜೆಂಡ್‌ಗಳು ಎದುರು ಬದುರಾದಾಗ ಇದೆಲ್ಲ ಸಾಮಾನ್ಯ'' ಎಂದು ಆ ಬಳಿಕ ಆಹಾ ಟ್ವೀಟ್ ಮಾಡಿತು.

  ಪ್ರಭಾಸ್ ಸಾಮಾನ್ಯವಾಗಿ ಸಂದರ್ಶನಗಳನ್ನು ನೀಡುವಂತವರಲ್ಲ. ಕಡಿಮೆ ಮಾತಿನ ಪ್ರಭಾಸ್, ಸಿನಿಮಾ ಸಂದರ್ಭದಲ್ಲಿ ಮಾತ್ರ ಅಲ್ಲೊಮ್ಮೆ-ಇಲ್ಲೊಮ್ಮೆ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಅಲ್ಲಿಯೂ ಹೆಚ್ಚು ಅನ್ಯ ವಿಷಯಗಳನ್ನು ಮಾತನಾಡದೆ ಸಿನಿಮಾ ಬಗ್ಗೆಯಷ್ಟೆ ಮಾತನಾಡಿ ಮುಗಿಸುತ್ತಾರೆ. ಆದರೆ 'ಅನ್‌ಸ್ಟಾಪೆಬಲ್'ನಲ್ಲಿ ಹಾಗಾಗಿಲ್ಲ. ಹಲವು ವಿಷಯಗಳನ್ನು ಪ್ರಭಾಸ್‌ರಿಂದ ಬಾಯಿ ಬಿಡಿಸಿದ್ದಾರೆ ನಟ ಬಾಲಕೃಷ್ಣ. ಹಲವು ಆಟಗಳನ್ನು ಆಡಿದ್ದಾರೆ. ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಮದುವೆ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ಗೆಳೆಯರ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಪ್ರಭಾಸ್‌ ಅಭಿಮಾನಿಗಳಿಗೆ ಮಾತ್ರವೇ ಅಲ್ಲದೆ ಪರನಟರ ಅಭಿಮಾನಿಗಳೂ ಸಹ ಪ್ರಭಾಸ್‌ರ ಅನ್‌ಸ್ಟಾಪೆಬಲ್ ಎಪಿಸೋಡ್ ನೋಡಲು ಕಾತರರಾಗಿದ್ದಾರೆ.

  English summary
  Due to Prabhas fans Aha OTT crashed, later it restored by the team. Prabhas's episode streaming on OTT from December 29.
  Friday, December 30, 2022, 8:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X