For Quick Alerts
  ALLOW NOTIFICATIONS  
  For Daily Alerts

  ನಗ್ನ ದೃಶ್ಯಕ್ಕೆ ಒಪ್ಪಿದರಷ್ಟೆ ಪಾತ್ರ: ದೂರು ನೀಡುತ್ತೇನೆಂದ ಅನುರಾಗ್ ಕಶ್ಯಪ್

  |

  ಬಾಲಿವುಡ್‌ನಲ್ಲಿ ತಿಂಗಳಿಗೆ ಕನಿಷ್ಟ ಒಂದಾದರೂ ಕಾಸ್ಟಿಂಗ್ ಕೌಚ್ ಪ್ರಕರಣಗಳು, ನಕಲಿ ಕಾಸ್ಟಿಂಗ್‌ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬಂಧನವೂ ಆಗುತ್ತಿವೆ. ಇದೀಗ ಹೊಸದೊಂದು ನಕಲಿ ಕಾಸ್ಟಿಂಗ್ ಜಾಹೀರಾತು ಬೆಳಕಿಗೆ ಬಂದಿದ್ದು, ದೂರು ಸಹ ದಾಖಲಾಗಿದೆ.

  ಭಾರತೀಯ ವೆಬ್ ಸರಣಿಗಳ ಪಟ್ಟಿಯಲ್ಲಿ 'ಸೇಕ್ರೆಡ್ ಗೇಮ್ಸ್' ಪ್ರಮುಖವಾದುದು ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿದ 'ಸೇಕ್ರೆಡ್ ಗೇಮ್ಸ್' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. ಈ ವೆಬ್ ಸರಣಿಯಲ್ಲಿ ಹಲವು ಬೋಲ್ಡ್ ದೃಶ್ಯಗಳು, ಕಚ್ಚಾ ಸಂಭಾಷಣೆಗಳು ಇದ್ದವು. ಈ ವೆಬ್ ಸರಣಿ ಹಿಟ್ ಆಗಲು ಇದೂ ಒಂದು ಕಾರಣವೂ ಆಗಿತ್ತು.

  ಈವರೆಗೆ 'ಸೇಕ್ರೆಡ್ ಗೇಮ್ಸ್‌'ನ ಎರಡು ಸೀಸನ್‌ ಬಂದಿದ್ದು ಮೂರನೇ ಸೀಸನ್‌ ಬಗ್ಗೆ ಕೇವಲ ಗಾಳಿಸುದ್ದಿಗಳಷ್ಟೆ ಹರಿದಾಡುತ್ತಿವೆ. ಆದರೆ ಇದೀಗ 'ಸೇಕ್ರೆಡ್ ಗೇಮ್ಸ್ 3' ರ ಕಾಸ್ಟಿಂಗ್ ಕಾಲ್‌ನ ಜಾಹೀರಾತು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ನಕಲಿ ಜಾಹಿರಾತಾಗಿದ್ದು, ಮೋಸದ ಉದ್ದೇಶದಿಂದಲೇ ಈ ರೀತಿಯ ಜಾಹೀರಾತನ್ನು ಹರಿಬಿಡಲಾಗಿದೆ.

  ರಾಜ್‌ಬೀರ್ ಕಾಸ್ಟಿಂಗ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ಜಾಹೀರಾತು ಪೋಸ್ಟ್ ಆಗಿದ್ದು, 'ಸೇಕ್ರೆಡ್ ಗೇಮ್ಸ್ 3' ಗೆ ನಟಿಯರು ಬೇಕಾಗಿದ್ದಾರೆ. ನಾಯಕಿ ಪಾತ್ರಕ್ಕೆ 20 ರಿಂದ 27 ವಯಸ್ಸಿನ ಯುವತಿ, 20-28 ವರ್ಷದ ಯುವತಿ ಎರಡನೇ ನಾಯಕಿ ಪಾತ್ರಕ್ಕೆ, 30 ರಿಂದ 40 ವರ್ಷ ಮಹಿಳೆ, ವಿಲನ್ ಪಾತ್ರಕ್ಕೂ ಒಬ್ಬ ಮಹಿಳೆ ಬೇಕಾಗಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ಅಥವಾ ನಗ್ನ ದೃಶ್ಯಗಳಲ್ಲಿ ನಟಿಸಲು ಒಪ್ಪುವಂತಿದ್ದರೆ ಪಾತ್ರ ಸಿಗುತ್ತದೆ ಎಂಬ ಷರತ್ತನ್ನು ಸಹ ಜಾಹೀರಾತಿನಲ್ಲಿ ಹಾಕಲಾಗಿದೆ.

  ಈ ಸುಳ್ಳು ಜಾಹೀರಾತಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, ''ಜಾಹೀರಾತು ಪ್ರಕಟಿಸಿರುವ ರಾಜ್ಬೀರ್ ಕಾಸ್ಟಿಂಗ್ ಒಬ್ಬ ಮೋಸಗಾರ. ಇವರ ಖಾತೆಯನ್ನು ರಿಪೋರ್ಟ್ ಮಾಡಿ. 'ಸೇಕ್ರೆಡ್ ಗೇಮ್ಸ್ 3' ನಿರ್ಮಾಣವಾಗುತ್ತಿಲ್ಲ'' ಎಂದಿದ್ದಾರೆ. ಅಲ್ಲದೆ ಈ ರೀತಿ 'ಸೇಕ್ರೆಡ್ ಗೇಮ್ಸ್' ವೆಬ್ ಸರಣಿ ಹೆಸರಿನಲ್ಲಿ ಸುಳ್ಳು ಜಾಹೀರಾತು ಪ್ರಕಟಿಸಿರುವ ರಾಜ್‌ಬೀರ್ ಕಾಸ್ಟಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದೇನೆ ಎಂದಿದ್ದಾರೆ.

  'ಸೇಕ್ರೆಡ್ ಗೇಮ್ಸ್' ವೆಬ್ ಸರಣಿ ಭಾರತದ ಜನಪ್ರಿಯ ವೆಬ್‌ ಸರಣಿಯಲ್ಲಿ ಪ್ರಮುಖವಾದುದು. ನವಾಜುದ್ದೀನ್ ಸಿದ್ಧಿಖಿ. ಸೈಫ್ ಅಲಿ ಖಾನ್, ಪಂಕಜ್ ಪ್ರಿಪಾಠಿ, ಕುಬ್ರಾ ಸೇಠ್, ರಾಧಿಕಾ ಆಪ್ಟೆ, ಕಲ್ಕಿ ಕೆಕ್ಲಾ, ರಣ್ವೀರ್ ಶೌರಿ, ಜಿತೇಂದ್ರ ಜೋಶಿ ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ. ವೆಬ್ ಸರಣಿಯನ್ನು ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನಿ, ನೀರಜ್ ಗಯ್ವಾನ್ ನಿರ್ದೇಶನ ಮಾಡಿದ್ದಾರೆ. ವೆಬ್ ಸರಣಿಗೆ ಕತೆ, ಚಿತ್ರಕತೆ ಬರೆದಿರುವುದು ವರುಣ್ ಗ್ರೋವರ್, ಸ್ಮಿತಾ ಸಿಂಗ್, ಪ್ರಖರ್ ಶರ್ಮಾ, ಧ್ರುವ್ ನಾರಂಗ್, ನಿಹಿತ್ ಭಾವೆ, ಪೂಜಾ ತೊಲಾನಿ.

  English summary
  Fake casting call advertisement for Sacred Games 3 web series. advertisement says must ok with bold scenes. Sacred Games director Anurag Kashyap says he will file FIR.
  Monday, January 17, 2022, 18:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X