Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಡುಗಡೆಯಾದ ಎಂಟೇ ದಿನಕ್ಕೆ ಓಟಿಟಿಗೆ ಬಂತು ವಿನಯ್ ರಾಜ್‌ಕುಮಾರ್ ಹೊಸ ಸಿನಿಮಾ!
ಕನ್ನಡ ಚಿತ್ರರಂಗ ಈ ವರ್ಷ ಇತರೆ ಯಾವ ಚಿತ್ರರಂಗಗಳೂ ಸಹ ಗಳಿಸದಂತಹ ಯಶಸ್ಸನ್ನು ಗಳಿಸಿದೆ. ಐದು ನೂರು ಕೋಟಿ ಕಲೆಕ್ಷನ್ ಮಾಡಿದ ಚಿತ್ರಗಳನ್ನು ನೀಡಿರುವ ಕನ್ನಡ ಚಿತ್ರರಂಗ ಇಡೀ ದೇಶದಲ್ಲೇ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರವನ್ನೂ ಸಹ ಹೊಂದಿದೆ. ಹೀಗೆ ಕನ್ನಡದ ಚಿತ್ರಗಳು ಇಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲು ಕಾರಣ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಹಾಗೂ ಅಬ್ಬರದ ಪ್ರಚಾರ.
ಹೌದು, ಸಿನಿಮಾವೊಂದು ಗೆಲ್ಲಬೇಕೆಂದರೆ ಕತೆ ಅದ್ಭುತವಾಗಿದ್ದರೆ ಮಾತ್ರ ಸಾಲುವುದಿಲ್ಲ, ಪ್ರಚಾರವೂ ಸಹ ಬೇಕು. ಒಳ್ಳೆಯ ಪ್ರಚಾರ ಮಾಡಿ, ಎಲ್ಲೆಡೆ ಒಳ್ಳೆಯ ಚಿತ್ರಮಂದಿರಗಳಿಗೆ ಚಿತ್ರವನ್ನು ತಲುಪಿಸಿದ ನಂತರವಷ್ಟೇ ನಿರ್ಮಾಪಕರು ಹಾಗೂ ವಿತರಕರು ಜನರು ಚಿತ್ರವನ್ನು ವೀಕ್ಷಿಸಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯನ್ನು ತಮ್ಮಲ್ಲಿ ಹುಟ್ಟಿಸಿಕೊಳ್ಳಬಹುದು, ಈ ಕೆಲಸಗಳನ್ನು ಮಾಡದೆಯೇ ಎಂತಹ ಒಳ್ಳೆಯ ಕತೆಯನ್ನು ತೆರೆ ಮೇಲೆ ತಂದರೂ ಸಹ ಕೊನೆಗೆ ಸಿಗುವುದು ಸೋಲು ಮಾತ್ರ.
ಭಾರತದ
ಎರಡು
ಸಿನಿಮಾ,
ಎರಡು
ಡಾಕ್ಯುಮೆಂಟರಿ
ಆಸ್ಕರ್‌ಗೆ
ಶಾರ್ಟ್
ಲಿಸ್ಟ್!
ಶೀಘ್ರವೇ
ಸಿಹಿ
ಸುದ್ದಿ
ಹೀಗೆ ಸರಿಯಾದ ಪ್ರಚಾರವಿಲ್ಲದೇ, ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ತೆರೆ ಕಂಡು ಹೀನಾಯವಾಗಿ ಸೋತ ಹಲವಾರು ಚಿತ್ರಗಳನ್ನು ನಾವು ನೀವೆಲ್ಲಾ ಕಂಡಿದ್ದೇವೆ. ಈ ಸಾಲಿಗೆ ಇದೀಗ ನೂತನವಾಗಿ ಸೇರ್ಪಡೆಗೊಂಡಿರುವುದು ವಿನಯ್ ರಾಜ್‌ಕುಮಾರ್ ನಟನೆಯ 'ಟೆನ್' ಎಂಬ ಕನ್ನಡ ಚಿತ್ರ. ಚಿತ್ರರಂಗದ ದಿನನಿತ್ಯದ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳದವರಿಗೆ ವಿನಯ್ ರಾಜ್‌ಕುಮಾರ್ ಈ ಹೆಸರಿನ ಸಿನಿಮಾವನ್ನು ಯಾವಾಗ ಮಾಡಿದ್ರು ಎನ್ನಿಸಬಹುದು. ಅಷ್ಟರ ಮಟ್ಟಿಗೆ ಪ್ರಚಾರವಿಲ್ಲದೇ ಚಿತ್ರಮಂದಿರಕ್ಕೆ ಬಂದಿತ್ತು ಈ ಚಿತ್ರ.

ಎಂಟೇ ದಿನಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಟೆನ್!
ಇನ್ನು ವಿನಯ್ ರಾಜ್‌ಕುಮಾರ್ ನಟನೆಯ ಟೆನ್ ಚಿತ್ರ ಕಳೆದ ಶುಕ್ರವಾರ ಅಂದರೆ ಡಿಸೆಂಬರ್ 16ರಂದು ಬಿಡುಗಡೆಗೊಂಡಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರಕ್ಕೆ ಕರ್ಮ್ ಚಾವ್ಲಾ ನಿರ್ದೇಶನವಿದ್ದರೆ, ಪುಷ್ಕರ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ವಿನಯ್ ರಾಜ್‌ಕುಮಾರ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದ ಈ ಚಿತ್ರ ಎಂಟೇ ದಿನಕ್ಕೆ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದೆ. ಇಂದಿನಿಂದ ( ಡಿಸೆಂಬರ್ 23 ) ಅಮೆಜಾನ್ ಪ್ರೈಮ್‌ನಲ್ಲಿ ಚಿತ್ರ ವೀಕ್ಷಿಸಲು ಲಭ್ಯವಿದ್ದು, ಚಿತ್ರಮಂದಿರದಲ್ಲಿ ನೋಡದವರು ಚಿತ್ರವನ್ನು ಮೊಬೈಲ್ ಪರದೆ ಮೇಲೆಯೇ ನೋಡಬಹುದಾಗಿದೆ.

ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್
ಇನ್ನು ಇಷ್ಟು ಬೇಗ ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರ ಓಟಿಟಿಗೆ ಬಂದದ್ದಕ್ಕೆ ರಾಜ್‌ವಂಶದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ಮಾಪಕರು ಸರಿಯಾದ ಪ್ರಚಾರ ಮಾಡದೇ ಇದ್ದದ್ದೇ ಇದಕ್ಕೆಲ್ಲಾ ಕಾರಣ ಎಂದಿರುವ ಅಭಿಮಾನಿಗಳು ಇನ್ನೊಮ್ಮೆ ಇಂತಹ ತಂಡದ ಜತೆ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಚಿತ್ರದ ಹಿನ್ನಡೆಗೆ ಕಾರಣವೇನು?
ಅಭಿಮಾನಿಗಳು ಹೇಳಿದಂತೆ ಚಿತ್ರದ ಪ್ರಚಾರವನ್ನು ನಿರ್ಮಾಪಕರು ಮಾಡಲೇ ಇಲ್ಲ. ಚಿತ್ರ 16ರಂದು ಬಿಡುಗಡೆಯಾಗಲಿದೆ ಎಂಬ ವಿಷಯವನ್ನು ಇನ್ನೆರಡು ದಿನ ಇರುವಾಗ ತಿಳಿಸಿದ ನಿರ್ಮಾಪಕರು ಕೆಜಿ ರಸ್ತೆಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲೇ ಇಲ್ಲ. ಕೆಜಿ ರಸ್ತೆ ಬಿಡಿ, ಬೆಂಗಳೂರಿನ ಇತರೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಹ ಟೆನ್ ಚಿತ್ರ ಬಿಡುಗಡೆಯಾಗಿರಲಿಲ್ಲ. ಕೆಲವೊಂದಷ್ಟು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಿದ್ದ ನಿರ್ಮಾಪಕರು ರಾಜ್ಯದ ಹಲವು ಪ್ರಮುಖ ನಗರಗಳಿಗೇ ಚಿತ್ರವನ್ನು ತಲುಪಿಸಿರಲಿಲ್ಲ. ರಾಜ್ಯಾದ್ಯಂತ ಸುಮಾರು ಮೂವತ್ತು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿತ್ತಷ್ಟೇ. ಹೀಗೆ ಸರಿಯಾದ ರೀತಿ ಪ್ರಚಾರ ಮಾಡದೇ, ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡದೇ ಇದ್ದದ್ದೇ ಚಿತ್ರದ ಹಿನ್ನಡೆಗೆ ಕಾರಣ.

ಪ್ರಚಾರಕ್ಕೆ ದುಡ್ಡಿಲ್ಲ ಎಂದಿದ್ರು ನಿರ್ದೇಶಕರು
ಇನ್ನು ಚಿತ್ರ ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದ ಟೆನ್ ಚಿತ್ರದ ನಿರ್ದೇಶಕ ಕರ್ಮ್ ಚಾವ್ಲಾ ಪ್ರಚಾರ ಮಾಡಲು ದುಡ್ಡಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದರು. ಈ ವಿಷಯ ತುಸು ವೈರಲ್ ಕೂಡ ಆಗಿತ್ತು. ಇಂಡಸ್ಟ್ರಿಗೆ ತಲೆಮಾರುಗಳಿಂದ ಕೊಡುಗೆ ನೀಡುತ್ತಾ ಬಂದಿರುವ ಕುಟುಂಬದ ಯುವ ನಟನ ಚಿತ್ರಕ್ಕೆ ಇಷ್ಟರ ಮಟ್ಟಕ್ಕೆ ನಿರ್ಲಕ್ಷ್ಯ ತೋರಿದ್ದು ಸದ್ಯ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.