For Quick Alerts
  ALLOW NOTIFICATIONS  
  For Daily Alerts

  ಜಸ್ವಂತ್- ಸಾನ್ಯಾ ಸಮಾಚಾರ, ನಂದಿನಿ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಳು ಸಾನ್ಯಾ!

  |

  ಬಿಗ್ ಬಾಸ್ ಮನೆ ಎಂದ ಮೇಲೆ ಜಗಳ, ಕದನ, ಸ್ನೇಹ, ಪ್ರೀತಿ, ಮುನಿಸು ಇದ್ದಿದೆ. ಕೆಲವೊಮ್ಮೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧೆಗಳ ನಡುವೆ ದೊಡ್ಡಮಟ್ಟದಲ್ಲಿ ಜಗಳವಾದರೆ, ಮತ್ತೊಮ್ಮೆ ಒಳಗೊಳಗೆ ಮುನಿಸು ಮಾಡಿಕೊಂಡು ಮುಖ ತಿರುಗಿಸಿಕೊಂಡಿರುತ್ತಾರೆ.

  ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿ ಎದುರಾಗುವಂಥ ಸಂದರ್ಭಗಳು. ಇಲ್ಲಿ ಸ್ನೇಹಿತರಾದರು ವೈರಿಗಳಾಗುತ್ತಾರೆ. ವೈರಿಗಳಾದವರು ಸ್ನೇಹಿತರಾಗುತ್ತಾರೆ. ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇದು ಸ್ಪರ್ಧಿಗಳ ನಿಜ ಗುಣವನ್ನು ಹೊರುವ ಕಾರ್ಯಕ್ರಮ ಹಾಗಾಗಿ ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ.

  BBK OTT : ಬಿಗ್ ಬಾಸ್ ಮನೆಯಲ್ಲಿ ದೆವ್ವ, ಹೆದರಿದ ಆರ್ಯವರ್ಧನ್ ಗುರುಜೀ!BBK OTT : ಬಿಗ್ ಬಾಸ್ ಮನೆಯಲ್ಲಿ ದೆವ್ವ, ಹೆದರಿದ ಆರ್ಯವರ್ಧನ್ ಗುರುಜೀ!

  ಸದ್ಯ ಕನ್ನಡದ ಬಿಗ್ ಬಾಸ್ ಸೀಸನ್ 1 ಒಟಿಟ ಪ್ರಸಾರವಾಗುತ್ತಿದೆ. ಈ ಸೀಸನ್‌ನಲ್ಲಿ ಕೂಡ ಹಲವು ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಭಾಗಿಯಾಗಿದ್ದು ಜಗಳ, ಮುನಿಸು, ಸ್ನೇಹ, ಪ್ರೀತಿ ಇದೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿದೆ. ಈ ವಿಚಾರದಲ್ಲಿ ಇದೀಗ ಸದ್ದು ಮಾಡುತ್ತಿರುವುದು ನಂದಿನಿ , ಜಸ್ವಂತ್ ಮತ್ತು ಸಾನಿಯಾ.

  ನಂದಿನಿ ಮಾತಿನಿಂದ ಸಾನ್ಯಾ ಕಣ್ಣೀರು!

  ನಂದಿನಿ ಮಾತಿನಿಂದ ಸಾನ್ಯಾ ಕಣ್ಣೀರು!

  ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ನಂದಿನಿ ಮತ್ತು ಜಸ್ವಂತ್ ನಡುವೆ ಸಾನ್ಯಾ ಬಗ್ಗೆ ಕೆಲವು ವಿಚಾರಗಳನ್ನು ಸ್ಪರ್ಧಿಗಳು ಮಾತನಾಡಿದ್ದಾರೆ. ಈ ವಿಚಾರವಾಗಿ ಉದಯ್ ಕೂಡ ಮಾತನಾಡಿದ್ದರು, ಹಾಗಾಗಿ ವಿಕೆಂಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಪ್ರಸ್ತಾಪಿಸಬೇಕಾಗಿತ್ತು. ಉದಯ್ ಸೂರ್ಯ ಕೂಡ ಸಾನ್ಯಾ, ಜಸ್ವಂತ್ ಬಗ್ಗೆ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಉದಯ್ ತನ್ನ ಹೇಳಿಕೆಯನ್ನು ಸ್ಪಷ್ಟ ಪಡಿಸಿದ ಬಳಿಕ ಈ ವಿಚಾರ ಅಲ್ಲಿಗೆ ಮುಗಿದುಹೋಗಿತ್ತು. ಆದರೆ ಈಗ ಈ ವಿಚಾರವನ್ನು ಮತ್ತೆ ನಂದಿನಿ ಪ್ರಸ್ತಾಪ ಮಾಡಿದ್ದು ಸಾನ್ಯಾಗೆ ನೋವುಂಟು ಮಾಡಿದೆ. ನೀವು ಇಬ್ಬರು ಹೆಚ್ಚು ಸಮಯ ಕಳೆಯುವುದರಿಂದ ಮನೆಯಲ್ಲಿ ಈ ರೀತಿ ಮಾತುಗಳು ಬರುತ್ತವೆ ಎನ್ನುವ ಅರ್ಥದಲ್ಲಿ ನಂದಿನಿ ಸಾನ್ಯಾಗೆ ಹೇಳುತ್ತಾರೆ. ಇದರಿಂದ ಸಾನ್ಯಾ ನೊಂದು ಕಣ್ಣೀರು ಹಾಕುತ್ತಾರೆ.

  ಬಿಕ್ಕಿ ಬಿಕ್ಕಿ ಅತ್ತ ಸಾನ್ಯಾ!

  ಬಿಕ್ಕಿ ಬಿಕ್ಕಿ ಅತ್ತ ಸಾನ್ಯಾ!

  ಸಾನ್ಯಾ ಕಣ್ಣೀರು ಹಾಕುತ್ತಿರುವಾಗ ನಂದಿನಿ ಬಂದು ಸಮಾಧಾನ ಮಾಡುತ್ತಾಳೆ. ಗುರೂಜಿ ಹೇಳಿದ ಮಾತಿನಿಂದಾಗಿ ಈ ಮಾತನ್ನು ನಾನು ನಿನಗೆ ಹೇಳಬೇಕಾಯಿತು ಎಂದು ಸಾನ್ಯಾ ಬಳಿ ನಂದಿನಿ ಸ್ಪಷ್ಟಪಡಿಸುತ್ತಾಳೆ. ಹಿಂದಿನ ದಿನ ರಾತ್ರಿ ನಂದಿನಿ ಜಸ್ವಂತ್‌ಗಾಗಿ ಕಾಯುತ್ತಾ ಕುಳಿತಿರುತ್ತಾಳೆ. ಆದರೆ ಗುರೂಜಿ ಮಲಗು ಇವತ್ತು ನೀನು ಒಬ್ಬಳೇ ಅವರು ಬರುವುದಿಲ್ಲ ಎಂದು ಹೇಳಿದರು ಎಂದು ನಂದಿನಿ ಸಾನ್ಯಾಗೆ ಹೇಳುತ್ತಾಳೆ. ಈ ಚರ್ಚೆಯ ಬಳಿಕ ಸಾನ್ಯಾ ಸಮಾಧಾನ ಮಾಡಿಕೊಳ್ಳುತ್ತಾಳೆ. ಅಲ್ಲಿಂದ ನಂದಿನಿ ಮತ್ತು ಜಸ್ವಂತ್ ಚರ್ಚೆಯನ್ನು ಮುಂದುವರೆಸುತ್ತಾರೆ.

  ಜಸ್ವಂತ್, ನಂದಿನಿಗೆ ಸಮಯ ಕೊಡುತ್ತಿಲ್ಲವಂತೆ!

  ಜಸ್ವಂತ್, ನಂದಿನಿಗೆ ಸಮಯ ಕೊಡುತ್ತಿಲ್ಲವಂತೆ!

  ಮಾತು ಮುಂದುವರಿಸಿದ ನಂದಿನಿ ಮತ್ತು ಜಸ್ವಂತ್ ಒಬ್ಬರಿಗೊಬ್ಬರು ಸ್ಪಷ್ಟನೆ ನೀಡಲು ಮುಂದಾಗುತ್ತಾರೆ. ಜಸ್ವಂತ್ ಹೇಳುವ ಮಾತು ನಂದಿನಿ ಒಂದು ರೀತಿಯಲ್ಲಿ ಅರ್ಥಮಾಡಿಕೊಂಡರೆ, ನಂದಿನಿ ಹೇಳುವುದನ್ನು ಜಸ್ವಂತ್ ಬೇರೆ ರೀತಿಯಲ್ಲಿ ಅರ್ಥಮಾಡಿಕೊಂಡ ಎಂದು ನಂದಿನಿ ಮುನಿಸಿಕೊಳ್ಳುತ್ತಾರೆ. ಕೊನೆಗೆ ಮಾತು ನಿಲ್ಲಿಸಿ ನಂದಿನಿ ಅಲ್ಲಿಂದ ಹೋಗಿ ಮುಖಕ್ಕೆ ಟವಲ್ ಹಿಡಿದು ಅಳಲು ಶುರುಮಾಡುತ್ತಾರೆ. ಜಸ್ವಂತ್ ಮೇಲೆ ನನಗೆ ಡೌಟ್ ಇದೆ ಎಂದು ಅವನಿಗೆ ಅನಿಸಬಾರದು ಎಂದು, ನಂದಿನಿ, ಸಾನ್ಯಾ ಬಳಿ ಹೇಳುತ್ತಾರೆ. ಈ ಹೇಳಿಕೆಯಿಂದ ಇವರ ಚರ್ಚೆ ಕೂಡ ಖಾರವಾಗಿಯೇ ಶುರುವಾಗುತ್ತದೆ. ಇನ್ನು ನಂದಿನಿ 'ನೀನು ನನಗೆ ಸಮಯ ಕೊಡುವುದಿಲ್ಲ, ಮನೆಯವರು ಹೇಳುವ ಮಾತುಗಳು ನನಗೆ ಖಂಡಿತವಾಗಿಯೂ ಮ್ಯಾಟರ್ ಆಗುತ್ತೆ' ಎಂದು ಖಾರವಾಗಿಯೇ ಹೇಳಿ ಹೊರಡುತ್ತಾರೆ.

  ನಂದಿಗೆ ಸಮಾಧಾನ ಆದಂತಿಲ್ಲ!

  ನಂದಿಗೆ ಸಮಾಧಾನ ಆದಂತಿಲ್ಲ!

  ಇಷ್ಟೆಲ್ಲಾ ಆದ ಬಳಿಕ ಸಾನ್ಯಾ, ಅಳುತ್ತಾ ಇರುವ ನಂದಿನಿಯನ್ನು ಸಮಾಧಾನ ಮಾಡಿ ಅಲ್ಲಿಂದ ಕರೆದುಕೊಂಡು ಸೋಫಾ ಮೇಲೆ ಕೂತು, ಮನೆಯಲ್ಲಿ ನನ್ನ ಬಗ್ಗೆ ಯಾರೆಲ್ಲ ಏನೇನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಕೇಳುತ್ತಾಳೆ. ಆಗ ನಂದಿನಿ ಗುರೂಜಿ ಮತ್ತು ಸೋಮಣ್ಣ ಅವರಿಂದ ಬಂದ ಕಮೆಂಟ್‌ಗಳನ್ನು ಸಾನ್ಯಾ ಬಳಿ ಹೇಳುತ್ತಾಳೆ. ಬಳಿಕ ಹೀಗೆಲ್ಲ ಆದರೆ ನಂದಿನಿಗೆ ನನ್ನ ಮೇಲೆ ಡೌಟ್ ಇದೆ. ಸ್ವಂತ ತಿಳಿದುಕೊಳ್ಳುತ್ತಾನೆ ಎನ್ನುವ ಕಾರಣಕ್ಕೆ ಇದನ್ನು ನಾನು ನಿಮಗೆ ಹೇಳಬೇಕಾಯಿತು ಎಂದು ಹೇಳುತ್ತಾಳೆ. ಅಲ್ಲಿಗೆ 3 ಪರಸ್ಪರ ಮಾತನಾಡಿಕೊಂಡು ಸದ್ಯಕ್ಕೆ ಸಮಾಧಾನವಾಗಿದ್ದಾರೆ. ಆದರೆ ನಂದಿನಿ ಮನಸ್ಸು ತಿಳಿಯಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿಲ್ಲ. ಹಾಗಾಗಿ ಈ ವಿಚಾರ ಮತ್ತೇ ಯಾವಾಗ ಬೇಕಾದರೂ ಸಿಡಿಯಬಹುದು.

  English summary
  Fight between Nandini Jaswanth over Sanya issue at Bigg Boss Kannada Ott, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X