twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಈ ಚಿತ್ರಗಳು ಯಾವಾಗ, ಯಾವ ಓಟಿಟಿಯಲ್ಲಿ ಬಿಡುಗಡೆಯಾಗಲಿವೆ? ಇಲ್ಲಿದೆ ವಿವರ

    |

    ಡಾಲಿ ಧನಂಜಯ್ ಅಭಿನಯದ ಒಟ್ಟು ಐದು ಚಿತ್ರಗಳು ಈ ವರ್ಷ ಬಿಡುಗಡೆಗೊಂಡಿದ್ದು, ವರ್ಷಾಂತ್ಯದಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರ ತೆರೆಗೆ ಅಪ್ಪಳಿಸಲಿದೆ. ಮೊದಲಿಗೆ ಎಕ್ಸ್ಪರಿಮೆಂಟಲ್ 'ಟ್ವೆಂಟಿ ಒನ್ ಅವರ್ಸ್' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ ಡಾಲಿ ಧನಂಜಯ್ ಈ ಚಿತ್ರದ ಮೂಲಕ ಹೇಳಿಕೊಳ್ಳುವಂತಹ ಯಶಸ್ಸನ್ನೇನೂ ಪಡೆಯಲಿಲ್ಲ. ಈ ಚಿತ್ತ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.

    ಇನ್ನು ಈ ಚಿತ್ರದ ನಂತರ ಶಿವ ರಾಜ್‌ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದ 'ಬೈರಾಗಿ' ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು. ತಮಿಳಿನ 'ಕಡುಗು' ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರವೂ ಸಹ ನಿರೀಕ್ಷಿಸಿದ ಫಲಿತಾಂಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಈ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸುವವರು ವೂಟ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

    ಈ ಎರಡು ಚಿತ್ರಗಳ ಬಳಿಕ ಬಿಡುಗಡೆಗೊಂಡ ಡಾಲಿ ಧನಂಜಯ್ ಅಭಿನಯದ ಮಾನ್ಸೂನ್ ರಾಗ, ತೋತಾಪುರಿ ಹಾಗೂ ಹೆಡ್ ಬುಷ್ ಚಿತ್ರಗಳು ಇನ್ನೂ ಸಹ ಓಟಿಟಿಗೆ ಲಗ್ಗೆ ಇಡಬೇಕಿದ್ದು, ಧನಂಜಯ್ ಅಭಿನಯಿಸಿರುವ ಈ ಮೂರೂ ಚಿತ್ರಗಳ ಓಟಿಟಿ ಪ್ರಸಾರ ಡಿಸೆಂಬರ್ ತಿಂಗಳಿನಲ್ಲಿಯೇ ಆಗಲಿದೆ. ಈಗಾಗಲೇ ಮಾನ್ಸೂನ್ ರಾಗ ಚಿತ್ರದ ಓಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇನ್ನುಳಿದ ಚಿತ್ರಗಳಾದ ಹೆಡ್ ಬುಷ್ ಹಾಗೂ ತೋತಾಪುರಿ ಯಾವಾಗ ಓಟಿಟಿಯಲ್ಲಿ ಪ್ರಸಾರವಾಗಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

    ಮಾನ್ಸೂನ್ ರಾಗ

    ಮಾನ್ಸೂನ್ ರಾಗ

    ಕನ್ನಡ ಸಿನಿ ರಸಿಕರು ಇತ್ತೀಚೆಗಿನ ದಿನಗಳಲ್ಲಿ ರಿಮೇಕ್ ಚಿತ್ರಗಳಿಗೆ ಹೆಚ್ಚೇನೂ ಒಲವನ್ನು ತೋರಿಸುವುದಿಲ್ಲ ಎನ್ನುವುದಕ್ಕೆ ಮಾನ್ಸೂನ್ ರಾಗ ಚಿತ್ರ ಕೂಡ ಉದಾಹರಣೆ ಎಂದೇ ಹೇಳಬಹುದು. ಹೌದು, ತೆಲುಗಿನಲ್ಲಿ ಬೃಹತ್ ಪ್ರಶಂಸೆ ಗಿಟ್ಟಿಸಿಕೊಂಡಿದ್ದ 'ಕೇರ್ ಆಫ್ ಕಾಂಚೆರಪಾಲೆಂ' ಎಂಬ ಚಿತ್ರದ ರಿಮೇಕ್ ಆಗಿದ್ದ ಮಾನ್ಸೂನ್ ರಾಗ ಚಿತ್ರವನ್ನು ಎಲ್ಲಿಯೂ ಸಹ ಇದೊಂದು ರಿಮೇಕ್ ಚಿತ್ರ ಎಂಬ ವಿಷಯವನ್ನು ಬಿಚ್ಚಿಡದೇ ಬಿಡುಗಡೆ ಮಾಡಲಾದರೂ ಚಿತ್ರ ನಿರೀಕ್ಷಿಸಿದ ಗೆಲುವನ್ನು ಪಡೆಯಲಿಲ್ಲ. ತೆಲುಗಿನಲ್ಲಿಯೂ ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿ ಗೆದ್ದಿದ್ದರಿಂದ ಮಾನ್ಸೂನ್ ರಾಗ ಕೂಡ ಓಟಿಟಿಯಲ್ಲಿ ತುಸು ಪ್ರಶಂಸೆ ಪಡೆದುಕೊಳ್ಳಬಹುದಾದ ಸಾಧ್ಯತೆಗಳಿವೆ. ಮಾನ್ಸೂನ್ ರಾಗ ಚಿತ್ರ ಇದೇ ಡಿಸೆಂಬರ್ 9ರಂದು 'ಜೀ 5'ನಲ್ಲಿ ಪ್ರಸಾರವಾಗಲಿದೆ. ದಿನಾಂಕವನ್ನು ಜೀ 5 ಅಧಿಕೃತವಾಗಿ ಸಹ ಘೋಷಿಸಿದೆ.

    ಹೆಡ್ ಬುಷ್

    ಹೆಡ್ ಬುಷ್

    ಎಂಪಿ ಜಯರಾಜ್ ಬಯೋಪಿಕ್ ಎಂಬ ಕಾರಣಕ್ಕೆ ಹೈಪ್ ಗಿಟ್ಟಿಸಿಕೊಂಡಿದ್ದ ಹೆಡ್ ಬುಷ್ ಚಿತ್ರವೂ ಸಹ ಹುಟ್ಟುಹಾಕಿದ್ದಷ್ಟು ನಿರೀಕ್ಷೆಯನ್ನು ತಲುಪಲಿಲ್ಲ ಎಂದೇ ಹೇಳಬಹುದು. ಚಿತ್ರ ಹಿಟ್ ಆಗಲಿದೆ ಎನ್ನುವ ಸಮಯಕ್ಕೆ ಉಂಟಾದ ವೀರಗಾಸೆ ವಿವಾದ ಚಿತ್ರಕ್ಕೆ ಹಿನ್ನಡೆಯನ್ನು ಉಂಟುಮಾಡಿತು. ಅಲ್ಲದೇ ಚಿತ್ರದಲ್ಲಿ ಕರಗದ ಬಗ್ಗೆ ಇದ್ದ ಸಂಭಾಷಣೆ ಕೂಡ ವಿವಾದಕ್ಕೊಳಗಾಗಿ ಮತ್ತೊಂದು ಹಿನ್ನಡೆಯನ್ನು ಚಿತ್ರತಂಡ ಅನುಭವಿಸಿತು. ಹೀಗೆ ಕೆಲ ಅಡ್ಡಿಗಳಿಂದಾಗಿ ನಿರೀಕ್ಷಿಸಿದ ರೀತಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದ ಹೆಸ್ ಬುಷ್ ಚಿತ್ರ ಕೂಡ ಜೀ 5 ಅಪ್ಲಿಕೇಶನ್‌ನಲ್ಲಿ ಓಟಿಟಿ ಬಿಡುಗಡೆಯಾಗಲಿದೆ. ಇನ್ನು ಡಿಸೆಂಬರ್ 23ರಂದು ಹೆಡ್ ಬುಷ್ ಓಟಿಟಿಯಲ್ಲಿ ವೀಕ್ಷಿಸಲು ಲಭ್ಯ ಎಂಬ ಮಾಹಿತಿ ಇದ್ದು, ಜೀ ಫೈವ್ ಅಧಿಕೃತ ಘೋಷಣೆ ಬಾಕಿ ಇದೆ.

    ತೋತಾಪುರಿ

    ತೋತಾಪುರಿ

    ಇನ್ನು ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೋತಾಪುರಿ ಚಿತ್ರ ಕೂಡ ಇದೇ ಡಿಸೆಂಬರ್‌ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದ ಡಿಜಿಟಲ್ ಹಕ್ಕೂ ಸಹ ಜೀ ಫೈವ್ ಅಪ್ಲಿಕೇಶನ್‌ನ ಪಾಲಾಗಿದೆ. ನವೆಂಬರ್ ತಿಂಗಳಲ್ಲೇ ಓಟಿಟಿಗೆ ಬರಬೇಕಿದ್ದ ತೋತಾಪುರಿ ಈ ತಿಂಗಳು ಬರುವುದು ಖಚಿತ ಎನ್ನಲಾಗಿದ್ದು, ದಿನಾಂಕ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

    English summary
    List of kannada films releasing on OTT in December 2022 and OTT platform details. Take a look
    Monday, December 5, 2022, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X