For Quick Alerts
  ALLOW NOTIFICATIONS  
  For Daily Alerts

  ವರ್ಷಕ್ಕೆ ನೆಟ್‌ಫ್ಲಿಕ್ಸ್‌ ಗಳಿಸುವ ಒಟ್ಟು ಆದಾಯ ಎಷ್ಟು ಗೊತ್ತೆ?

  |

  ಇದು ಒಟಿಟಿಗಳ ಜಮಾನಾ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಹಣ, ಸಮಯ ವ್ಯರ್ಥ ಎನ್ನುವವರು ದೇಶ, ವಿದೇಶ, ವಿವಿಧ ಭಾಷೆಗಳ ಸಿನಿಮಾಗಳನ್ನು ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿಯಲ್ಲಿಯೇ ನೋಡುವ ಸೌಕರ್ಯವನ್ನು ಈ ಒಟಿಟಿಗಳು ನೀಡುತ್ತಿವೆ.

  Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

  ಒಟಿಟಿಗಳಲ್ಲಿ ಎಲ್ಲದಕ್ಕಿಂತಲೂ ಮುಂಚೂಣಿಯಲ್ಲಿರುವುದು ನೆಟ್‌ಫ್ಲಿಕ್ಸ್‌. ನಂತರದ ಸ್ಥಾನ ಅಮೆಜಾನ್ ಪ್ರೈಂ, ವೂಟ್, ಸನ್‌ ಎಕ್ಸ್‌ ಮುಂತಾದವುಗಳು. ಬೇರೆ ಬೇರೆ ದೇಶದಲ್ಲಿ ಬೇರೆಯ ಒಟಿಟಿಗಳು ಚಾಲ್ತಿಯಲ್ಲಿವೆ. ಆದರೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಂ ಬಹುತೇಕ ಎಲ್ಲಾ ಕಡೆ ಇದೆ.

  ಒಟಿಟಿ ದುನಿಯಾದಲ್ಲಿ ನೆಟ್‌ಫ್ಲಿಕ್ಸ್‌ ದೈತ್ಯ. ನೆಟ್‌ಫ್ಲಿಕ್ಸ್‌ ಅನ್ನು ಬಳಸುವವರ ಒಟ್ಟು ಸಂಖ್ಯೆ 18.18 ಕೋಟಿ! ಕರ್ನಾಟಕ ಜನಸಂಖ್ಯೆಯ ಮೂರರಷ್ಟು ಜನ ನೆಟ್‌ಫ್ಲಿಕ್ಸ್‌ ಖಾತೆ ಹೊಂದಿದ್ದಾರೆ. ಹಾಗಿದ್ದರೆ ನೆಟ್‌ಫ್ಲಿಕ್ಸ್‌ ವರ್ಷಕ್ಕೆ ಗಳಿಸುವ ಆದಾಯವೆಷ್ಟು?

  1997 ರಲ್ಲಿ ಪ್ರಾರಂಭವಾದ ನೆಟ್‌ಫ್ಲಿಕ್ಸ್‌

  1997 ರಲ್ಲಿ ಪ್ರಾರಂಭವಾದ ನೆಟ್‌ಫ್ಲಿಕ್ಸ್‌

  1997 ರಲ್ಲಿ ಪ್ರಾರಂಭವಾದ ನೆಟ್‌ಫ್ಲಿಕ್ಸ್‌ ಅಂತರರಾಷ್ಟ್ರೀಯವಾಗಿ ತನ್ನ ಸೇವೆ ವಿಸ್ತರಿಸಿದ್ದು 2010 ರಲ್ಲಿ ಅಲ್ಲಿಯವರೆಗೆ ನೆಟ್‌ಫ್ಲಿಕ್ಸ್‌ ಕೇವಲ ಅಮೆರಿಕದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ಹತ್ತು ವರ್ಷಗಳಲ್ಲಿ ನೆಟ್‌ಫ್ಲಿಕ್ಸ್‌ ಏರಿದ ಎತ್ತರ ಅಸಾಮಾನ್ಯ. ಗಳಿಸಿದ ಹಣ ಅಗಣಿತ.

  ಏರುತ್ತಲೇ ಇದೆ ನೆಟ್‌ಫ್ಲಿಕ್ಸ್ ಆದಾಯ

  ಏರುತ್ತಲೇ ಇದೆ ನೆಟ್‌ಫ್ಲಿಕ್ಸ್ ಆದಾಯ

  ಕಳೆದ ಹತ್ತು ವರ್ಷಗಳಲ್ಲಿ ನೆಟ್‌ಫ್ಲಿಕ್ಸ್‌ನ ಆದಾಯ ಏರುತ್ತಲೇ ಇದೆ. ಕೊರೊನಾ ಸಂಕಷ್ಟವಂತೂ ನೆಟ್‌ಫ್ಲಿಕ್ಸ್‌ಗೆ ವರವಾಗಿಯೇ ಪರಿಣಮಿಸಿತು. ಕೊರೊನಾ ಸ್ಥಿತಿ ಬಂದ ನಂತರ ನೆಟ್‌ಫ್ಲಿಕ್ಸ್‌ ಆದಾಯ ಹಾಗೂ ನೆಟ್‌ಫ್ಲಿಕ್ಸ್‌ ಬಳಸುವವರ ಸಂಖ್ಯೆಯಲ್ಲಿ ಭಾರಿ ಮೊತ್ತದ ಏರಿಕೆಯಾಗಿದೆ.

  2006 ರಲ್ಲಿ ಇದ್ದ ಆದಾಯ 2010 ಕ್ಕೆ ಡಬಲ್!

  2006 ರಲ್ಲಿ ಇದ್ದ ಆದಾಯ 2010 ಕ್ಕೆ ಡಬಲ್!

  2006 ರಲ್ಲಿ ಕೇವಲ 1025 ಮಿಲಿಯನ್ ಯುಎಸ್ ಡಾಲರ್ ಇದ್ದ ನೆಟ್‌ಫ್ಲಿಕ್ಸ್‌ ಆದಾಯ 2010 ರಲ್ಲಿ 2163 ಮಿಲಿಯನ್ ಡಾಲರ್ ಗೆ ಏರಿಕೆಯಾಯಿತು. ಭಾರತೀಯ ರುಪಾಯಿಯಲ್ಲಿ ಪರಿವರ್ತಿಸಿ ಹೇಳುವುದಾದರೆ 2010 ರಲ್ಲಿ ನೆಟ್‌ಫ್ಲಿಕ್ಸ್‌ ಆದಾಯ 16 ಸಾವಿರ ಕೋಟಿ ರುಪಾಯಿ ಇತ್ತು.

  2019 ರಲ್ಲಿ ಭಾರಿ ದೊಡ್ಡ ಲಾಭ ಗಳಿಸಿದೆ

  2019 ರಲ್ಲಿ ಭಾರಿ ದೊಡ್ಡ ಲಾಭ ಗಳಿಸಿದೆ

  ಕಳೆದ ವರ್ಷ ಅಂದರೆ 2019 ರಲ್ಲಿ ನೆಟ್‌ಫ್ಲಿಕ್ಸ್‌ ಈವರೆಗಿನ ಅತಿ ಹೆಚ್ಚಿನ ಆದಾಯವನ್ನು ಗಳಿಸಿದೆ. ಭಾರತೀಯ ರುಪಾಯಿಯ ಪ್ರಕಾರ 15 ಲಕ್ಷ ಕೋಟಿಗೂ ಹೆಚ್ಚು (20,156 ಮಿಲಿಯನ್ ಯುಎಸ್ ಡಾಲರ್) ಆದಾಯವನ್ನು ನೆಟ್‌ಫ್ಲಿಕ್ಸ್‌ ಗಳಿಸಿದೆ. ಅದೂ ಕೇವಲ ಒಂದು ವರ್ಷದಲ್ಲಿ!

  2020 ನೆಟ್‌ಫ್ಲಿಕ್ಸ್‌ ಪಾಲಿನ ಲಾಭದಾಯಕ ವರ್ಷವಾಗಲಿದೆ

  2020 ನೆಟ್‌ಫ್ಲಿಕ್ಸ್‌ ಪಾಲಿನ ಲಾಭದಾಯಕ ವರ್ಷವಾಗಲಿದೆ

  ಒಂದು ಅಂದಾಜಿನ ಪ್ರಕಾರ 2020 ನೇ ವರ್ಷದ ಆರು ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ ಆದಾಯ 2019 ರ ಆದಾಯದ ಸನಿಹಕ್ಕೆ ಬಂದಾಗಿದೆಯಂತೆ! ಅಂದರೆ 2020 ನೆಟ್‌ಫ್ಲಿಕ್ಸ್‌ ಪಾಲಿಗೆ ಅತ್ಯಂತ ಲಾಭದಾಯಕ ವರ್ಷ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ತಜ್ಞರು.

  ನೆಟ್‌ಫ್ಲಿಕ್ಸ್‌ನ ಶೇರು ಮೌಲ್ಯ ಎಷ್ಟಿದೆ?

  ನೆಟ್‌ಫ್ಲಿಕ್ಸ್‌ನ ಶೇರು ಮೌಲ್ಯ ಎಷ್ಟಿದೆ?

  ನೆಟ್‌ಫ್ಲಿಕ್ಸ್‌ನ ಒಂದು ಶೇರಿನ ಬೆಲೆ ಪ್ರಸ್ತುತ (ಜುಲೈ 07) 493.81 ಅಮೆರಿಕನ್ ಡಾಲರ್ ಇದೆ. ಹತ್ತು ವರ್ಷದ ಹಿಂದೆ ಅಂದರೆ 2010 ರಲ್ಲಿ ನೆಟ್‌ಫ್ಲಿಕ್ಸ್‌ನ ಒಂದು ಶೇರಿನ ಬೆಲೆ ಇದ್ದದ್ದು ಕೇವಲ 7.27 ಡಾಲರ್‌ ಬೆಲೆ ಇದೆ. ಅಂದರೆ ಹತ್ತು ವರ್ಷದಲ್ಲಿ ಸುಮಾರು 70 ಪಟ್ಟು ಹೆಚ್ಚಳವಾಗಿದೆ ನೆಟ್‌ಫ್ಲಿಕ್ಸ್‌ನ ಶೇರಿನ ಬೆಲೆ. ಕೊರೊನಾ ಕಾಲದಲ್ಲಿ ಶೇರು ಮಾರುಕಟ್ಟೆ ಕುಸಿಯುತ್ತಿದ್ದರೂ ನೆಟ್‌ಫ್ಲಿಕ್ಸ್‌ ಶೇರು ಮೌಲ್ಯ ಮಾತ್ರ ಏರುತ್ತಲೇ ಇದೆ.

  English summary
  Netflix is the big name OTT buisness. Netflix rising its earnings year by year growing as one of largest companies. How Much Netflix Earn Per Year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X