twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-2

    |

    ಅನಾಮಿಕ

    ಕಳೆದೆರಡು ವರ್ಷಗಳಿಂದ ಓಟಿಟಿಯಲ್ಲಿ ನೇರ ಬಿಡುಗಡೆ ಕಂಡ ಸಿನಿಮಾಗಳು ಮತ್ತು ವೆಬ್-ಸರಣಿಗಳ ಕಥಾವಸ್ತು, ಪಾತ್ರಪೋಷಣೆ ಅಥವಾ ದೃಶ್ಯಗಳಲ್ಲಿ ಭಾರತೀಯತೆ, ಅಸ್ಮಿತೆ ಮತ್ತು ಭಾರತೀಯರ ಭಾವನೆಗಳಿಗೆ ಧಕ್ಕೆಯಾಗುವ ವಿಷಯಗಳು ಇರುವುದರ ಬಗ್ಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಓಟಿಟಿ ಎಂಬುದು ಮಡಿವಂತಿಕೆಯನ್ನು ಮೀರಿದ ಸೃಷ್ಟಿಶೀಲತೆಗೆ ಸ್ವಾತಂತ್ರ ನೀಡುವ ವೇದಿಕೆಯಾಗಬಹುದಾಗಿತ್ತು. ಆದರೆ ಅದು ವಿಕೃತಿಗೆ, ಸ್ವೇಚ್ಛೆಗೆ ವೇದಿಕೆಯಾಗುತ್ತಿದೆ. ವಿದೇಶಿ ಕಾರ್ಪೋರೇಟ್ ಕಂಪನಿ ತನ್ನ ನಿರ್ಮಾಣದ, ತನ್ನ ಹಕ್ಕಿನಲ್ಲಿರುವ ಕೃತಿ ಅಥವ ತನ್ನ ವ್ಯವಹಾರಕ್ಕೆ ಅತಿಹೆಚ್ಚು ಮೈಲೇಜ್ ದೊರಕಿಸಿಕೊಳ್ಳುವುದಕ್ಕೆ ಆ ರೀತಿಯ ಗಿಮಿಕ್ ಮಾಡುತ್ತದೆ. ಅನವಶ್ಯಕವಾಗಿ ಹಿಂಸಾಚಾರ, ಸೆಕ್ಸ್-ಬೆತ್ತಲೆ, ಅತ್ಯಾಚಾರದ ದೃಶ್ಯಗಳನ್ನು ಸೇರಿಸಲು ಕೇಳುತ್ತದೆ..! ಕಾಂಟ್ರೋವರ್ಸಿ ಆದಷ್ಟೂ ಅವರಿಗೆ ಸಾಗರೊತ್ತರ ಗ್ಲೋಬಲ್ ಮಾರುಕಟ್ಟೆಯಲ್ಲಿ ಹೆಚ್ಚು ಬಿಕರಿಯಾಗುತ್ತದೆ.

    ಓ.ಟಿ.ಟಿ. ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-1ಓ.ಟಿ.ಟಿ. ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ: ಭಾಗ-1

    ಗ್ಲೋಬಲ್ ಮಾರುಕಟ್ಟೆಯ ಹೆಸರಿನಲ್ಲಿ ಅದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ಪ್ರಾದೇಶಿಕ ಉದ್ಯಮಗಳನ್ನು ಕೊಲ್ಲುತ್ತದೆ. ಪ್ರಾದೇಶಿಕತೆ ಮತ್ತು ಪ್ರಾದೇಶಿಕ ಮಾರುಕಟ್ಟೆಯನ್ನು ಅಳಿಸಿಹಾಕಿ ಮನರಂಜನ ಮಾಧ್ಯಮದ ಮೇಲೂ ತನ್ನ ಹಿಡಿತವನ್ನು ಸಾಧಿಸಲು ಓ.ಟಿ.ಟಿ ಬಹಳ ದೊಡ್ಡ ಷಡ್ಯಂತ್ರ ಹೂಡಿರುವುದು ಮೇಲ್ನೋಟಕ್ಕೆ ಕಾಣುವುದಿಲ್ಲ. ಅದರ ಆಳಕ್ಕೆ ಹೊಕ್ಕಿ ನೋಡಬೇಕು.

    How OTT Negatively Affecting Regional Movie Industry-Part-2

    ಅಮೇಜಾನ್, ನೆಟ್ಪ್ಲಿಕ್ಸ್ ಥರದ ಓಟಿಟಿಗಳು ತಮ್ಮ ಚಂದಾದಾರರಿಗೆ ಇಂದು ಕಡಿಮೆ ಶುಲ್ಕದಲ್ಲಿ ಮನರಂಜನೆ ಕೊಡುತ್ತಿರಬಹುದು. ಜನರನ್ನು ತಮ್ಮ ಫೋನುಗಳಿಗೆ ಅಂಟಿಸಿ ಥಿಯೇಟರುಗಳ ಬಾಗಿಲು ಮುಚ್ಚಿಸಿ, ಜನರಿಗೆ ಬೇರೆ ಮಾರ್ಗವಿಲ್ಲದಂತೆ ಮಾಡಿದ ನಂತರ ತನ್ನ ಶುಲ್ಕ ಹೆಚ್ಚಿಸುತ್ತವೆ.

    ಆ ಕಾರಣಕ್ಕೆ ಇಂದಿಗೆ ಓಟಿಟಿ ಮಾಧ್ಯಮಗಳು ಪೈರಸಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಹಕ್ಕಿನಲ್ಲಿರುವ ಸಿನಿಮಾ ಅಥವ ವೆಬ್ ಸೀರೀಸ್ ಬಿಡುಗಡೆಯಾಗಿ ಅರ್ಧ ಗಂಟೆಗೇ ಪೈರಸಿಯಾಗಿ ಬಂದು ಜನ ಅನಧಿಕೃತ ಮಾರ್ಗಗಳಲ್ಲಿ ಪುಗ್ಸಟ್ಟೆ ನೋಡಿದರೂ ಅವರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.

    ಏಕೆಂದರೆ ಓಟಿಟಿಯಲ್ಲಿ ಬರುವ ಎಲ್ಲ ಸಿನಿಮಾಗಳಿಗೂ ಅವರು ಕೋಟಿಗಟ್ಟಲೆ ಹಣ ಕೊಟ್ಟು ಕೊಂಡುಕೊಂಡಿರುವುದಿಲ್ಲ. ಬಹುತೇಕ ಸಣ್ಣ ಸಿನೆಮಾಗಳಿಗೆ, ಅದರಲ್ಲೂ ಕನ್ನಡ ಸಿನೆಮಾಗಳಿಗೆ ಓಟಿಟಿ ಅವರು ಕೊಡುವ ಮೊತ್ತ ಅತ್ಯಲ್ಪ. ಒಬ್ಬ ವ್ಯಕ್ತಿ ಓಟಿಟಿಯಲ್ಲಿ ಸಿನೆಮಾ ನೋಡಿದರೆ ನಿರ್ಮಾಪಕನಿಗೆ ಕೇವಲ ಮೂರರಿಂದ ಏಳು ರೂಪಾಯಿಗಳು ಬರುತ್ತವೆ. ಅದನ್ನು ಪೇ-ಪರ್-ವೀವ್ ಎಂದು ಕರೆಯಲಾಗುತ್ತದೆ. ಅರ್ಧ ಕಾಫಿಯ ಬೆಲೆಗಿಂತ ಕಡಿಮೆ ಅದು. ಆ ಅಲ್ಪ ಮೊತ್ತದಲ್ಲಿ ಏಜೆಂಟ್ ಅಥವ ಮಧ್ಯವರ್ತಿ ಸಂಸ್ಥೆಯ ಕಮಿಷನ್ ಸಹ ಹಿಡಿದುಕೊಳ್ಳಲಾಗುತ್ತದೆ..! ಆ ಒಟ್ಟು ಮೊತ್ತ ಮೂರು ತಿಂಗಳಿಗೊಮ್ಮೆ ಕಂತುಗಳಲ್ಲಿ ಕೊಡಲಾಗುತ್ತದೆ.

    Recommended Video

    Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

    (ಇದು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ತಂತ್ರಜ್ಞರೊಬ್ಬರ ವೈಯಕ್ತಿಕ ಅಭಿಪ್ರಾಯಗಳು. ಇಲ್ಲಿ ಮಂಡಿಸಿರುವ ವಿಚಾರ- ವಾದಗಳಿಗೂ ಫಿಲ್ಮಿಬೀಟ್‌ ಕನ್ನಡದ ಸಂಪಾದಕೀಯ ನಿಲುವುಗಳಿಗೂ ಸಂಬಂಧ ಇಲ್ಲ)

    English summary
    Here is a analysis about how OTT platforms affecting regional movie industries. Part 02.
    Thursday, December 3, 2020, 13:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X