For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಬರ್ತಿದ್ದಾನೆ 'ಹಂಬಲ್ ಪೊಲಿಟಿಶಿಯನ್ ನಾಗರಾಜ್'

  |

  'ಹಂಬಲ್ ಪೊಲಿಟೀಶಿಯನ್ ನಾಗರಾಜ್' ನಿರೂಪಕ, ನಟ ದಾನಿಶ್ ಸೇಠ್ ಸೃಷ್ಟಿಸಿರುವ ಪಾತ್ರ. ಈ ಪಾತ್ರದ ಮೇಲೆ ಈಗಾಗಲೇ 'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ಇದೀಗ ಇದೇ ಪಾತ್ರದ ಬಗ್ಗೆ ವೆಬ್ ಸರಣಿ ನಿರ್ಮಾಣ ಮಾಡಲಾಗಿದೆ.

  'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಹೆಸರಿನ ವೆಬ್ ಸರಣಿ ನಿರ್ಮಾಣವಾಗಿದ್ದು, ಇಂದು ವೆಬ್ ಸರಣಿಯ ಟೀಸರ್ ಬಿಡುಗಡೆ ಆಗಿದೆ. ಇಲ್ಲೂ ಸಹ ದಾನಿಶ್ ಸೇಠ್ ಅವರೇ ಹಂಬಲ್ ಪೊಲಿಟೀಶಿಯನ್ ಪಾತ್ರದಲ್ಲಿ ನಟಿಸಿದ್ದಾರೆ.

  ಹಾಸ್ಯ ಪ್ರಧಾನ ವೆಬ್ ಸರಣಿಯಲ್ಲಿ ದಾನಿಶ್ ಅವರ ಪಿಎ ಮಂಜು ಪಾತ್ರದಲ್ಲಿ ವಿಜಯ್ ಚೆಂಡೂರ್ (ಸಿನಿಮಾದಲ್ಲಿಯೂ ಇವರೇ ನಾಗರಾಜ್‌ನ ಅಸಿಸ್ಟೆಂಟ್ ಪಾತ್ರ ಮಾಡಿದ್ದರು). ಜೊತೆಗೆ ನಿರ್ದೇಶಕ, ನಟ ಪ್ರಕಾಶ್ ಬೆಳವಾಡಿ ಹಾಗೂ ಇನ್ನಿತರ ನಟರು ವೆಬ್ ಸರಣಿಯಲ್ಲಿದ್ದಾರೆ. ವೆಬ್ ಸರಣಿಯು ವೂಟ್‌ನಲ್ಲಿ ಬಿಡುಗಡೆ ಆಗಲಿದೆ.

  ಈ ವೆಬ್ ಸರಣಿಯಲ್ಲಿಯೂ ನಾಗರಾಜ್ 'ಹಂಬಲ್ ಪೊಲಿಟೀಶಿಯನ್' ಜೊತೆಗೆ ಪಾರ್ಟ್‌ ಟೈಮ್ ಯೂಟ್ಯೂಬರ್ ಸಹ ಆಗಿದ್ದಾರೆ. 'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಸಿನಿಮಾದಲ್ಲಿ ಹಾಸ್ಯ ಕಲಾವಿದೆ ಸುಮುಖಿ ಸುರೇಶ್, ನಾಗರಾಜ್‌ನ ಪತ್ನಿ ಲಾವಣ್ಯ ಪಾತ್ರ ಮಾಡಿದ್ದರು. ಆದರೆ ವೆಬ್ ಸರಣಿಯ ಟ್ರೇಲರ್‌ನಲ್ಲಿ ಸುಮುಖಿ ಸುರೇಶ್ ಪಾತ್ರ ಕಾಣುತ್ತಿಲ್ಲ. ಬಹುಶಃ ಲಾವಣ್ಯ ಪಾತ್ರದಲ್ಲಿ ಬೇರೊಬ್ಬ ನಟಿ ನಟಿಸುತ್ತಿರುವ ಸಾಧ್ಯತೆ ಇದೆ.

  ದಾನಿಶ್ ಸೇಠ್‌ ಯೂಟ್ಯೂಬ್‌ ವಿಡಿಯೋಗಳಲ್ಲಿ 'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಪಾತ್ರದಲ್ಲಿ ಕಾಣಿಸಿಕೊಂಡು, ಪ್ರಸ್ತುತ ರಾಜಕಾರಣಿಗಳನ್ನು ಗೇಲಿ ಮಾಡುತ್ತಿದ್ದರು. ಅವರ ಪಾಲಿಟೀಶಿಯನ್ ಪಾತ್ರ ಬಹಳ ಹಿಟ್ ಆಗಿತ್ತು. ಅದೇ ಪಾತ್ರವನ್ನು ಆಧಾರವಾಗಿಟ್ಟುಕೊಂಡು ನಟ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿ 'ಹಂಬಲ್ ಪಾಲಿಟೀಶಿಯನ್ ನಾಗರಾಜ್' ಸಿನಿಮಾ ನಿರ್ಮಾಣ ಮಾಡಿದರು. ದಾನಿಶ್ ಸೇಠ್ ಗೆಳೆಯ ಸಾದ್ ಖಾನ್ ಆ ಸಿನಿಮಾ ನಿರ್ದೇಶನ ಮಾಡಿದ್ದರು.

  ಅದರ ಬಳಿಕ ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ದಾನಿಶ್ ಸೇಠ್ ನಟಿಸಿದರು, ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ಆ ಸಿನಿಮಾ ಹಿಟ್ ಆಯಿತು. ಬಳಿಕ ದಾನಿಶ್ ಅವರ ಸೃಷ್ಟಿಯ ಮತ್ತೊಂದು ಹಾಸ್ಯ ಪಾತ್ರ ಗೋಪಿ ಕುರಿತು ಹೊಸ ಸಿನಿಮಾ ಸೆಟ್ಟೇರುವುದರಲ್ಲಿತ್ತು. ಸಿನಿಮಾದ ಘೋಷಣೆ ಈಗಾಗಲೇ ಆಗಿತ್ತು. ಆ ಸಿನಿಮಾವನ್ನು ಸಹ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡುವುದರಲ್ಲಿದ್ದರು ಆದರೆ ಅಷ್ಟರಲ್ಲಿ ಪುನೀತ್ ನಿಧನ ಹೊಂದಿದರು.

  English summary
  Humble Politician Nograj web series will release on January on Voot. Danish Sait acting as Humble Politician Nograj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X