For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆಗೆ ಒಟಿಟಿಯಲ್ಲಿ ನೋಡಲೇ ಬೇಕಾದ ಸಿನಿಮಾಗಳು

  |

  ದೇಶಪ್ರೇಮವನ್ನು ತುಂಬುವ ಕಾರ್ಯದಲ್ಲಿ ಸಿನಿಮಾಗಳ ಯೋಗದಾನ ದೊಡ್ಡದು. ಸ್ವಾತಂತ್ರ್ಯ ದಿನಾಚರಣೆಗೂ ಸಿನಿಮಾಗಳಿಗೂ ಬಹಳ ನಂಟಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಸಿನಿಮಾಗಳ ಪಾತ್ರವಿತ್ತು ಎಂಬುದನ್ನು ಮರೆಯುವಂತಿಲ್ಲ.

  ದೂರದರ್ಶನ ಒಂದೇ ಇದ್ದ ಕಾಲದಲ್ಲಿ ಪ್ರತಿ ಸ್ವಾತಂತ್ರ್ಯೋತ್ಸವಕ್ಕೂ ಮಣಿರತ್ನಂ ನಿರ್ದೇಶನದ 'ರೋಜ' ಸಿನಿಮಾವನ್ನು ತಪ್ಪದೇ ಪ್ರಸಾರ ಮಾಡಲಾಗುತ್ತಿತ್ತು. 'ರೋಜಾ' ಜೊತೆಗೆ ಇನ್ನೂ ಹಲವು ದೇಶಭಕ್ತಿಯ ಸಿನಿಮಾಗಳು ಅಂದು ವಿಶೇಷವಾಗಿ ಪ್ರಸಾರವಾಗುತ್ತಿದ್ದವು. ಈಗ ಕಾಲ ಬದಲಾಗಿದೆ, ಆಯ್ಕೆ ಈಗ ಪ್ರೇಕ್ಷಕನ ಕೈಯಲ್ಲಿದೆ. ಒಟಿಟಿಗಳು ಬಂದ ನಂತರವಂತೂ ಪ್ರೇಕ್ಷಕ ಯಾವ ಸಿನಿಮಾ ನೋಡಲು ಬಯಸುತ್ತಾನೆಯೋ ಆ ಸಿನಿಮಾ ಅವನ ಬೆರಳ ತುದಿಗೆ ಒದಗುತ್ತದೆ.

  ಏನೇ ಆದರೂ ಸ್ವಾತಂತ್ರ್ಯ ದಿನೋತ್ಸವದಂದು ದೇಶಪ್ರೇಮ ಸೂಸುವ ಸಿನಿಮಾಗಳನ್ನು ನೋಡಿದರೆ ಅದರ ಗಮ್ಮತ್ತೇ ಬೇರೆ. ಅದರಲ್ಲಿಯೂ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಾನುವಾರದಿಂದೆ. ಕಾರ್ಪೊರೇಟ್ ಮಂದಿಗೂ ರಜೆಯ ದಿನ. ಕೊರೊನಾ ಕಾರಣ ಚಿತ್ರಮಂದಿರಗಳು ಖಾಲಿ ಇರುವಾಗ ಮನೆಯಲ್ಲಿಯೇ ಕೂತು ಒಟಿಟಿಗಳಲ್ಲಿ ನೋಡಬಹುದಾದ ಕೆಲವು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಆದ ಪೇಟ್ರಿಯಾಟಿಕ್ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

  ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಶೇರ್ಷಾ'

  ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಶೇರ್ಷಾ'

  ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ನಟಿಸಿರುವ 'ಶೇರ್ಷಾ' ಸಿನಿಮಾ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತದ ಸೈನ್ಯದಲ್ಲಿದ್ದು ಅಪ್ರತಿಮವಾಗಿ ಹೋರಾಡಿ ಮಡಿದ ವೀರ ಯೋಧ ಕ್ಯಾಪ್ಟನ್ ವಿಕ್ರಂ ಭಾತ್ರಾ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿವೆ. ಸಿನಿಮಾ ಬಿಡುಗಡೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಎರಡು ದಿನವಷ್ಟೆ (ಆಗಸ್ಟ್ 12) ಆಗಿದೆ.

  ಭುಜ್: ದಿ ಪ್ರೈಡ್ ಆಫ್ ಇಂಡಿಯಾ

  ಭುಜ್: ದಿ ಪ್ರೈಡ್ ಆಫ್ ಇಂಡಿಯಾ

  ಅಜಯ್ ದೇವಗನ್ ನಟನೆಯ 'ಭುಜ್; ದಿ ಪ್ರೈಡ್ ಆಫ್ ಇಂಡಿಯಾ' ಹಿಂದಿ ಸಿನಿಮಾವು ಆಗಸ್ಟ್ 13 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾವು 1971ರ ಭಾರತ-ಪಾಕಿಸ್ತಾನ ಯುದ್ಧದ ಕುರಿತಾದದ್ದಾಗಿದೆ. ಯುದ್ಧದ ಸಮಯದಲ್ಲಿ ಐಎಎಫ್‌ನ ವಿಜಯ್ ಕರ್ಣಿಕ್‌ ಮಹಿಳೆಯರು ಮತ್ತು ಕೆಲವು ಹಳ್ಳಿಗರ ಸಹಾಯದಿಂದ ದಾಳಿಗೊಳಗಾಗಿದ್ದ ವಾಯುಸೇನೆಯ ನೆಲೆಯನ್ನು ಮತ್ತೆ ಕಟ್ಟಿದ ಅದ್ಭುತ ಕತೆಯನ್ನು ಇದು ಆಧರಿಸಿದೆ. ಸಿನಿಮಾದಲ್ಲಿ ಅಜಯ್ ದೇವಗನ್, ಸಂಜಯ್ ದತ್, ಸೊನಾಕ್ಷಿ ಸಿನ್ಹಾ ಇನ್ನೂ ಹಲವರು ನಟಿಸಿದ್ದಾರೆ.

  ದೇಶಪ್ರೇಮ ಕುರಿತು ಮಹತ್ವದ ಹಿಂದಿ ಸಿನಿಮಾ 'ರಾಜಿ'

  ದೇಶಪ್ರೇಮ ಕುರಿತು ಮಹತ್ವದ ಹಿಂದಿ ಸಿನಿಮಾ 'ರಾಜಿ'

  ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಭಾರತ-ಪಾಕಿಸ್ತಾನದ ವಿಷಯ ಕುರಿತು ನಿರ್ಮಿಸಲಾದ ಸೂಕ್ಷ್ಮವಾದ ಸಿನಿಮಾಗಳಲ್ಲಿ ಒಂದು. ಸಿನಿಮಾದಲ್ಲಿ ದೇಶಪ್ರೇಮವನ್ನು ಅತಿಯಾಗಿ ವೈಭವೀಕರಿಸುವುದರ ಬದಲಿಗೆ ಅದನ್ನು ಬೇರೆಯದೇ ಆಯಾಮದ ಮೂಲಕ ನೋಡುವ ಪ್ರಯತ್ನ ಮಾಡಲಾಗಿದೆ. ಗೂಢಾಚಾರಿಯಾಗಿ ಪಾಕಿಸ್ತಾನಕ್ಕೆ ಹೋಗುವ ಯುವತಿ ಅಲ್ಲಿ ತನ್ನವರನ್ನೇ ಕೊಲ್ಲಬೇಕಾದ ಪರಿಸ್ಥಿತಿ ಒದಗಿಬರುತ್ತದೆ. ಗೂಢಾಚಾರಿಣಿಯಾಗಿ ಆಕೆ ಯಶಸ್ವಿಯಾಗುತ್ತಾಳಾದರೂ ಯಾವುದು ದೇಶ, ಯಾವುದು ದೇಶಪ್ರೇಮ ಎಂಬ ಗೊಂದಲಕ್ಕೆ ಸಿಕ್ಕಿಕೊಂಡು ಬಿಡುತ್ತಾಳೆ. ಈ ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

  ಅಕ್ಷಯ್ ಕುಮಾರ್ ನಟನೆಯ 'ಕೇಸರಿ'

  ಅಕ್ಷಯ್ ಕುಮಾರ್ ನಟನೆಯ 'ಕೇಸರಿ'

  ಅಕ್ಷಯ್ ಕುಮಾರ್ ನಟನೆಯ 'ಕೇಸರಿ' ಸಿನಿಮಾವು 1897ರ ಸರಘಾರಿ ಕಾಳಗದ ಕುರಿತಾದ ಕತೆ ಹೊಂದಿದೆ. 21 ಸಿಖ್ಖ್ ಯೋಧರನ್ನು ಮುನ್ನಡೆಸಿದ ಹವಾಲ್ದಾರ್ ಇಶಾರ್ ಸಿಂಗ್ ಹೇಗೆ 1000ಕ್ಕೂ ಹೆಚ್ಚು ಪಶ್ತೂನ್ ಯೋಧರನ್ನು ಸದೆಬಡಿಯಿತು ಎಂಬ ಕತೆಯನ್ನು ಈ ಸಿನಿಮಾ ಹೊಂದಿದೆ. ಇದೇ ಸಿನಿಮಾದ 'ಥೇರಿ ಮಿಟ್ಟೀಮೆ ಮಿಲ್ ಜಾವಾ, ಗುಲ್ ಬನಕೇ ಮೆ ಖಿಲ್ ಜಾವಾ' ಹಾಡು ಆಲ್‌ ಟೈಮ್ ಹಿಟ್ ಆಗಿದೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

  'ದಿ ಗಾಜಿ ಅಟ್ಯಾಕ್'

  'ದಿ ಗಾಜಿ ಅಟ್ಯಾಕ್'

  'ದಿ ಗಾಜಿ ಅಟ್ಯಾಕ್' ಸಿನಿಮಾವು 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಿಎನ್‌ಎಸ್ ಗಾಜಿ ಎಂಬ ಜಲಾಂತರ್ಗಾಮಿ ಸಬ್‌ಮರೀನ್‌ ಮೇಲೆ ಆದ ದಾಳಿಯ ಕುರಿತಾದ ಸಿನಿಮಾ ಆಗಿದೆ. 2017ರಲ್ಲಿ ಬಿಡುಗಡೆ ಆದ ಈ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ತಾಪ್ಸಿ ಪೊನ್ನು, ಅತುಲ್ ಕುಲಕರ್ಣಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

  ಶಿವರಾಮ ಕಾರಂತರ ಕತೆ ಆಧರಿತ 'ಸ್ವದೇಸ್'

  ಶಿವರಾಮ ಕಾರಂತರ ಕತೆ ಆಧರಿತ 'ಸ್ವದೇಸ್'

  ಕನ್ನಡದ ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕತೆ ಆಧರಿತ ಶಾರುಖ್ ಖಾನ್ ನಟಿಸಿರುವ ಸಿನಿಮಾ 'ಸ್ವದೇಸ್' ವಿದೇಶದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೂಲ ಹುಡುಕಿ ಭಾರತದ ಹಳ್ಳಿಯೊಂದಕ್ಕೆ ಬಂದು ಇಲ್ಲಿಯೇ ನೆಲೆಸುವ ಕತೆಯನ್ನು 'ಸ್ವದೇಸ್' ಹೊಂದಿದೆ. 'ಸ್ವದೇಸ್' ಸಿನಿಮಾದಲ್ಲಿ ಶಾರುಖ್ ತಾಯಿಯ ಪಾತ್ರದಲ್ಲಿ ಕನ್ನಡದ ಕಿಶೋರಿ ಬಲ್ಲಾಳ್ ನಟಿಸಿರುವುದು ವಿಶೇಷ. 'ಮರಳಿ ಮಣ್ಣಿಗೆ' ಕತೆ ಆಧರಿಸಿದ ಕನ್ನಡದಲ್ಲಿ 'ಚಿಗುರಿದ ಕನಸು' ಸಿನಿಮಾ ಸಹ ನಿರ್ಮಾಣ ಮಾಡಲಾಗಿದೆ. ಶಾರುಖ್ ನಟನೆಯ 'ಸ್ವದೇಸ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ.

  'ಉರಿ; ದಿ ಸರ್ಜಿಕಲ್ ಸ್ಟ್ರೈಕ್' ಮರೆಯುವುದುಂಟೆ?

  'ಉರಿ; ದಿ ಸರ್ಜಿಕಲ್ ಸ್ಟ್ರೈಕ್' ಮರೆಯುವುದುಂಟೆ?

  ದೇಶಪ್ರೇಮ ಬಡಿದೆಬ್ಬಿಸುವ ಸಿನಿಮಾಗಳ ಪಟ್ಟಿಯಲ್ಲಿ 'ಉರಿ; ದಿ ಸರ್ಜಿಕಲ್ ಸ್ಟ್ರೈಕ್' ಇಲ್ಲದೆ ಹೋದರೆ ಹೇಗೆ? 2016ರ ಉರಿ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್‌ ಆಧರಿಸಿ ನಿರ್ಮಿಸಲಾದ 'ಉರಿ; ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾವು ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿನಿಮಾದಲ್ಲಿ ವಿಕ್ಕಿ ಕೌಶಲ್, ಯಾಮಿ ಗುಪ್ತಾ, ಮೋಹಿತ್ ರೈನಾ, ಪರೇಶ್ ರಾವಲ್, ಕ್ರಿತಿ ಕುಲ್ಹಾರಿ ಇನ್ನೂ ಹಲವರು ನಟಿಸಿದ್ದಾರೆ. ಈ ಸಿನಿಮಾ ಚಿತ್ರಮಂದಿರದಲ್ಲೂ ಭರ್ಜರಿ ಹಿಟ್ ಆಗಿತ್ತು.

  ಅಮೀರ್ ಖಾನ್ ನಟನೆಯ 'ಲಗಾನ್'

  ಅಮೀರ್ ಖಾನ್ ನಟನೆಯ 'ಲಗಾನ್'

  ಅಮೀರ್ ಖಾನ್ ನಟಸಿ, ಆಶುತೋಶ್ ಗೋವರಿಕರ್ ನಿರ್ದೇಶನದ 'ಲಗಾನ್' ಸಿನಿಮಾ ಭಾರತೀಯ ಸಿನಿಮಾದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಬ್ರಿಟೀಷರ ವಿರುದ್ಧ ಭಾರತದ ಸಣ್ಣ ಹಳ್ಳಿಯೊಂದರ ಜನ ಕ್ರಿಕೆಟ್ ಆಡಿ ಸೋಲಿಸುವ ಕತೆಯನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದಲ್ಲಿ ಹಲವು ಸಂದೇಶಗಳು ಅಡಕವಾಗಿವೆ. 'ಲಗಾನ್' ಸಿನಿಮಾ ಕೇವಲ ಕತೆಯಿಂದ ಮಾತ್ರವೇ ಅಲ್ಲದೆ ಸಿನಿಮಾ ಮೇಕಿಂಗ್ ದೃಷ್ಟಿಯಿಂದಲೂ ಮಾಸ್ಟರ್ ಪೀಸ್, ಆಸ್ಕರ್‌ಗೆ ನಾಮಿನೇಟ್ ಆಗಿ ಅಂತಿಮ ಸುತ್ತಿಗೂ ಈ ಸಿನಿಮಾ ಆಯ್ಕೆ ಆಗಿತ್ತು ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯ್ತು. ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

  'ದಿ ಫರ್ಗಾಟನ್ ಆರ್ಮಿ'

  'ದಿ ಫರ್ಗಾಟನ್ ಆರ್ಮಿ'

  ಸುಭಾಷ್ ಚಂದ್ರ ಭೋಸ್‌ ಸ್ಥಾಪಿತ ಎನ್‌ಐಎ (ಇಂಡಿಯನ್ ನ್ಯಾಷನಲ್ ಆರ್ಮಿ) ಕುರಿತ ಕತೆಯುಳ್ಳ ವೆಬ್ ಸರಣಿ ಆಗಿದೆ. ಬ್ರಿಟೀಷರ ಪರವಾಗಿ ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧ ಹೋರಾಡಿದ್ದ ಭಾರತೀಯ ಸೇನೆಯೇ ಮುಂದೆ ಸುಭಾಷ್ ಚಂದ್ರ ಭೋಸ್ ನಾಯಕತ್ವದಲ್ಲಿ ಎನ್‌ಐಎ ಎಂಬ ಹೆಸರು ಪಡೆದು ಸ್ವಾತಂತ್ರ್ಯ ಪಡೆಯಲು ದೆಹಲಿಯತ್ತ ಹೆಜ್ಜೆ ಇಟ್ಟಿತ್ತು ಆದರೆ ಸುಭಾಷ್‌ ಚಂದ್ರ ಭೋಸ್‌ರ ಕಾಲವಾದ ಬಳಿಕ ಈ ಸೇನೆ ಹೇಳ ಹೆಸರಿಲ್ಲದಂತೆ ಆಗಿಬಿಟ್ಟಿತು. ಹಾಗಾಗಿಯೇ ಇತಿಹಾಸ ಮರೆತು ಹೋದ ಈ ಸೇನೆಯ ಕುರಿತಾದ ವೆಬ್ ಸರಣಿಗೆ 'ಫರ್ಗಾಟನ್ ಆರ್ಮಿ' ಎಂದೇ ಹೆಸರಿಡಲಾಗಿದೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

  English summary
  Here is the list of movies that can watch on Independence day on OTTs like Amazon Prime, Netflix, Hotstar and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X