For Quick Alerts
  ALLOW NOTIFICATIONS  
  For Daily Alerts

  7 ಚಿತ್ರಗಳನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡಿದ್ದ ಹೊಂಬಾಳೆ ಫಿಲ್ಮ್ಸ್‌ನ ಈ ಚಿತ್ರ ನೇರವಾಗಿ ಓಟಿಟಿಗೆ!

  |

  ಹೊಂಬಾಳೆ ಫಿಲ್ಮ್ಸ್ ಕನ್ನಡದ ಈ ಬೃಹತ್ ಚಿತ್ರ ನಿರ್ಮಾಣ ಸಂಸ್ಥೆ ಸದ್ಯ ಚಂದನವನ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹಾಗೂ ನಂಬುಗೆ ಗಳಿಸಿರುವ ಬ್ಯಾನರ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಚಿತ್ರವೊಂದು ತಯಾರಾಗುತ್ತಿದೆ ಎಂದರೆ ಆ ಚಿತ್ರದ ಮೇಲೆ ಜನರಿಗೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಳ್ಳುತ್ತೆ. ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ ಎಂದರೆ ಇದೊಂದು ಒಳ್ಳೆ ಕಂಟೆಂಟ್ ಇರುವ ಚಿತ್ರ ಎಂದು ನಿರ್ಧರಿಸಿಬಿಡುವ ಸಿನರಸಿಕರ ಗುಂಪೇ ಇದೆ.

  ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿನ್ನಿಂದಲೇ ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ಖಾತೆಯನ್ನು ತೆರೆದ ಹೊಂಬಾಳೆ ಫಿಲ್ಮ್ಸ್ ಸದ್ಯ ತೆಲುಗಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಫಾಹದ್ ಫಾಸಿಲ್ ಅಭಿನಯದ ಚಿತ್ರಗಳಿಗೆ ಬಂಡವಾಳ ಹೂಡುವುದರ ಮೂಲಕ ಟಾಲಿವುಡ್ ಹಾಗೂ ಮಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ.

  ಅಷ್ಟೇ ಅಲ್ಲದೇ ಸೂರರೈ ಪೋಟ್ರು ಚಿತ್ರ ನಿರ್ದೇಶಿಸಿದ್ದ ನಿರ್ದೇಶಕಿ ಸುಧಾ ಕೊಂಗರ ಮುಂದಿನ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುವ ಸಾಧ್ಯತೆ ಹೆಚ್ಚಿದ್ದು ಈ ಮೂಲಕ ಕಾಲಿವುಡ್‌ಗೂ ಸಹ ಹೊಂಬಾಳೆ ಫಿಲ್ಮ್ಸ್ ಪ್ರವೇಶಿಸಲಿದೆ. ಹೀಗೆ ವಿವಿಧ ಇಂಡಸ್ಟ್ರಿಗಳಿಗೆ ಕಾಲಿಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಕನ್ನಡ ಚಿತ್ರಗಳನ್ನೂ ಘೋಷಿಸಿದೆ ಹಾಗೂ ಕೆಲ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನೇರವಾಗಿ ಓಟಿಟಿಗೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಇದೀಗ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

  ಜಗ್ಗೇಶ್ ಅಭಿನಯದ ಚಿತ್ರ ನೇರವಾಗಿ ಓಟಿಟಿಗೆ?

  ಜಗ್ಗೇಶ್ ಅಭಿನಯದ ಚಿತ್ರ ನೇರವಾಗಿ ಓಟಿಟಿಗೆ?

  ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ರಾಜಕುಮಾರ ಹಾಗೂ ಯುವರತ್ನ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿ ಸಂಸ್ಥೆಯ ಖಾಯಂ ನಿರ್ದೇಶಕ ಎನಿಸಿಕೊಂಡಿರುವ ಸಂತೋಷ್ ಆನಂದ್‌ರಾಮ್ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ಟೋರ್ಸ್ಸ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಚಿತ್ರೀಕರಣ ಕೂಡ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ತಯಾರಿದೆ. ಆದರೆ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಚಿತ್ರಮಂದಿರಗಳ ಬದಲಾಗಿ ನೇರವಾಗಿ ಓಟಿಟಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಎಂಬ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್.

  ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ

  ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ

  ಇನ್ನು ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದ ಕಾರಣ ಏಪ್ರಿಲ್ ತಿಂಗಳಿನಲ್ಲೇ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಅದೇ ದಿನ ಕಾಂತಾರ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿತ್ತು. ಇನ್ನು ಕಾಂತಾರ ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಐವತ್ತು ದಿನ ಪೂರೈಸುವ ಸನಿಹಕ್ಕೆ ಬಂದಿದ್ದರೂ ಸಹ ಅತ್ತ ರಾಘವೇಂದ್ರ ಸ್ಟೋರ್ಸ್ ಚಿತ್ರದ ಕುರಿತಾಗಿ ಮಾತ್ರ ಹೊಂಬಾಳೆ ಫಿಲ್ಮ್ಸ್ ಯಾವುದೇ ಅಪ್‌ಡೇಟ್ ನೀಡುತ್ತಿಲ್ಲ.

  ಬಿಡುಗಡೆ ದಿನಾಂಕ ಘೋಷಿಸಿ ಮುಂದೂಡಿದ್ದರು!

  ಬಿಡುಗಡೆ ದಿನಾಂಕ ಘೋಷಿಸಿ ಮುಂದೂಡಿದ್ದರು!

  ಜೂನ್ ತಿಂಗಳ ಒಂದನೇ ತಾರೀಖು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಆನಂದ್‌ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ರಾಘವೇಂದ್ರ ಸ್ಟೋರ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದರು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 5ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಆದರೆ ಈ ದಿನದಂದು ಚಿತ್ರ ಬಿಡುಗಡೆಯಾಗಲಿಲ್ಲ. ನಂತರ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುರಿತು ಹೊಂಬಾಳೆ ಫಿಲ್ಮ್ಸ್ ಆಗಲಿ ಅಥವಾ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆಗಲಿ ಮಾಹಿತಿ ನೀಡಿಯೇ ಇಲ್ಲ.

  ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಗಳು

  ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಗಳು

  ಹೊಂಬಾಳೆ ಫಿಲ್ಮ್ಸ್ ಘೋಷಿಸಿರುವ ಚಿತ್ರಗಳ ಪಟ್ಟಿ: ಜಗ್ಗೇಶ್ - ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ರಾಘವೇಂದ್ರ ಸ್ಟೋರ್ಸ್, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್‌ ಕಾಂಬೋನ ಸಲಾರ್, ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರ ಟೈಸನ್, ಶ್ರೀಮುರಳಿ ಅಭಿನಯದ ಭಘೀರ, ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ, ಫಾಹದ್ ಫಾಸಿಲ್ ಹಾಗೂ ಪವನ್ ಕುಮಾರ್ ಕೊಂಬೋನ ಧೂಮಂ ಮತ್ತು ಸಂತೋಷ್ ಆನಂದ್‌ರಾಮ್ ಹಾಗೂ ಯುವ ರಾಜ್‌ಕುಮಾರ್ ಕಾಂಬಿನೇಶನ್‌ನ ಚಿತ್ರ.

  English summary
  Jaggesh and Hombale films next movie Raghavendra Stores likely to release directly on OTT. Read on
  Wednesday, November 9, 2022, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X