For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಕ್ಯಾಪ್ಟೆನ್ ಸೀಟ್‌ನಲ್ಲಿ ಜಶ್ವಂತ್ ಬೋಪಣ್ಣ, ಚೈತ್ರಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

  |

  ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್‌ ನಲ್ಲಿ ಭಾಗಿಯಾಗಿದ್ದಾರೆ. ಮೊದಲ ವಾರದ ಎಲಿಮಿನೆಷನ್ ಮತ್ತು ಮೊದಲ ಕ್ಯಾಪ್ಟೆನ್ಸಿಯನ್ನು ಸ್ಪರ್ಧಿಗಳು ನೋಡಿದ್ದಾರೆ.

  ಬಿಗ್ ಬಾಸ್ ಮನೆಗೆ ಎಂಟ್ರೊ ಕೊಡುವ ಪ್ರತೀ ಸ್ಪರ್ಧಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕಾಗಿಯೇ ಹಲವರು ಹಲವರೊಂದಿಗೆ ಮುಖ ಕೆಡಿಸಿಕೊಳ್ಳುವುದು ಕೂಡ ಉಂಟು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುದೇ ಚೆಂದ.

  ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

  ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಹೇಗೆ ಭಾಗವಹಿಸುತ್ತಾರೆ ಮತ್ತು ಗೆಲುವು, ಸೋಲಿನ ನಡುವೆ ಹೆಚ್ಚಿನ ಕುತೂಹಲ ಇರುತ್ತದೆ. ಗೆದ್ದವರಿಗೆ ಕ್ಯಾಪ್ಟನ್ ಆಗುವ ಒಂದು ಸದಾವಾಕಾಶ ಕೂಡ ಸಿಗುತ್ತದೆ. ಇದರಲ್ಲಿ ಗೆದ್ದು ಈ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ ಜಶ್ವಂತ್ ಬೋಪಣ್ಣ.

  ಕ್ಯಾಪ್ಟನ್ ಆಗಲು ಟೀಮ್ ಗೆಲುವು ಮುಖ್ಯ!

  ಕ್ಯಾಪ್ಟನ್ ಆಗಲು ಟೀಮ್ ಗೆಲುವು ಮುಖ್ಯ!

  ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುವುದೇ ಒಂದು ಸ್ವಾರಸ್ಯಕರ ಸಂಗತಿ. ಕ್ಯಾಪ್ಟನ್ಸಿ ಸಿಗಬೇಕು ಎಂದರೆ ಮನೆಯಲ್ಲಿ ಎಲ್ಲರ ಮನ ಗೆಲ್ಲುವುದರ ಜೊತೆ ಆಟ ಗೆಲ್ಲುವುದು ಕೂಡ ಮುಖ್ಯ ಆಗುತ್ತದೆ. ಮೊದಲ ವಾರದ ಅರ್ಜುನ್ ರಮೇಶ್ ಮನೆಯ ಕ್ಯಾಪ್ಟನ್ ಆಗಿದ್ದರು. ಈ ವಾರವೂ ಕ್ಯಾಪ್ಟನ್ ಆಯ್ಕೆಗಾಗಿ ಎರಡೂ ತಂಡದ ನಡುವೆ ಗೆದ್ದ ಸ್ಪರ್ಧಿಗಳ ನಡುವೆ ಆಯ್ಕೆ ಮಾಡಬೇಕಿತ್ತು.

  Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!

  ಕ್ಯಾಪ್ಟನ್ ರೇಸ್‌ನಲ್ಲಿ ಚೈತ್ರಾ, ಜಶ್ವಂತ್, ಜಯಶ್ರೀ!

  ಕ್ಯಾಪ್ಟನ್ ರೇಸ್‌ನಲ್ಲಿ ಚೈತ್ರಾ, ಜಶ್ವಂತ್, ಜಯಶ್ರೀ!

  ಬಿಗ್ ಬಾಸ್ ಮನೆಯಲ್ಲಿ 6 ಸ್ಪರ್ಧಿಗಳ ನಡುವೆ 3 ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಭಾಗಿಯಾಗಿಲು ಅವಕಾಶ ಇತ್ತು. ಹಾಗಾಗಿ ನಂದಿನಿ- ಜಶ್ವಂತ್, ಚೈತ್ರಾ- ಸಾನ್ಯಾ, ಸೋನು- ಜಯಶ್ರೀ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇವರಲ್ಲಿ ಮನೆಯವರೆಲ್ಲಾ ಸೇರಿ ಜಶ್ವಂತ್, ಚೈತ್ರಾ, ಜಯಶ್ರೀಯನ್ನು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಓಟ್ ಮಾಡಿದ್ರು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಭಾಗಿಯಾಗಿದರು.

  ಟಾಸ್ಕ್ ಗೆದ್ದ ಅರ್ಜುನ್ ರಮೇಶ್?

  ಟಾಸ್ಕ್ ಗೆದ್ದ ಅರ್ಜುನ್ ರಮೇಶ್?

  ಮನೆಯ ಎಲ್ಲರೂ ಸೇರಿ ಆಯ್ಕೆ ಮಾಡಿದ್ದು ಜಶ್ವಂತ್, ಚೈತ್ರಾ ಮತ್ತು ಜಯಶ್ರೀ. ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗಿಯಾಗಿದರು. ಸಣ್ಣದೊಂದು ಬಾಲ್ ತೆಗೆದುಕೊಂಡು ದೊಡ್ಡದಾದ ಜಾಲರಿಯಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ಸಾಗಿಸಬೇಕು. ಇದರಲ್ಲಿ ಎಲ್ಲಾ ಬಾಲ್‌ಗಳನ್ನು ವೇಗವಾಗಿ ಸಾಗಿಸಿ ಜಶ್ವಂತ್ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ.

  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಜಶ್ವಂತ್!

  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಜಶ್ವಂತ್!

  ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳಲ್ಲಿ ಮನೆಯ ಕ್ಯಾಪ್ಟನ್ ಯಾರಾಗುತ್ತಾರೆ ಎನ್ನು ಕುತೂಹಲ ಒಂದು ಕಡೆ ಆದರೆ, ಕ್ಯಾಪ್ಟೆನ್ ಆಗುವ ಆಸೆ ಮನೆಯ ಎಲ್ಲರಿಗೂ ಇದ್ದೇ ಇರುತ್ತದೆ. ಮನೆಯಲ್ಲಿ ಎಲ್ಲರೂ ಕ್ಯಾಪ್ಟನ್ ಆಗುವ ತವಕದಲ್ಲಿ ಇರುತ್ತಾರೆ. ಸದ್ಯ ಮನೆಯ ಎರಡನೇ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿದ್ದಾರೆ ಜಶ್ವಂತ್ ಬೋಪಣ್ಣ. ಮುಂದಿನ ಸರದಿ ಯಾರದ್ದು ಎನ್ನುವುದು ಮುಂದಿನ ವಾರ ತಿಳಿಯಲಿದೆ.

  Recommended Video

  ಸಿನಿಮಾ ಗೆದಿದ್ದೆ ಆದ್ರೆ ನನಗೆ ಮೋಸ ಆಗಿದೆ | Gaalipata 2 | Pawan Kumar |Gaalipata 2 Collection
  English summary
  Arjun Ramesh Is Become First Captain Of Bigg Boss kannada ott Season 1 , Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X