For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಂನಲ್ಲಿ 'ರತ್ನನ್' ಪ್ರಪಂಚ' ಅನಾವರಣ

  By ಫಿಲ್ಮಿಬೀಟ್ ಡೆಸ್ಕ್
  |

  ಟ್ರಾವೆಲ್ ಕಾಮಿಡಿ-ಡ್ರಾಮಾ ಜಾನರ್‌ನ ಕನ್ನಡ ಸಿನಿಮಾ 'ರತ್ನನ್ ಪ್ರಪಂಚ' ಸಿನಿಮಾವು ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ.

  ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ ಮತ್ತು ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ನಟಿಸಿದ್ದಾರೆ. ಈ ಚಿತ್ರವು ರತ್ನಾಕರ ಹಾಗೂ ಮಯೂರಿ ಕಥೆಯನ್ನು ಹೇಳುತ್ತದೆ.

  ಹಲವು ಹೊಸ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ ಸರಣಿ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು ರಹಿತ ಸಂಗೀತ, ಭಾರತದ ಅತಿದೊಡ್ಡ ಉತ್ಪನ್ನಗಳ ಸಂಗ್ರಹ, ಉಚಿತ ವಿತರಣೆಯನ್ನು ಒದಗಿಸುವ ಅಮೆಜಾನ್ ಪ್ರೈಮ್, ನಂಬಲಾಗದ ಮೌಲ್ಯವನ್ನು ನೀಡುತ್ತದೆ. ಉನ್ನತ ಡೀಲ್‌ಗಳು, ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್ ಸೇರಿದಂತೆ, ಎಲ್ಲವೂ ವಾರ್ಷಿಕ ₹999 ರಲ್ಲಿ ಲಭ್ಯವಿದೆ . ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಚಂದಾದಾರರಾಗಿ ಕೂಡ 'ರತ್ನನ್ ಪ್ರಪಂಚ' ಸಿನಿಮಾವನ್ನು ಗ್ರಾಹಕರು ವೀಕ್ಷಿಸಬಹುದು. ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯು ಒಬ್ಬರು, ಮೊಬೈಲ್‌ ಮೂಲಕ ಮಾತ್ರ ಬಳಸಬಹುದಾದ ಯೋಜನೆಯಾಗಿದ್ದು, ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.

  ಅಮೆಜಾನ್ ಪ್ರೈಮ್ ವಿಡಿಯೋ ಇಂದು ತನ್ನ ಮುಂಬರುವ ಒರಿಜಿನಲ್‌ ಕನ್ನಡ ಚಲನಚಿತ್ರ 'ರತ್ನನ್ ಪ್ರಪಂಚದ'ದ ಮೊದಲ ಟೀಸರ್‌ ಅನ್ನು ಅನಾವರಣಗೊಳಿಸಿತು ಮತ್ತು ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ ಟ್ರಾವೆಲ್ ಕಾಮಿಡಿ-ಡ್ರಾಮಾ 'ರತ್ನನ್ ಪ್ರಪಂಚ'ವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ ಮತ್ತು ಇದು ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಧನಂಜಯ್ನಟಿಸಿದ್ದಾರೆ ಹಾಗೂ ಮುಖ್ಯ ಪಾತ್ರದಲ್ಲಿ ರೆಬಾ ಮೋನಿಕಾ ಜಾನ್, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ಇದ್ದಾರೆ.

  'ರತ್ನನ್ ಪ್ರಪಂಚ' ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕೃತವಾದ ಒಂದು ಅನನ್ಯ ಟ್ರಾವೆಲ್ ಕಾಮಿಡಿ-ಡ್ರಾಮಾ ಆಗಿದ್ದು, ತನ್ನ ಪ್ರಸ್ತುತ ಜೀವನದ ಅಪಾಯಗಳನ್ನು ಎದುರಿಸುತ್ತಲೇ ತನ್ನ ಮೂಲವನ್ನು ಹುಡುಕುವ ವ್ಯಕ್ತಿ ಕತೆಯ ನಾಯಕ. ಈ ಅನ್ವೇಷಣೆಯಲ್ಲಿ, ಆಘಾತ, ನಗು ಮತ್ತು ಸಂದಿಗ್ಧತೆಗಳಿಂದ ತುಂಬಿದ ರೋಲರ್-ಕೋಸ್ಟರ್ ರೈಡ್‌ನಲ್ಲಿ ಅವನನ್ನು ಕರೆದೊಯ್ಯುವ ಸಂದರ್ಭಗಳಿಗೆ ಅವನು ಸಾಕ್ಷಿಯಾಗುತ್ತಾನೆ, ಅದು ಅವನ ಜಗತ್ತನ್ನು ಮರುಶೋಧಿಸುವಂತೆ ಮಾಡುತ್ತದೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಥೆಯನ್ನು ಬ್ರೇಕ್ ಮಾಡಲು ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ.

  "ಶ್ರೇಷ್ಠ ಕಥೆಗಳು ಯಾವುದೇ ಗಡಿಗಳನ್ನು ಹೊಂದಿಲ್ಲ. ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹರಡಿರುವ ಪ್ರೈಮ್ ವೀಡಿಯೋ ಗ್ರಾಹಕರೊಂದಿಗೆ, ನಾವು ಉತ್ತಮವಾದ ಸ್ಥಳೀಯ ಕಥೆಗಳನ್ನು 'ರತ್ನನ್ ಪ್ರಪಂಚ' ಮೂಲಕ ಒದಗಿಸಲು ನಮಗೆ ಸಾಧ್ಯವಾಗುತ್ತಿದೆ ಎಂದು ಸುಶಾಂತ್ ಶ್ರೀರಾಮ್, ಡೈರೆಕ್ಟರ್ - ಮಾರ್ಕೆಟಿಂಗ್, ಇಂಡಿಯಾ, ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಹೇಳಿದ್ದಾರೆ. ಅಲ್ಲದೆ, "ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ, ಸೃಜನಶೀಲ ಮತ್ತು ಆಕರ್ಷಕ ಕಥೆಗಳು ಮತ್ತು ಕಥೆಗಾರರನ್ನು ಪೋಷಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ, ಪ್ರಪಂಚದಾದ್ಯಂತ ನಮ್ಮ ಪ್ರೇಕ್ಷಕರಿಗೆ ಕೆಲವು ಅತ್ಯುತ್ತಮ ಕಥೆಗಳನ್ನು ತರುವ ಉದ್ದೇಶವನ್ನು ನಾವು ಹೊಂದಿದ್ದೇವೆ. 'ರತ್ನನ್ ಪ್ರಪಂಚ' ಅಂತಹ ಒಂದು ಕಥೆಯು ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿರುವುದಲ್ಲದೆ, ನಮ್ಮ ದೇಶದ ಅದ್ಭುತ ಸ್ಥಳೀಯ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

  "ರತ್ನನ್ ಪ್ರಪಂಚ' ಸಿನಿಮಾ, ಡ್ರಾಮಾದಲ್ಲಿ ಸ್ವಲ್ಪ ಹಾಸ್ಯವನ್ನೂ ಹೆಣೆದಿರುವ ಅಪರೂಪದ ಚಿತ್ರಗಳಲ್ಲಿ ಒಂದಾಗಿದೆ. ಜೊತೆಗೆ ಪ್ರಯಾಣವನ್ನು ಒಂದು ವಿಷಯವಾಗಿ ಹೊಂದಿದೆ" ಎಂದು ಕಾರ್ತಿಕ್ ಗೌಡ, ಚಿತ್ರದ ನಿರ್ಮಾಪಕ ಹೇಳಿದರು.

  "ಈ ರೀತಿಯ ಚಲನಚಿತ್ರವು ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದೆ ಮತ್ತು ಇದು ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತದೆ. ಇದು ನಾವು ಅಮೆಜಾನ್ ಪ್ರೈಮ್ ವೀಡಿಯೊದೊಂದಿಗೆ ಒಗಡೂಡಲು ನಿರ್ಧರಿಸಿದ ಒಂದು ಮುಖ್ಯ ಕಾರಣವೂ ಆಗಿದೆ. ಒಂದೇ ದಿನದಲ್ಲಿ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ, ಈ ಕಥೆಯನ್ನು ಕನ್ನಡ ಚಲನಚಿತ್ರೋದ್ಯಮದಿಂದ ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯಲು ಸಹಾಯವಾಗುತ್ತದೆ ಮತ್ತು ಇದು ನಮ್ಮ ಮೊದಲ ನಿರ್ಮಾಣದ ಒಂದು ಸಾಧನೆಯಾಗಿದೆ" ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದರು.

  "ನಾನು ವಿಭಿನ್ನ ಪ್ರಕಾರಗಳಲ್ಲಿ ಪ್ರಯೋಗ ಮಾಡಲು ಇಷ್ಟಪಡುತ್ತೇನೆ. ಆದರೆ ನಾನು ವಿಶೇಷವಾಗಿ ಸ್ವಯಂ-ಶೋಧನೆಯ ಸಂಪೂರ್ಣ ಪ್ರಯಾಣವನ್ನು ಪ್ರೀತಿಸುತ್ತೇನೆ. ಖುಷಿಯನ್ನು ತರುತ್ತದೆ ಎಂದು ನಂಬಿ ಪ್ರಯಾಣ ನಡೆಸುವ, ಆದರೆ ಆತನಿಗೆ ಜೀವನ ವಿಭಿನ್ನವಾದದ್ದನ್ನೇ ಒದಗಿಸುವ ಕಥೆಯುಳ್ಳ ಸಿನಿಮಾ ಈ ರತ್ನನ್ ಪ್ರಪಂಚ " ಎಂದರು ರೋಹಿತ್ ಪದಕಿ.

  ಅಲ್ಲದೆ, "ಒಂದು ಕಥೆಯಾಗಿ ರತ್ನನ್ ಪ್ರಪಂಚ ಹಿಂದೆಂದೂ ಕೇಳಿರದಂಥದ್ದು. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರಿಗೆ ಈ ಕಥೆಯನ್ನು ಒದಗಿಸುವಲ್ಲಿ ನಾನು ತುಂಬಾ ಉತ್ಸುಕನಾಗಿದ್ದೇನೆ'' ಎಂದು ಉತ್ಸಾಹಿತರಾಗಿ ಹೇಳಿದ್ದಾರೆ ನಿರ್ದೇಶಕ. 'ರತ್ನನ್ ಪ್ರಪಂಚ' ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮತ್ತು ಜಾಗತಿಕವಾಗಿ ಪ್ರದರ್ಶನಗೊಳ್ಳಲಿದೆ.

  English summary
  Kannada movie Rathnan Prapancha releasing directly on Amazon prime on October 22. Dali Dhananjay is the hero of the movie.
  Tuesday, October 5, 2021, 18:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X