For Quick Alerts
  ALLOW NOTIFICATIONS  
  For Daily Alerts

  ಸರಸ, ಹಾಸ್ಯ, ಮುನಿಸು, ಬಾಂಧವ್ಯ: ಹನಿಮೂನ್ ಟ್ರೇಲರ್ ಬಿಡುಗಡೆ

  |

  ಪ್ರತಿಭಾವಂತ ಯುವಕರ ಹೊಸ ಪ್ರಯತ್ನ 'ಹನಿಮೂನ್' ವೆಬ್ ಸರಣಿಯ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಸರಸ, ಹಾಸ್ಯ, ಬಾಂದವ್ಯದ ಕಥನವನ್ನು ಹೇಳುವ ಪ್ರಯತ್ನ ಟ್ರೇಲರ್‌ನಲ್ಲಿ ಕಾಣುತ್ತಿದೆ.

  ನವ ವಧು-ವರರು ಹನಿಮೂನ್‌ಗಾಗಿ ಕೇರಳಕ್ಕೆ ಹೋಗುವುದು ಅಲ್ಲಿ ಅವರಿಬ್ಬರ ನಡುವೆ ನಡೆವ ಘಟನೆಗಳೇ 'ಹನಿಮೂನ್' ವೆಬ್ ಸರಣಿಯ ಕತೆ.

  ಪೋಷಕಪಾತ್ರಗಳಲ್ಲಿ ನಟಿಸುತ್ತಿದ್ದ ನಾಗಭೂಷಣ್ ವೆಬ್ ಸರಣಿ ಮೂಲಕ ಮುಖ್ಯಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ. ನಾಯಕಿಯಾಗಿ ಸಂಜನಾ ಆನಂದ್ ಇದ್ದಾರೆ. ಲೂಸಿಯಾ ಪವನ್, ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಈ ವೆಬ್ ಸರಣಿಯನ್ನು ಶಿವರಾಜ್ ಕುಮಾರ್, ನಿವೇದಿತಾ ಶಿವರಾಜ್‌ಕುಮಾರ್ ಹಾಗೂ ಸಖತ್ ಸ್ಟುಡಿಯೋ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಕತೆಯನ್ನು ನಾಗಭೂಷಣ್ ಬರೆದಿದ್ದು, ನಿರ್ದೇಶನವನ್ನು ಸಖತ್ ಸ್ಟುಡಿಯೋಸ್ ತಂಡ ಮಾಡಿದೆ.

  ಸಂಗೀತವನ್ನು ವಾಸುಕಿ ವೈಭವ್ ನೀಡಿದ್ದು, ಶ್ರೀಷಾ ಕುಡುವಳ್ಳಿ, ರಾಹುಲ್ ರಾಯ್ ಅವರುಗಳು ಕೇರಳದ ಸುಂದರ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

  'ಹನಿಮೂನ್' ವೆಬ್ ಸರಣಿ ಇದೇ ಹೆಸರಲ್ಲಿ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಅಲ್ಲು ಅರವಿಂದ್ ಅವರ 'ಆಹಾ' ಒಟಿಟಿಯಲ್ಲಿ ನವೆಂಬರ್ 27 ರಂದು ವೆಬ್ ಸರಣಿಯನ್ನು ನೋಡಬಹುದಾಗಿದೆ.

  English summary
  Kannada web series 'Honeymoon' trailer released. Web series produced by Shiva Rajkumar. Its releasing in Telugu also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X