For Quick Alerts
  ALLOW NOTIFICATIONS  
  For Daily Alerts

  Kantara on OTT : ಒಟಿಟಿಗೆ ಬಂದೇ ಬಿಡ್ತು 'ಕಾಂತಾರ': ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ!

  By ಫಿಲ್ಮಿಬೀಟ್ ಡೆಸ್ಕ್
  |

  ಬಿಡುಗಡೆ ಆಗಿ 50 ದಿನಗಳ ಬಳಿಕವೂ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ.

  'ಕಾಂತಾರ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವ ಬಗ್ಗೆ ಹಲವು ಊಹಾ ಪೋಹಗಳು ಹರಿದಾಡುತ್ತಿದ್ದವು. ಇದೀಗ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದ್ದು, ಸಿನಿಮಾವು ನವೆಂಬರ್ 24 ರಂದು ಅಂದರೆ ಇಂದು ಮಧ್ಯರಾತ್ರಿಯಿಂದಲೇ ಅಮೆಜಾನ್ ಪ್ರೈಂನಲ್ಲಿ ಸ್ಕ್ರೀಮ್ ಆಗಲಿದೆ.

  ಆದರೆ ಇಲ್ಲಿಯೂ ಒಂದು ಟ್ವಿಸ್ಟ್ ಇದೆ. 'ಕಾಂತಾರ' ಸಿನಿಮಾವು ಕೇವಲ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಮಾತ್ರವೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಹಿಂದಿ ಭಾಷೆಯಲ್ಲಿ ಅಮೆಜಾನ್‌ನಲ್ಲಿ ಬಿಡುಗಡೆ ಆಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.

  ಹಿಂದಿ ಆವೃತ್ತಿಯನ್ನು ಒಟಿಟಿಗೆ ನೀಡಿಲ್ಲ!

  ಹಿಂದಿ ಆವೃತ್ತಿಯನ್ನು ಒಟಿಟಿಗೆ ನೀಡಿಲ್ಲ!

  ಒಟಿಟಿಯಲ್ಲಿ ಬಿಡುಗಡೆ ಆಗುವ ಸಿನಿಮಾಗಳು ತಮ್ಮ ಮೂಲ ಭಾಷೆಯ ಜೊತೆಗೆ ಇತರ ದಕ್ಷಿಣ ಭಾಷೆ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುವುದು ಸಾಮಾನ್ಯ. ಆದರೆ 'ಕಾಂತಾರ' ಸಿನಿಮಾವು ದಕ್ಷಿಣದ ಭಾಷೆಗಳಲ್ಲಿ ಮಾತ್ರವೇ ಅಮೆಜಾನ್‌ನಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ಮಾಪಕರಾದ 'ಹೊಂಬಾಳೆ' ಫಿಲಮ್ಸ್‌ ನವರು ಹಿಂದಿ ಭಾಷೆಯ ಹಕ್ಕನ್ನು ಬೇರೆ ಒಟಿಟಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ.

  ನೆಟ್‌ಫ್ಲಿಕ್ಸ್‌ಗೆ 'ಕಾಂತಾರ' ಹಿಂದಿ ಆವೃತ್ತಿ?

  ನೆಟ್‌ಫ್ಲಿಕ್ಸ್‌ಗೆ 'ಕಾಂತಾರ' ಹಿಂದಿ ಆವೃತ್ತಿ?

  'ಕಾಂತಾರ' ಸಿನಿಮಾವು ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿರುವ ಕಾರಣ, ಈ ಸಿನಿಮಾವನ್ನು ಒಟಿಟಿಯ ಮೂಲಕ ಪರದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ತಲುಪಿಸುವ ಯೋಜನೆಯೊಂದಿಗೆ ಸಿನಿಮಾದ ಹಿಂದಿ ವರ್ಷನ್‌ ಅನ್ನು ಅಮೆಜಾನ್‌ಗೆ ನೀಡದೆ, ವಿಶ್ವಮಟ್ಟದ ಮಾರುಕಟ್ಟೆ ಹೊಂದಿರುವ ನೆಟ್‌ಫ್ಲಿಕ್ಸ್‌ ಒಟಿಟಿಗೆ ನೀಡುವ ಸಾಧ್ಯತೆ ಇದೆ. ಹಿಂದಿ ವರ್ಷನ್ ಅನ್ನು ನೆಟ್‌ಫ್ಲಿಕ್ಸ್‌ಗೆ ನೀಡುವುದರಿಂದ ಸಿನಿಮಾವು ಭಾರತಯೇತರ ಪ್ರೇಕ್ಷಕರನ್ನು ಸುಲಭವಾಗಿ ತಲುಪುತ್ತದೆ ಎಂಬುದು ನಿರ್ಮಾಣ ಸಂಸ್ಥೆಯ ಯೋಜನೆ.

  'RRR' ಮಾದರಿ ಅನುಸರಿಸುತ್ತಿರುವ 'ಕಾಂತಾರ'

  'RRR' ಮಾದರಿ ಅನುಸರಿಸುತ್ತಿರುವ 'ಕಾಂತಾರ'

  ಇದೇ ಮಾದರಿಯನ್ನು ರಾಜಮೌಳಿ ನಿರ್ದೇಶನದ 'RRR' ಉಪಯೋಗಿಸಿತ್ತು. 'RRR' ಸಿನಿಮಾವು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಆವೃತ್ತಿಯು ಜೀ5 ಗೆ ಮಾರಾಟ ಮಾಡಲಾಗಿತ್ತು. ಆದರೆ ಹಿಂದಿ ಆವೃತ್ತಿಯನ್ನು ಮಾತ್ರವೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಯ್ತು. ಇದರಿಂದ ವಿಶ್ವಮಟ್ಟದಲ್ಲಿ 'RRR' ಸಿನಿಮಾ ಬಹಳ ದೊಡ್ಡ ಹಿಟ್ ಆಯಿತು. ಹಾಲಿವುಡ್‌ನ ಖ್ಯಾತ ಚಿತ್ರಕರ್ಮಿಗಳು ಸಹ ನೆಟ್‌ಫ್ಲಿಕ್ಸ್‌ನಲ್ಲಿ 'RRR' ಸಿನಿಮಾವನ್ನು ನೋಡಿ ಮೆಚ್ಚಿಕೊಂಡರು. ಅದರಿಂದಾಗಿ ಅಮೆರಿಕ ಸೇರಿದಂತೆ ಹಲವೆಡೆ ಮತ್ತೊಮ್ಮೆ 'RRR' ಸಿನಿಮಾದ ವಿಶೇಷ ಸ್ಕ್ರೀನಿಂಗ್, ಜಪಾನ್‌ನಲ್ಲಿ ಬಿಡುಗಡೆಗಳು ನಡೆದು ಸಿನಿಮಾಕ್ಕೆ ದೊಡ್ಡ ಮಟ್ಟದ ಲಾಭವಾಯ್ತು.

  400 ಕೋಟಿ ಗಳಿಸಿದ 'ಕಾಂತಾರ'

  400 ಕೋಟಿ ಗಳಿಸಿದ 'ಕಾಂತಾರ'

  ಆದರೆ 'ಕಾಂತಾರ'ದ ಹಿಂದಿ ವರ್ಷನ್ ಅನ್ನು ಎಂದು ಮತ್ತು ಯಾವ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಅಮೆಜಾನ್ ಪ್ರೈಂನಲ್ಲಿ ಮಾತ್ರ ನವೆಂಬರ್ 24 ರಿಂದಲೇ ಸ್ಟ್ರೀಮ್ ಆಗಲಿದೆ. ಈ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ 400 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. 400 ಕೋಟಿ ಘಟ್ಟ ತಲುಪುತ್ತಿದ್ದಂತೆ ಸಿನಿಮಾವನ್ನು ಒಟಿಟಿಗೆ ನೀಡಲಾಗಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಪ್ತಮಿ ಗೌಡ ನಾಯಕಿ, ಕಿಶೋರ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾವು ದೈವಗಳ ಕುರಿತಾದ ಕತೆಯನ್ನು ಒಳಗೊಂಡಿದೆ.

  English summary
  Kantara movie releasing on Amazon Prime on November 24 but only in Kannada, Telugu, Tamil and Malayalam languages. Hindi version not releasing in Amazon Prime.
  Wednesday, November 23, 2022, 17:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X