Don't Miss!
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- News
ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 9ರಂದು ಮಾನ್ಸೂನ್ ರಾಗ, ಕಾಂತಾರ ಜತೆ ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ
ಕಳೆದ ಎರಡು ಮೂರು ತಿಂಗಳುಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಅನೇಕ ಹಿಟ್ ಚಿತ್ರಗಳು ನಾಳೆ ( ಡಿಸೆಂಬರ್ 9 ) ಓಟಿಟಿ ವೇದಿಕೆಗೆ ಲಗ್ಗೆ ಇಡಲಿವೆ. ಅದರಲ್ಲೂ ವಿಶೇಷವಾಗಿ ಅತಿಹೆಚ್ಚು ಬೇಡಿಕೆಯನ್ನು ಹುಟ್ಟುಹಾಕಿದ್ದ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಹಿಂದಿ ವರ್ಷನ್ ಕೂಡ ನಾಳೆ ಓಟಿಟಿಗೆ ಲಗ್ಗೆ ಇಡಲಿದ್ದು, ಇದರ ಜತೆಗೆ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಮಾನ್ಸೂನ್ ರಾಗ ಸಹ ಇದೇ ದಿನ ಓಟಿಟಿಗೆ ಲಗ್ಗೆ ಇಡಲಿದೆ.
ಹೀಗೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ತಯಾರಾದ ಈ ಎರಡು ಚಿತ್ರಗಳ ಜತೆ ಡಿಸೆಂಬರ್ 9ರಂದು ವಿವಿಧ ಭಾಷೆಗಳ ಹಲವು ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿವೆ. ಚಿತ್ರಮಂದಿರದಲ್ಲಿ ಈ ಚಿತ್ರಗಳು ಬಿಡುಗಡೆಯಾದಾಗ ಮಿಸ್ ಮಾಡಿಕೊಂಡವರು ಹಾಗೂ ಮತ್ತೊಮ್ಮೆ ನೋಡಬೇಕಿತ್ತು ಎಂದುಕೊಂಡಿದ್ದವರಿಗೆ ಸದ್ಯ ಓಟಿಟಿಯಲ್ಲಿ ಈ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಲಭಿಸಲಿದೆ.
ಇನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳ ಜತೆ ನೇರವಾಗಿ ಓಟಿಟಿಯಲ್ಲಿಯೂ ಸಹ ಕೆಲ ಚಿತ್ರಗಳು ಬಿಡುಗಡೆಗೊಳ್ಳಲಿದ್ದು, ನಾಳೆ ( ಡಿಸೆಂಬರ್ 9 ) ಓಟಿಟಿಗೆ ಲಗ್ಗೆ ಇಡುತ್ತಿರುವ ಎಲ್ಲಾ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

ಜೀ 5ನಲ್ಲಿ ಬಿಡುಗಡೆಯಾಗುವ ಚಿತ್ರಗಳು
ಡಿಸೆಂಬರ್ 9ರಂದು ಜೀ 5ನಲ್ಲಿ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ ಇಲ್ಲಿದೆ..
* ನಿತಿನ್ ನಟನೆಯ ಮಾಚೆರ್ಲ ನಿಯೋಜಕವರ್ಗಂ ( ತೆಲುಗು )
* ಧನಂಜಯ್ ಅಭಿನಯದ ಮಾನ್ಸೂನ್ ರಾಗ ( ಕನ್ನಡ )
* ಕಾಫಿ ವಿತ್ ಕಾದಲ್ ( ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ )
* ಬ್ಲರ್ ( ಹಿಂದಿ )
* ಮಿನಿ ( ಬೆಂಗಾಲಿ )

ಸೋನಿ ಲಿವ್
* ಲೈಕ್, ಶೇರ್ & ಸಬ್‌ಸ್ಕ್ರೈಬ್ ( ತೆಲುಗು )
* ವಿಟ್‌ನೆಸ್ ( ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ )
* ರಾಯ್ ( ಮಲಯಾಳಂ )
* ಫಾಡು, ಹಿಂದಿ ( ಸಿರೀಸ್, ಸೀಸನ್ 1 )

ಹಾಟ್‌ಸ್ಟಾರ್
* ಫಾಲ್ ( ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ) ಸಿರೀಸ್, ಸೀಸನ್ 1
* ಕನೆಕ್ಟ್ ( ಕೊರಿಯನ್ ) ಸಿರೀಸ್, ಸೀಸನ್ 1
* ನೈಟ್ ಅಟ್ ಮ್ಯೂಸಿಯಂ ( ಇಂಗ್ಲಿಷ್ )
* ವೀಕೆಂಡ್ ಫ್ಯಾಮಿಲಿ ( ಇಂಗ್ಲಿಷ್ ) ಕ್ರಿಸ್‌ಮಸ್ ಸ್ಪೆಷಲ್ ಸಿರೀಸ್

ನೆಟ್‌ಫ್ಲಿಕ್ಸ್
* ಕಾಂತಾರ ( ಹಿಂದಿ )
* ಕ್ಯಾಟ್ ( ಹಿಂದಿ ) ಸಿರೀಸ್, ಸೀಸನ್ 1
* ಮನಿ ಹೈಸ್ಟ್ ( ಕೊರಿಯನ್ ) ಸಿರೀಸ್ ಪಾರ್ಟ್ 2
* ಡ್ರ್ಯಾಗನ್ ಏಜ್ ಅಬ್ಸಲ್ಯೂಷನ್ ( ಇಂಗ್ಲಿಷ್ ) ಸಿರೀಸ್, ಸೀಸನ್ 1
* ಡ್ರೀಮ್ ಹೋಮ್ ಮೇಕ್ ಓವರ್ ( ಇಂಗ್ಲಿಷ್ ) ರಿಯಾಲಿಟಿ ಸಿರೀಸ್, ಸೀಸನ್ 4
* ಹವ್ ಟು ರುಯಿನ್ ಕ್ರಿಸ್‌ಮಸ್ ( ಇಂಗ್ಲಿಷ್ ) ಸಿರೀಸ್, ಸೀಸನ್ 3

ಆಹಾ ಹಾಗೂ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗುವ ಚಿತ್ರಗಳು
ಡಿಸೆಂಬರ್ 9ರಂದು ಆಹಾ ಹಾಗೂ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ
* ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಚಿತ್ರ ( ಪ್ರೈಮ್ ವಿಡಿಯೊ )
* ಊರ್ವಶಿವೋ ರಾಕ್ಷಸಿವೋ ( ತೆಲುಗು, ಆಹಾ ಓಟಿಟಿಯಲ್ಲಿ )
* ರತ್ತಸಾಚ್ಚಿ, ತಮಿಳು ( ಆಹಾ ತಮಿಳು )