twitter
    For Quick Alerts
    ALLOW NOTIFICATIONS  
    For Daily Alerts

    ಕೇರಳ ಬಿಡುಗಡೆ ಮಾಡುತ್ತಿದೆ ಭಾರತದ ಮೊದಲ ಸರ್ಕಾರಿ ಒಡೆತನದ ಒಟಿಟಿ!

    |

    ಕೋವಿಡ್ ಬಳಿಕ ಒಟಿಟಿಗಳು ತೀವ್ರ ವೇಗದಲ್ಲಿ ಪ್ರಗತಿ ಸಾಧಿಸಿವೆ. ಕೋವಿಡ್ ಸಮಯದಲ್ಲಿ ಸಿಕ್ಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ ಈ ಒಟಿಟಿಗಳು.

    ಮನೊರಂಜನೆ, ಶಿಕ್ಷಣ, ಮಾಹಿತಿ ಅನೇಕಗಳ ಅಡಕವಾಗಿರುವ ಒಟಿಟಿಗಳಿಗೆ ವಿಶ್ವದಾದ್ಯಂತ ಒಳ್ಳೆಯ ವೀಕ್ಷಕ ವರ್ಗವಿದೆ. ಭಾರತದಲ್ಲಿಯೂ ದೊಡ್ಡ ಸಂಖ್ಯೆಯ ಜನ ಒಟಿಟಿ ಬಳಸುತ್ತಾರೆ. ಕೋಟ್ಯಂತರ ಮಂದಿ ವಿವಿಧ ಒಟಿಟಿಗಳ ಚಂದಾದಾರರಾಗಿದ್ದಾರೆ.

    ಇದೀಗ ಭಾರತದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಒಟಿಟಿ ಬಿಡುಗಡೆ ಮಾಡಲು ಮುಂದಾಗಿದೆ. ಆ ಮೂಲಕ ಕಡಿಮೆ ದರದಲ್ಲಿ ತನ್ನ ರಾಜ್ಯದ ಜನರಿಗೆ ಮಾಹಿತಿ, ಮನೊರಂಜನೆ ಒದಗಿಸಲು ಮುಂದಾಗಿದೆ.

    Kerala Releasing Indias First State Owned OTT In November

    ಕೇರಳ ರಾಜ್ಯವು ನವೆಂಬರ್ 1 ರಂದು ಭಾರತದ ಮೊದಲ ಸರ್ಕಾರಿ ಒಡೆತನದ ಒಟಿಟಿಯನ್ನು ಬಿಡುಗಡೆ ಮಾಡಲಿದೆ. ಈ ವಿಷಯವನ್ನು ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅಧಿಕೃತಪಡಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಒಟಿಟಿಯ ಹೆಸರು ಬಿಡುಗಡೆ ಕಾರ್ಯಕ್ರಮವೂ ನಡೆದಿದೆ.

    ಒಟಿಟಿಗೆ ಸಿಸ್ಪೇಸ್ ಎಂದು ಹೆಸರಿಡಲಾಗಿದ್ದು, ಒಟಿಟಿ ಮೂಲಕ ಕೇರಳದ ಜನರಿಗೆ ಸಿನಿಮಾಗಳು, ವೆಬ್ ಸರಣಿ, ಡಾಕ್ಯುಮೆಂಟರಿ, ಕಿರು ಚಿತ್ರಗಳನ್ನು ಒದಗಿಸಲಾಗುತ್ತದೆ.

    ಸಿಸ್ಪೇಸ್ ಒಟಿಟಿಯನ್ನು ಕೇರಳದ ಸಿನಿಮಾ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಪರವಾಗಿ ನಿರ್ಮಾಣ ಮಾಡಿದೆ. ಈ ಒಟಿಟಿಯು ಸಿನಿಮಾಗಳನ್ನು ಅದರ ಕಲೆಯ, ಮೌಲ್ಯದ ಆಧಾರದಲ್ಲಿ ಪ್ರದರ್ಶನ ಮಾಡಲಿದೆ, ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಂಸ್ಕೃತಿ ಸಚಿವರು ಹೇಳಿದ್ದಾರೆ.

    ಕೇರಳ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಅತ್ಯುತ್ತಮ ಸಿನಿಮಾಗಳು, ಡಾಕ್ಯುಮೆಂಟರಿ, ಕಿರು ಚಿತ್ರಗಳನ್ನು ಸಹ ಸಿಸ್ಪೇಸ್ ಒಟಿಟಿಯಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸಿ ಸ್ಪೇಸ್‌ನಲ್ಲಿ ಸಿನಿಮಾ ಪ್ರದರ್ಶಿಸಲು ನೊಂದಾವಣಿ ಕಾರ್ಯ ಜೂನ್ 1 ರಿಂದ ಆರಂಭವಾಗಲಿದೆ.

    ''ನಮ್ಮ ಒಟಿಟಿಯು ಸಿನಿಮಾದ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ. ಒಟಿಟಿಯು ಮಲಯಾಳಂ ಸಿನಿಮಾರಂಗದ ಪ್ರಗತಿಗೆ ಸಹಕಾರಿಯಾಗಲಿದೆ. ಅಲ್ಲದೆ, ಸಿಸ್ಪೇಸ್ ಒಟಿಟಿಯಲ್ಲಿ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಸಿನಿಮಾಗಳನ್ನಷ್ಟೆ ಪ್ರದರ್ಶಿಸಲಾಗುವುದು'' ಎಂದಿದ್ದಾರೆ ಸಚಿವ ಚೆರಿಯನ್.

    ''ಸಿ ಸ್ಪೇಸ್ ಒಟಿಟಿಯು ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಲಾಭ ಹಂಚಿಕೆ ಮಾದರಿಯಲ್ಲಿ ವ್ಯವಹಾರ ಮಾಡಲಿದೆ. ಜೂನ್ 1 ರಿಂದ ಸಿನಿಮಾ ಪ್ರದರ್ಶನಕ್ಕೆ ನೊಂದಣಿ ಆರಂಭವಾಗಲಿದ್ದು, ನೊಂದಣಿ ಕಾರ್ಯವು ಚಿತ್ರಾಂಜಲಿ ಸ್ಟುಡಿಯೋ ಹಾಗೂ ಕೇರಳ ರಾಜ್ಯ ಸಿನಿಮಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯಲಿದೆ ಎಂದಿದ್ದಾರೆ.

    English summary
    Kerala government's OTT, State owned OTT, Kerala Government, OTT, India's First State Owned OTT,
    Tuesday, May 24, 2022, 10:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X