For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯಲ್ಲಿ ಬಿದ್ದರೇ ಶಮಿತಾ ಶೆಟ್ಟಿ? ಒಂದು ಮುತ್ತಿನ ಕಥೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್‌ಬಾಸ್ ಒಟಿಟಿ ಮನೆಯಲ್ಲಿರುವ ಶಮಿತಾ ಶೆಟ್ಟಿ ಒಂದೊಂದು ವಾರಕ್ಕೆ ಒಂದೊಂದು ವ್ಯಕ್ತಿತ್ವದ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮೊದಲ ವಾರ ಬಬ್ಲಿ ಹುಡುಗಿಯಂತೆ ಕಾಣಿಸಿಕೊಂಡಿದ್ದ ಶಮಿತಾ ಆ ನಂತರ ವರ್ಗ ಅಸಮಾನತೆಯ ಸಂತ್ರಸ್ಥೆಯಂತೆ ಕಾಣಿಸಿಕೊಂಡರು. ಆ ನಂತರ ತಮ್ಮ ವಿರುದ್ಧ ಮಾತನಾಡಿದವರ ವಿರುದ್ಧ ತಿರುಗಿ ಬಿದ್ದ ಶಮಿತಾ ಈಗ ಪ್ರೇಮಿಯ ಅವತಾರ ಆವಾಹಿಸಿಕೊಂಡಂತಿದೆ.

  ಬಿಗ್‌ಬಾಸ್ ಮನೆಗಳಲ್ಲಿ ಪ್ರೀತಿ ಪ್ರೇಮ ಮಾಮೂಲಿನಂತಾಗಿದೆ. ಹಿಂದಿ ಬಿಗ್‌ಬಾಸ್‌ ಮನೆಯಲ್ಲಿ ಒಬ್ಬನೇ ಸ್ಪರ್ಧಿ ಇಬ್ಬರು ಸ್ಪರ್ಧಿಗಳೊಟ್ಟಿಗೆ ಪ್ರೀತಿಗೆ ಬಿದ್ದ ಗಾಢವಾಗಿ ಚುಂಬಿಸಿದ ಉದಾಹರಣೆಗಳೂ ಇವೆ. ಇದೀಗ ಮೊದಲ ಬಿಗ್‌ಬಾಸ್ ಒಟಿಟಿಯಲ್ಲೂ ಪ್ರೇಮಕತೆಯೊಂದು ನಿಧಾನಕ್ಕೆ ಆರಂಭವಾಗಿದೆ.

  ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪತ್ ಮಧ್ಯೆ ಪ್ರೇಮಕತೆಯೊಂದು ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆರಂಭದ ದಿನಗಳಲ್ಲಿ ಈ ಇಬ್ಬರೂ ಕೆಲವು ಕಾರಣಗಳಿಗೆ ಪರಸ್ಪರ ವಾದ-ವಿವಾದ ಮಾಡಿದರಾದರೂ ಆ ನಂತರ ಪರಸ್ಪರ ಬಹಳ ಆತ್ಮೀಯರಾದರು. ಕೆಲವು ದಿನಗಳ ಹಿಂದೆ ಶಮಿತಾ ರಾಕೇಶ್ ಭುಜದ ಮೇಲೆ ತಲೆ ಇಟ್ಟು ಕಣ್ಣೀರು ಹಾಕಿದ್ದರು.

  ಶಮಿತಾಗೆ ಮುತ್ತುಕೊಟ್ಟ ರಾಕೇಶ್

  ಶಮಿತಾಗೆ ಮುತ್ತುಕೊಟ್ಟ ರಾಕೇಶ್

  ನಿನ್ನೆಯ ಎಪಿಸೋಡ್‌ನಲ್ಲಿಯಂತೂ ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್, ಶಮಿತಾಗೆ ಮುತ್ತು ಕೊಟ್ಟು ಎಬ್ಬಿಸಿದ್ದಾರೆ. ಶಮಿತಾ ಸಹ ಮುಗುಳ್ನಗುತ್ತಾ ರಾಕೇಶ್‌ನ ಸಿಹಿಮುತ್ತನ್ನು ಸ್ವೀಕರಿಸಿದ್ದಾರೆ. ಆ ನಂತರ ಹೊರಗೆ ಬಂದು ಇಬ್ಬರೂ ಒಟ್ಟಿಗೆ ಹಾಡಿಗೆ ಸಣ್ಣದಾಗಿ ಹೆಜ್ಜೆ ಸಹ ಹಾಕಿದ್ದಾರೆ.

  ರಾಕೇಶ್‌ಗೆ ಹೃದಯ ಕೊಟ್ಟ ಶಮಿತಾ

  ರಾಕೇಶ್‌ಗೆ ಹೃದಯ ಕೊಟ್ಟ ಶಮಿತಾ

  ನಂತರ ಸ್ಪರ್ಧಿಗಳ ನಡುವೆ ಏರ್ಪಡಿಸಲಾದ ಟಾಸ್ಕ್ ಒಂದರಲ್ಲಿ ಶಮಿತಾ ಶೆಟ್ಟಿ ತಮ್ಮ ಹೃದಯವನ್ನು ರಾಕೇಶ್‌ಗೆ ಕೊಟ್ಟಿದ್ದಾರೆ. ಶಮಿತಾ ಶೆಟ್ಟಿ ನೀಡಿದ ಹೃದಯ ಸ್ವೀಕರಿಸಿದ ರಾಕೇಶ್, ''ಶಮಿತಾ ಕೊಟ್ಟ ಹೃದಯವನ್ನು ಖುಷಿಯಿಂದ ಸ್ವೀಕರಿಸುತ್ತೇನೆ. ಮೊದಲಿಗೆ ನಾವಿಬ್ಬರೂ ತುಸು ಜಗಳ ಮಾಡಿದೆವು. ನಂತರ ದಿವ್ಯಾರ ಮಾತಿನಂತೆ ಶಮಿತಾ ಜೊತೆ ಮಾತನಾಡಲು ಆರಂಭಿಸಿದೆ. ಆ ಬಳಿಕವೇ ಶಮಿತಾಳ ವ್ಯಕ್ತಿತ್ವ ಅರ್ಥವಾಗಿ ನಾವು ಹೆಚ್ಚು ಕ್ಲೋಸ್ ಆದೆವು'' ಎಂದಿದ್ದಾರೆ ರಾಕೇಶ್.

  ಶಮಿತಾ ನನಗೆ ಸೇರಿದವಳು ಎಂಬ ಭಾವ ಇದೆ: ರಾಕೇಶ್

  ಶಮಿತಾ ನನಗೆ ಸೇರಿದವಳು ಎಂಬ ಭಾವ ಇದೆ: ರಾಕೇಶ್

  ಮುಂದುವರೆದು, ''ನಾನು ಯಾರೊಂದಿಗೆ ಹತ್ತಿರವಾಗುತ್ತೇನೊ ಅವರೊಂದಿಗೆ ಬಹಳ ನಿಷ್ಠೆಯಿಂದ ಇರುತ್ತೇನೆ. ಇಲ್ಲಿಯೂ ಅಷ್ಟೆ ಶಮಿತಾ ಜೊತೆ ನಾನು ನಿಷ್ಠೆಯಿಂದ ಇರುತ್ತೇನೆ. ಶಮಿತಾ ಒಂದು ರೀತಿ ನನಗೆ ಸೇರಿದವಳು ಎಂಬ ಭಾವ ನನಗೆ ಉಲ್ಬಣವಾಗಿದೆ'' ಎಂದು ರಾಕೇಶ್ ಹೇಳಿದ್ದಾರೆ. ರಾಕೇಶ್ ಮಾತಿಗೆ ಭಾವುಕರಾದ ಶಮಿತಾ ರಾಕೇಶ್‌ ಅನ್ನು ತಬ್ಬಿಕೊಂಡು ಅವರ ಮಾತನ್ನು ಅನುಮೋದಿಸಿದ್ದಾರೆ.

  ಸಿನಿಮಾದವಳೆಂಬ ಕಾರಣಕ್ಕೆ ದೂರ ಇಡಲಾಗಿದೆ: ಶಮಿತಾ

  ಸಿನಿಮಾದವಳೆಂಬ ಕಾರಣಕ್ಕೆ ದೂರ ಇಡಲಾಗಿದೆ: ಶಮಿತಾ

  ಕೆಲವು ದಿನಗಳ ಹಿಂದೆ ಅಳುಬುರುಕಿಯಾಗಿದ್ದ ಶಮಿತಾ ಶೆಟ್ಟಿ ಇದೀಗ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮನ್ನು ಬಿಗ್‌ಬಾಸ್‌ ಒಟಿಟಿ ಮನೆಯ ಇತರ ಸ್ಪರ್ಧಿಗಳು ಉದ್ದೇಶಪೂರ್ವಕವಾಗಿ ದೂರ ಇಟ್ಟಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ''ಈ ಮನೆಯಲ್ಲಿ ಕ್ಲಾಸ್ ಆಧಾರದ ಮೇಲೆ ವಿಭಾಗಗಳು ಆಗಿಬಿಟ್ಟಿವೆ. ನಾನು ಸಿನಿಮಾ ರಂಗದಿಂದ ಬಂದಿದ್ದೇನೆ. ಸಿನಿಮಾ ಕುಟುಂಬದಿಂದ ಬಂದಿದ್ದೇನೆ (ಶೆಟ್ಟಿ ಕುಟುಂಬ) ನಾನು ನಟಿ, ನಾನು ಕ್ಲಾಸಿ ಎಂಬ ಕಾರಣಕ್ಕೆ ನನ್ನನ್ನು ಭಿನ್ನವಾಗಿ ನೋಡಲಾಗುತ್ತಿದೆ. ನಾನು ಸಿನಿಮಾ ಜಗತ್ತಿನ ಬಗ್ಗೆ ಮಾತನಾಡುತ್ತೇನೆ, ನನಗೆ ಅವಕಾಶ ಕೊಟ್ಟ ಜನರ ಬಗ್ಗೆ ಮಾತನಾಡಿದ್ದೇನೆ. ನನಗೆ ಅವಕಾಶ ಕೊಟ್ಟ ಜನ ಹೊರಗಿದ್ದಾರೆ. ಈ ಮನೆಯ ಜನರು ನನಗೆ ಅವಕಾಶ ಕೊಟ್ಟಿಲ್ಲ'' ಎಂದಿದ್ದರು ಶಮಿತಾ.

  ಅಕ್ಕನ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದ ಶಮಿತಾ

  ಅಕ್ಕನ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದ ಶಮಿತಾ

  ಅದಕ್ಕೂ ಮುನ್ನ ಅಕ್ಕ ಶಿಲ್ಪಾ ಶೆಟ್ಟಿಯಿಂದ ತಾವು ಎದುರಿಸಿದ ಸಮಸ್ಯೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದ ಶಮಿತಾ, ''''ಶಿಲ್ಪಾ ಶೆಟ್ಟಿಯ ತಂಗಿಯಾಗಿರುವುದು ಸುಲಭದ ಕಾರ್ಯವಲ್ಲ. ಎಲ್ಲರೂ ನನ್ನನ್ನು ಅಕ್ಕನಿಗೆ ಹೋಲಿಸಿ ಮಾತನಾಡುತ್ತಿದ್ದರು. ಅದು ನನಗೆ ಬಹಳ ಸಮಸ್ಯೆ ಕೊಟ್ಟಿದೆ. ಆದರೆ ನಾನು ಅಂಥಹಾ ಅಕ್ಕನನ್ನು ಪಡೆಯಲು ಪುಣ್ಯ ಮಾಡಿದ್ದೆ. ಆಕೆಯಿಂದಾಗಿ ನಾನು ಇಷ್ಟು ವರ್ಷ ಸಿನಿಮಾರಂಗದಲ್ಲಿ ಇರಲು ಸಾಧ್ಯವಾಯಿತು. ಆದರೆ ಆಕೆಯ ನೆರಳಿನಿಂದ ಆಚೆ ಬಂದು ನಾನು ನನ್ನದೇ ಆದ ಗುರುತನ್ನು ಪಡೆದುಕೊಂಡೆ'' ಎಂದಿದ್ದರು.

  English summary
  Love story gearing up between actress Shamita Shetty and Raqesh Bapta in Bigg Boss OTT. Raqesh Bapta kissed Shamita Shetty to woke her up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X