For Quick Alerts
  ALLOW NOTIFICATIONS  
  For Daily Alerts

  ವೆಬ್‌ ಸೀರಿಸ್‌ ರೂಪದಲ್ಲಿ 'ಮಹಾಭಾರತ' ಕಾವ್ಯ: ಹುಬ್ಬೇರಿಸುವಂತಿದೆ ಫಸ್ಟ್ ಲುಕ್!

  |

  ಪ್ರಪಂಚದ ಶ್ರೇಷ್ಠ ಗ್ರಂಥಗಳಲ್ಲಿ 'ಮಹಾಭಾರತ' ಕಾವ್ಯಕ್ಕೆ ಪ್ರತ್ಯೇಕವಾದ ಸ್ಥಾನವಿದೆ. ಮೇಲ್ನೋಟಕ್ಕೆ ಇದು ಕೌರವ, ಪಾಂಡವರ ದಾಯಾದಿಗಳ ಯುದ್ಧದ ಕಥೆ ಅನ್ನಿಸಿದರೂ ತತ್ತ್ವ, ನೀತಿ, ದರ್ಶನ, ವಿಜ್ಞಾನ, ಸಮಾಜಶಾಸ್ತ್ರ, ಭೂಗೋಳ, ಚರಿತ್ರೆ, ಕಥೆಯನ್ನು ಒಳಗೊಂಡ ಮಹಾನ್ ಕಾವ್ಯ. 'ಮಹಾಭಾರತ'ವನ್ನು ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು ಒಂದು ಹೋಗಿದೆ. ಆದರೆ ಎರಡೂವರೆ ಗಂಟೆಗಳಲ್ಲಿ ಮಹಾಭಾರತ ಕಾವ್ಯವನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅದರ ಕೆಲ ಭಾಗಗಳನ್ನಷ್ಟೇ ಸಿನಿಮಾಗಳಲ್ಲಿ ಹೇಳಲಾಗಿದೆ. ಇದೀಗ ವೆಬ್‌ ಸೀರಿಸ್ ರೂಪದಲ್ಲಿ ಹೊಸ ತಂತ್ರಜ್ಞಾನ ಆಧರಿಸಿ ಭಾರತದ ಮಹಾಕಾವ್ಯವನ್ನು ಕಟ್ಟಿಕೊಡಲು ವೇದಿಕೆ ಸಿದ್ಧವಾಗಿದೆ.

  'ಮಹಾಭಾರತ' ಕಾವ್ಯವನ್ನು ಹಲವು ಸೀಸನ್‌ಗಳಾಗಿ ನಿರ್ಮಾಣ ಮಾಡುವ ಕಸರತ್ತು ಶುರುವಾಗಿದ್ದು, ಜನಪ್ರಿಯ OTT ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. 2024ರಲ್ಲಿ ಮೊದಲ ಸೀಸನ್ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿರುವ ನಡೆದ ಡಿಸ್ನಿ ಡಿ 23 ಎಕ್ಸ್‌ಪೋದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಿಲಾಗಿದೆ. ಟಾಲಿವುಡ್ ಮೆಗಾ ಪ್ರೊಡ್ಯೂಸರ್ ಅಲ್ಲು ಅರವಿಂದ್ ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಿದ್ದಾರೆ. ಬಾಲಿವುಡ್ ನಿರ್ಮಾಪಕ ಮಧು ಮಂಟೆನಾ ಒಡೆತನದ ಮೈಥೋವರ್ಸ್ ಸ್ಟುಡಿಯೋಸ್ ಮತ್ತು ಅಲ್ಲು ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ 'ಮಹಾಭಾರತ' ವೆಬ್‌ ಸೀರಿಸ್ ನಿರ್ಮಿಸಲಿದ್ದಾರೆ.

  ಈ ವಾರ ಒಟಿಟಿಗೆ ಬರುತ್ತಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿಈ ವಾರ ಒಟಿಟಿಗೆ ಬರುತ್ತಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

  ಹಿಂದೆ ಮಹಾಭಾರತ, ರಾಯಾಯಣ ಕಥೆಗಳನ್ನು ತಾತಾ, ಅಜ್ಜಿ ಹೇಳುತ್ತಿದ್ದರು. ಅವರ ನಿರೂಪಣೆಯಲ್ಲಿ ಭೀಮ, ಅರ್ಜುನರ ಸಾಹಸವನ್ನು, ದುರ್ಯೋಧನನ ಗರ್ವವನ್ನು, ಶ್ರೀಕೃಷ್ಣನ ಲೀಲೆಗಳನ್ನು, ಕುರುಕ್ಷೇತ್ರದ ಘನಘೋರ ಯುದ್ಧವನ್ನು ಕಲ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಸಿನಿಮಾ, ಧಾರಾವಾಹಿ ರೂಪಗಳಲ್ಲಿ ದೃಶ್ಯಕಾವ್ಯವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗುತ್ತಿದೆ. ಇದೀಗ ವೆಬ್‌ ಸೀರಿಸ್ ರೂಪದಲ್ಲಿ ಬಹಳ ಅದ್ಧೂರಿಯಾಗಿ ಮಹಾಭಾರತ ಕಾವ್ಯ ರೂಪ ತಳೆಯುತ್ತಿದೆ.

  ಡಿಸ್ನಿ ಹಾಟ್ ಸ್ಟಾರ್ ಅಧಿಕೃತ ಪ್ರಕಟನೆ

  ಡಿಸ್ನಿ ಹಾಟ್ ಸ್ಟಾರ್ ಅಧಿಕೃತ ಪ್ರಕಟನೆ

  "ಗ್ರೇಟೆಸ್ಟ್ ಎಪಿಕ್- ಹಿಂದೆಂದೂ ನೋಡಿರದ ರೀತಿಯಲ್ಲಿ ಪುನಃ ಹೇಳಲಾಗುತ್ತಿದೆ. ಅದ್ಭುತವಾದ ದೃಶ್ಯಕಾವ್ಯಕ್ಕಾಗಿ ಕಾಯ್ತಾ ಇರಿ. 'ಮಹಾಭಾರತ' ಶೀಘ್ರದಲ್ಲೇ ಬರಲಿದೆ," ಎಂದು ಡಿಸ್ನಿ ಹಾಟ್ ಸ್ಟಾರ್ ಟ್ವೀಟ್ ಮಾಡಿ ತಿಳಿಸಿದೆ. ಮಹಾಭಾರತ ವೆಬ್‌ಸೀರಿಸ್ ಆರ್ಟ್‌ ವರ್ಕ್‌ಗೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೊಗಳನ್ನು ನೋಡಿದವರು ಹುಬ್ಬೇರಿಸಿದ್ದಾರೆ.

  ಕಿರು ತೆರೆಗೆ ಬರಲಿದೆ ರಾಜೀವ್ ಗಾಂಧಿ ಕೊಲೆ ಪ್ರಕರಣಕಿರು ತೆರೆಗೆ ಬರಲಿದೆ ರಾಜೀವ್ ಗಾಂಧಿ ಕೊಲೆ ಪ್ರಕರಣ

  2500 ಕೋಟಿ ರೂ. ಪ್ರಾಜೆಕ್ಟ್!

  2500 ಕೋಟಿ ರೂ. ಪ್ರಾಜೆಕ್ಟ್!

  100, 200 ಅಲ್ಲ ಬರೋಬ್ಬರಿ 2500 ಕೋಟಿ ರೂ. ವೆಚ್ಚದಲ್ಲಿ 'ಮಹಾಭಾರತ' ವೆಬ್‌ಸೀರಿಸ್‌ ನಿರ್ಮಾಣ ಮಾಡುತ್ತಿರುವ ಬಗ್ಗೆ ಚರ್ಚೆ ನಡೀತಿದೆ. ಮುಂದಿನ ದಿನಗಳಲ್ಲಿ ಕಲಾವಿದರು, ತಂತ್ರಜ್ಞರ ಕುರಿತು ಮಾಹಿತಿ ಸಿಗುವ ಸಾಧ್ಯತೆಯಿದೆ. ಹಿಂದಿ, ಇಂಗ್ಲೀಷ್, ತೆಲುಗು, ಕನ್ನಡ ಸೇರಿದಂತೆ ಜಗತ್ತಿನ ಹಲವು ಭಾಷೆಗಳಲ್ಲಿ ಈ ವೆಬ್‌ ಸೀರಿಸ್‌ ನಿರ್ಮಾಣವಾಗಲಿದೆ. ಮತ್ತೆ ಕೆಲವರು ಇದು ಆನಿಮೇಷನ್ ವೆಬ್‌ ಸೀರಿಸ್ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

  ರಾಜಮೌಳಿ ಕನಸಿನ ಸಿನಿಮಾ

  ರಾಜಮೌಳಿ ಕನಸಿನ ಸಿನಿಮಾ

  ಮಹಾಭಾರತ ನಿಜಕ್ಕೂ ಮಹಾಗ್ರಂಥ. ಅಸಂಖ್ಯಾತ ಪಾತ್ರಗಳು ಮತ್ತು ಮುಖ್ಯಪಾತ್ರಗಳನ್ನು ಈ ಕಾವ್ಯದಲ್ಲಿ ನೋಡಬಹುದು. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ವೈಶಿಷ್ಟತೆ ಇದೆ. ವೇದವ್ಯಾಸ ಮಹರ್ಷಿ ಬರೆದಿರುವ ಈ ಕಾವ್ಯವನ್ನು ತೆರೆಗೆ ತರುವುದು ನಿರ್ದೇಶಕ ರಾಜಮೌಳಿ ಕನಸು. 'ಮಹಾಭಾರತ' ಸಿನಿಮಾ ಮಾಡುವ ಕನಸಿನೊಂದಿಗೆ ಜಕ್ಕಣ್ಣ 'ಮಗಧೀರ', 'ಬಾಹುಬಲಿ' ರೀತಿಯ ಕಾಸ್ಟ್ಯೂಮ್ ಡ್ರಾಮಾಗಳನ್ನು ಕಟ್ಟಿಕೊಟ್ಟು ತಾಲೀಮು ನಡೆಸುತ್ತಿದ್ದಾರೆ. ಇದನ್ನು ಅವರು ಬಹಳ ಸಲ ಹೇಳಿಕೊಂಡಿದ್ದಾರೆ.

  ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವೆಬ್‌ ಸೀರಿಸ್

  ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವೆಬ್‌ ಸೀರಿಸ್

  ದಶಕಗಳ ಹಿಂದೆ ಆರ್‌ಬಿ ಚೋಪ್ರಾ 'ಮಹಾಭಾರತ' ಕಾವ್ಯವನ್ನು ಧಾರಾವಾಹಿ ರೂಪದಲ್ಲಿ ಕಟ್ಟಿಕೊಟ್ಟಿದ್ದರು. ದೂರದರ್ಶನದಲ್ಲಿ ಪ್ರಸಾರವಾಗಿ ದಾಖಲೆ ಬರೆದಿತ್ತು. ಅವತ್ತಿನ ತಂತ್ರಜ್ಞಾನ ಬಳಸಿ ಮಾಡಿದ್ದ ಧಾರಾವಾಹಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಇಂದಿನ ತಂತ್ರಜ್ಞಾನ, ವಿಎಫ್‌ಎಕ್ಸ್‌ ಬಳಸಿ ವೆಬ್‌ ಸೀರಿಸ್‌ನ ಬಹಳ ರೋಚಕವಾಗಿ ಕಟ್ಟಿಕೊಡುವ ಸಾಹಸ ನಡೀತಿದೆ.

  English summary
  Mahabharata Web series streaming in Disney Hotstar shares concept art work. The epic story of Mahabharata is going to be one of their most ambitious projects in association with Madhu Mantena, Mythoversestudios, and Allu Entertainment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X