For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಂನಲ್ಲಿ ಈ ಹಬ್ಬದ ಸೀಸನ್‌ಗೆ ಭರಪೂರ ಮನೊರಂಜನೆ

  By ಫಿಲ್ಮಿಬೀಟ್ ಡೆಸ್ಕ್
  |

  ಹಬ್ಬಗಳು ಬಂದವೆಂದರೆ ಎಲ್ಲ ವ್ಯಾಪಾರಗಳು ಗರಿಗೆದರುತ್ತವೆ. ಆಫರ್‌ಗಳ ಸುರಿಮಳೆಯೇ ಆಗುತ್ತದೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷದಿಂದ ಮಂಕಾಗಿದ್ದ ಮಾರುಕಟ್ಟೆ ಈ ವರ್ಷದ ಹಬ್ಬದ ಸೀಸನ್‌ಗೆ ಗರಿಗೆದರಿದೆ.

  ಆನ್‌ಲೈನ್ ಮಾರುಕಟ್ಟೆಗಳಂತೂ ಹಬ್ಬಕ್ಕೆ ಹಲವು ಆಫರ್‌ಗಳನ್ನು ಈಗಾಗಲೇ ಘೋಷಿಸಿವೆ. ಹಬ್ಬದ ವಿಶೇಷ ಸೇಲ್‌ಗಳ ದಿನಾಂಕವನ್ನು ಈಗಾಗಲೇ ಪ್ರಕಟಿಸಿವೆ. ಆನ್‌ಲೈನ್ ಸ್ಟೋರ್ ದೈತ್ಯ ಅಮೆಜಾನ್ ಸಹ ಗ್ರೇಟ್ ಇಂಡಿಯನ್ ಸೇಲ್‌ನ ದಿನಾಂಕವನ್ನು ಪ್ರಕಟಿಸಿದೆ. ಆನ್‌ಲೈನ್ ಸ್ಟೋರ್ ಮಾತ್ರವೇ ಅಲ್ಲದೆ ಅಮೆಜಾನ್ ಪ್ರೈಂ ವಿಡಿಯೋನಲ್ಲಿಯೂ ಹಬ್ಬಕ್ಕೆ ದೊಡ್ಡ ಮನೊರಂಜನಾ ಪ್ಯಾಕೇಜ್‌ ಅನ್ನೇ ಅಮೆಜಾನ್ ನೀಡುತ್ತಿದೆ.

  ಅಮೆಜಾನ್ ವಿಡಿಯೋ ಹಬ್ಬದ ಸೀಸನ್‌ಗೆಂದು ಹಲವು ಹೊಸ ಸಿನಿಮಾಗಳು, ಶೋಗಳನ್ನು ವೀಕ್ಷಕರಿಗಾಗಿ ತರುತ್ತಿದೆ. ವಾರ್ಷಿಕ ಹಾಗೂ ಮಾಸಿಕ ಚಂದಾದಾರಿಕೆಯನ್ನು ಪಡೆದು ವೀಕ್ಷಿಸುವವರಿಗೆ ಈ ಹಬ್ಬದ ಸೀಸನ್‌ನಲ್ಲಿ ಅಮೆಜಾನ್‌ ಪ್ರೈಂನಲ್ಲಿ ಭಾರಿ ಮನರಂಜನೆ ಕಾಯುತ್ತಿದೆ.

  ಪೃಥ್ವಿರಾಜ್ ಸುಕುಮಾರ್ ನಟನೆಯ ಹಿಂದಿ ಸಿನಿಮಾ ಅಂಧಾದುನ್ ರೀಮೇಕ್ 'ಭ್ರಮಂ', ವಿಕ್ಕಿ ಕೌಶನ್ ನಟನೆಯ 'ಸರ್ದಾರ್ ಉದ್ಧಮ್ ಸಿಂಗ್', ತಮಿಳು ನಟ ಸೂರ್ಯ ನಟಿಸಿರುವ 'ಜೈ ಭೀಮ್', ಇಮ್ರಾನ್ ಹಶ್ಮಿ ನಟಿಸಿರುವ ಥ್ರಿಲ್ಲರ್ ಹಿಂದಿ ಸಿನಿಮಾ 'ದೀಬಕ್', ಜೋತಿಕಾ, ಸಮುದ್ರಕಿಣಿ, ಕಲೈಯರಸನ್ ನಟಿಸಿರುವ ತಮಿಳಿನ 'ಉಡನ್ ಪಿರಾಪಿ', ಮರಡೋನಾ ಜೀವನ ಆಧರಿಸಿದ 'ಮರಡೋನಾ; ಬ್ಲೆಸ್ಸಡ್ ಡ್ರೀಮ್ಸ್', 'ಐ ನೋ ವಾಟ್ ಯು ಡಿಡ್ ಲಾಸ್ಟ್ ಸಮ್ಮರ್' ಸರಣಿಯ ಹೊಸ ಸಿನಿಮಾ, 'ದಿ ಗ್ರೀನ್ ನೈಟ್' ಸಿನಿಮಾಗಳು ಈ ಹಬ್ಬದ ಸೀಸನ್‌ಗೆ ಅಮೆಜಾನ್ ಪ್ರೈಂನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆ ಆಗುತ್ತಿವೆ. ಜೊತೆಗೆ 'ಒನ್ ಮೈಕ್ ಸ್ಟ್ಯಾಂಡ್' ಕಾಮಿಡಿ ಶೋನ ಎರಡನೇ ಸೀಸನ್ ಸಹ ಬಿಡುಗಡೆ ಆಗುತ್ತಿದೆ.

  Many Movies And Shows Were Releasing On Amazon Prime For Festival Season

  ಇವುಗಳ ಜೊತೆಗೆ ಇವುಗಳಲ್ಲಿ ಭಾರತೀಯ ನಿರ್ಮಿತ ಅಮೆಜಾನ್ ಮೂಲ ಸರಣಿ 'ಮುಂಬೈ ಡೈರೀಸ್ 26/11', 'ಫ್ಯಾಮಿಲಿ ಮ್ಯಾನ್', 'ಕಾಮಿಕ್‌ಸ್ಟಾನ್,ಬ್ರೆಥ್: ಇಂಟು ದ ಷ್ಯಾಡೊಸ್', 'ಬಂದೀಶ್ ಬಂದಿತ್ಸ್', 'ಪಾತಾಳ್ ಲೋಕ್' , 'ಮಿರ್ಜಪುರ್' ,'ದ ಫಾರ್ಗಾಟನ್ ಆರ್ಮಿ- ಅಜಾದಿ ಕೇ ಲಿಯೇ', 'ಸನ್ ಆಫ್ ದ ಸಾಯಿಲ್ : ಜೈಪುರ್ ಪಿಂಕ್ ಪ್ಯಾಂತರ್ಸ್' , 'ಫೋರ್ ಮೋರ್ ಷೂಟ್ ಪ್ಲೀಸ್', 'ಮೇಡ್ ಇನ್ ಹೆವೆನ್ ಮತ್ತು ಇನ್ಶೈಡ್ ಎಡ್ಜ್'' . ಭಾರತೀಯ ಚಿತ್ರಗಳು ಮುಖ್ಯವಾಗಿ 'ಶೇರ್ಶಾಹ್' , 'ತೂಫಾನ್', 'ಶೇರ್ನಿ', 'ಕೂಲಿ ನಂಬರ್ 1. 'ಅನ್ಪಾಸ್ಡ್' , 'ಗುಲಬೋ ಸಿತಾಬೋ', 'ದುರ್ಗಮಾತೆ', 'ಚಲಾಂಗ್', 'ಶಾಕುಂತಲ ದೇವಿ', 'ಸರ್ಪಟ್ಟ ಪರಂಭರೈ' , 'ಪುತ್ತಂ ಪುದು ಕಾಲೈ' , 'ಸೂರಾರಿ ಪೋಟ್ರು', 'ಪೋನ್ಮಗಳ್ ವಂದಾಳ್' , 'ಫ್ರೆಂಚ್ ಬಿರಿಯಾನಿ', 'ಲಾ' , 'ಸೂಫಿಯಮ್ ಸುಜಾತಯಂ' , 'ಪೆಂಗ್ವಿನ್' , 'ನಿಷಭ್ದಂ','ಮಾರ', 'ವಿ', 'ಸಿ ಯು ಸೂನ್', 'ಭೀಮ ಸೇನ ನಳ ಮಹಾರಾಜ', 'ದೃಶ್ಯಂ 2', 'ಹಲಾಲ್ ಲವ್ ಸ್ಟೋರಿ', 'ಮಿಡಲ್ ಕ್ಲಾಸ್ ಮೇಲೋಡಿಸ್', 'ಹಲೋ ಚಾರ್ಲಿ', 'ಮಾಲಿಕ್' , 'ನಾರಪ್ಪ' ಮತ್ತು ಪ್ರಶಸ್ತಿ ವಿಜೇತ , ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ. ಜಾಗತಿಕವಾಗಿ ಅಮೆಜಾನ್ ಒರಿಜಿನಲ್ಸ್ 'ಸಿಂಡರೆಲ್ಲಾ', 'ವಿತ್ ಔಟ್ ರೆಮೋರ್ಸ್' , 'ದ ಟೊಮೊರೊ ವಾರ್' , 'ಬೋರತ್ ಸಬ್ಸಿಕ್ವೆಂಟ್ ಮೋವಿಫಿಲ್ಮ್, 'ಟಾಮ್ ಕ್ಲಾನ್ಸಿಸ್ ಜಾಕ್ ರಯಾನ್', 'ದ ಬಾಯ್ಸ್' , 'ಹಂಟರ್ಸ್', 'ಕೃಯೆಲ್ ಸಮ್ಮರ್', 'ಫ್ಲೀಬಾಗ್' , ಮತ್ತು 'ದ ಮಾರ್ವೆಲಸ್ ಮಿಸೆಸ್'. ಮಿಸೆಲ್ . ಇವೆಲ್ಲವೂ ಕೂಡ ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆದವರಿಗೆ ಯಾವುದೇ ಶುಲ್ಕವಿಲ್ಲದೇ ಲಭ್ಯವಿದೆ. ಶಿರೋನಾಮೆಯು ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಮತ್ತು ಬಂಗಾಳಿ ಭಾಷೆಯಲ್ಲಿ ಲಭ್ಯವಿದೆ.

  ಅಮೆಜಾನ್ ಪ್ರೈಮ್ ಸದಸ್ಯತ್ವ ಶುಕ್ಲವು ವರ್ಷಕ್ಕೆ 999 ಮತ್ತು ಮಾಸಿಕ 129 ರು ಇದೆ.

  English summary
  Many movies, web series and shows were releasing on amazon prime. Many Indian and foreign movies releasing on amazon prime soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X