For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಮ್ ವಿಡಿಯೋದ ಹೊಸ ಸಿರೀಸ್‌ನಲ್ಲಿ 'ಮಿಲನ' ನಟಿ ಪಾರ್ವತಿ

  |

  ಕೊರೊನಾ ಬಳಿಕ ಜನರು ಓಟಿಟಿ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಥಿಯೇಟರ್‌ನಲ್ಲಿ ಸಿನಿಮಾಗಳನ್ನು ನೋಡುವುದಕ್ಕಿಂತಲೂ ಹೆಚ್ಚಾಗಿ ಓಟಿಟಿಯಲ್ಲಿ ಬರುವ ವೆಬ್ ಸಿರೀಸ್, ಸಂದರ್ಶನಗಳು ಸೇರಿದಂತೆ ಸಿನಿಮಾಗಳನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ.

  ಈ ಕಾರಣಕ್ಕಾಗಿಯೇ ಓಟಿಟಿ ಸಂಸ್ಥೆಗಳು ಕೂಡ ಪ್ರತಿ ವಾರ ಏನಾದರೂ ಹೊಸತನ್ನು ರಿಲೀಸ್ ಮಾಡುತ್ತಲೇ ಇರುತ್ತೆ. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹೊಸ ಸಿರೀಸ್ ಒಂದನ್ನು ರಿಲೀಸ್ ಮಾಡಲಾಗಿದೆ. ಅದುವೇ 'ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​'.

  ನೆಟ್‌ಫ್ಲಿಕ್ಸ್ ವಿಡಿಯೋದಲ್ಲಿ ರಿಷಬ್ ಪಂತ್‌ಗೆ ಟಾಂಗ್ ಕೊಟ್ಟ ಊರ್ವಶಿ ರೌಟೇಲಾ!ನೆಟ್‌ಫ್ಲಿಕ್ಸ್ ವಿಡಿಯೋದಲ್ಲಿ ರಿಷಬ್ ಪಂತ್‌ಗೆ ಟಾಂಗ್ ಕೊಟ್ಟ ಊರ್ವಶಿ ರೌಟೇಲಾ!

  ಭಾರತದ ಜನಪ್ರಿಯ ಓಟಿಟಿ ವೇದಿಕೆ ಅಮೆಜಾನ್​ ಪ್ರೈಮ್ ವಿಡಿಯೋದಲ್ಲಿ​ ಇಂದು (ಡಿಸೆಂಬರ್ 23) ಹೊಸ ಸಿರೀಸ್​ ರಿಲೀಸ್ ಆಗಿದೆ. 'ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​' ಎಂಬ ಮಹಿಳಾ ಪ್ರಧಾನ ಸಿರೀಸ್​ ಹೊರತರಲಾಗಿದೆ. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಿಗೆ ಹೆಸರು ಮಾಡಿರುವ ಮಹಿಳೆಯರನ್ನು ಓಟ್ಟಿಗೆ ಸೇರಿಸಿದೆ.

  ಒಂಬತ್ತು ಮಹಿಳೆಯರು ಒಂದೇ ವೇದಿಕೆಯಲ್ಲಿ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಎದುರಿಸಿರೋ ಸವಾಲುಗಳು ಹಾಗೂ ಯಶಸ್ಸುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಹಲವು ವಿಭಾಗಗಳಲ್ಲಿ ತಮ್ಮ ಅನುಭವಗಳನ್ನು ಶೇರ್ ಮಾಡಿಕೊಳ್ಳಿದ್ದಾರೆ. ಇಷ್ಟೇ ಅಲ್ಲದೆ ಅಗತ್ಯವಿರುವವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನೂ ಈ 9 ಮಹಿಳೆಯರು ನೀಡಲಿದ್ದಾರೆ.

  ಅಂದ್ಹಾಗೆ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಅಪರ್ಣಾ ಪುರೋಹಿತ್, (ಮೈತ್ರಿ ಮತ್ತು ಇಂಡಿಯಾ ಒರಿಜಿನಲ್ಸ್​ ಮುಖ್ಯಸ್ಥೆ), ಇಂಧು ವಿ.ಎಸ್​ (ಲೇಖಕಿ ಮತ್ತು ನಿರ್ದೇಶಕಿ), ರತೀನಾ ಪ್ಲತ್ತೋತ್ತಿಲ್​ (ಲೇಖಕಿ, ನಿರ್ದೇಶಕಿ ಮತ್ತು ನಿರ್ಮಾಪಕಿ), ಇಲಾಹೆ ಹಿಪ್ತೂಲ (ನಿರ್ಮಾಪಕಿ), ಪಾರ್ವತಿ ತಿರುವೋತ್ತು (ನಟಿ, ನಿರ್ದೇಶಕಿ) ರೀಮಾ ಕಲ್ಲಿಂಗಳ್​ (ನಟಿ ಮತ್ತು ನಿರ್ದೇಶಕಿ) ಶ್ರೇಯಾ ದೇವ್​ ದೂಬೆ (ನಿರ್ದೇಶಕಿ ಮತ್ತು ಛಾಯಾಗ್ರಾಹಕಿ) ಮತ್ತು ನೇಹಾ ಪಾರ್ತಿ ಮತಿಯಾನಿ (ಛಾಯಾಗ್ರಾಹಕಿ) ಈ ಸೀಸನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  Milana Actress Parvathy And 9 other Womens In Prime Video Mytri

  'ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​' ಸಿರೀಸ್​ನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವುದು ಹೇಗೆ? ಅವರಿಗೆ ಒಂದೊಳ್ಳೆ ಪ್ಲಾಟ್‌ಫಾರಂ ಕಲ್ಪಿಸುವುದು ಹೇಗೆ ಭಯ ಮುಕ್ತ ವಾತಾವರಣವನ್ನು ನಿರ್ಮಿಸುವುದು ಹೇಗೆ? ಎಂಬ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

  'ಮೈತ್ರಿ'ಯ ಸೀಸನ್​ನಲ್ಲಿ 9 ಮಂದಿ ಮಹಿಳೆಯರೂ ಕೂಡ ಈ ವೃತ್ತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳ ಜೊತೆಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಕಷ್ಟದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ್ದು, ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಹೇಗೆ ಭಾಗವಹಿಸಬಹುದು ಎಂಬುದನ್ನು ಚರ್ಚಿಸಿದ್ದಾರೆ.

  English summary
  Milana Actress Parvathy Thiruvothu And 9 other Womens In Prime Video Mytri, Know More.
  Friday, December 23, 2022, 22:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X