For Quick Alerts
  ALLOW NOTIFICATIONS  
  For Daily Alerts

  ಮೈ ನವಿರೇಳಿಸೊ ಟ್ರೇಲರ್ ಜೊತೆಗೆ ಬಿಡುಗಡೆ ದಿನಾಂಕ ಘೋಷಿಸಿದ 'ಮನಿ ಹೈಸ್ಟ್'

  |

  ವಿಶ್ವದ ಜನಪ್ರಿಯ ವೆಬ್ ಸರಣಿ 'ಮನಿ ಹೈಸ್ಟ್' ಅಕಾ 'ಲಾ ಕಾಸ ಡೆ ಪೆಪೆಲ್' ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಮೈನವಿರೇಳಿಸೊ ಟ್ರೇಲರ್ ಜೊತೆಗೆ ಬಿಡುಗಡೆ ದಿನಾಂಕವನ್ನು ನೆಟ್‌ಫ್ಲಿಕ್ಸ್ ಘೋಷಿಸಿದೆ.

  ಬ್ಯಾಂಕ್ ದರೋಡೆ ಮಾಡುವ ಗ್ಯಾಂಗ್‌ನ ಕತೆ ಹೊಂದಿದ 'ಮನಿ ಹೈಸ್ಟ್‌' ವೆಬ್ ಸರಣಿ ಈವರೆಗೆ ನಾಲ್ಕು ಸೀಸನ್ ಮುಗಿದಿದ್ದು ಐದನೇ ಮತ್ತು ಕೊನೆಯ ಸೀಸನ್‌ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದರು. ಇದೀಗ ಆ ಸಮಯ ಬಂದಿದೆ.

  ಟ್ರೇಲರ್ ಬಿಡುಗಡೆ ಮಾಡಿರುವ ನೆಟ್‌ಫ್ಲಿಕ್ಸ್ ವೆಬ್ ಸರಣಿಯು ಸೆಪ್ಟೆಂಬರ್ 3 ರಂದು (ಭಾರತದಲ್ಲಿ) ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಹೇಳಿದೆ. ಸೆಪ್ಟೆಂಬರ್ 3 ರಂದು ಈ ಜನಪ್ರಿಯ ವೆಬ್ ಸರಣಿಯ ಮೊದಲನೇ ವಾಲ್ಯೂಮ್ ಅಷ್ಟೇ ಬಿಡುಗಡೆ ಆಗಲಿದೆ. ಎರಡನೇ ವಾಲ್ಯೂಮ್ ತುಸು ತಡವಾಗಿ ಬಿಡುಗಡೆ ಆಗಲಿದೆ.

  ಈ ವರೆಗೆ ಬಹು ಬುದ್ಧಿವಂತಿಕೆಯಿಂದ ಪೊಲೀಸರು, ಸರ್ಕಾರದ ಕಣ್ಣಿಗೆ ಮಣ್ಣೆರಚಿ ದರೋಡೆ ಮಾಡುತ್ತಿದ್ದ ಮನಿಹೈಸ್ಟ್ ತಂಡ ಈ ಸೀಸನ್‌ನಲ್ಲಿ ತನ್ನ ಕೊನೆಯ ಯುದ್ಧ ಮಾಡಲಿದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. ಆದರೆ ಯುದ್ಧದಲ್ಲಿ ದರೋಡೆಕೋರರ ತಂಡ ಗೆಲ್ಲುತ್ತದೆಯೋ ಅಥವಾ ಸಾಯುತ್ತದೆಯೋ ತಿಳಿಯಲು ಸೆಪ್ಟೆಂಬರ್ 3ರ ವರೆಗೆ ಕಾಯಲೇ ಬೇಕು.

  ಸೀಸನ್ ನಾಲ್ಕರಲ್ಲಿ ಏನಾಗಿತ್ತು?

  ಸೀಸನ್ ನಾಲ್ಕರಲ್ಲಿ ಏನಾಗಿತ್ತು?

  ಸೀಸನ್‌ ನಾಲ್ಕರ ಅಂತ್ಯದಲ್ಲಿ ಪ್ರೊಫೆಸರ್‌ನ ಅಡುಗುತಾಣವನ್ನು ಅಮಾನತ್ತಾದ ಪೊಲೀಸ್ ಅಧಿಕಾರಿ ಅಲಿಸಾ ಪತ್ತೆ ಹಚ್ಚುತ್ತಾಳೆ. ಸೀಸನ್ 5ರ ಕತೆ ಅಲ್ಲಿಂದ ಆರಂಭವಾಗಲಿದೆ. ಟ್ರೇಲರ್‌ನಲ್ಲಿ ತೋರಿಸಿರುವಂತೆ ಅಲಿಸಾ, ಪ್ರೊಫೆಸರ್ ಅನ್ನು ಬಂಧಿಸಿ ಹಿಂಸೆ ಕೊಡುತ್ತಿದ್ದಾಳೆ. ಪ್ರೊಫೆಸರ್ ಬಂಧನಕ್ಕೆ ಒಳಗಾಗಿರುವ ವಿಷಯ ರಾಯಲ್ ಮಿಂಟ್ ಒಳಗಿರುವ ದರೋಡೆಕೋರರ ಗುಂಪಿಗೆ ತಿಳಿಯುತ್ತದೆ.

  ಟ್ರೇಲರ್‌ನಿಂದ ಗೊತ್ತಾಗುತ್ತಿರುವುದೇನು?

  ಟ್ರೇಲರ್‌ನಿಂದ ಗೊತ್ತಾಗುತ್ತಿರುವುದೇನು?

  ಪೊಲೀಸರು, ಸೈನ್ಯವನ್ನು ಕರೆಸಿ ಮಿಂಟ್‌ನ ಒಳಗೆ ನುಗ್ಗಿಸಲು ಯತ್ನಿಸುತ್ತಾರೆ. ಮನಿ ಹೈಸ್ಟ್ ತಂಡ ಸಹ ಪ್ರೊಫೆಸರ್ ಬೆಂಬಲವಿಲ್ಲದೆ ಸರ್ಕಾರಿ ಸೈನಿಕರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತದೆ. ಪ್ರೊಫೆಸರ್ ಬುದ್ಧಿವಂತಿಕೆಯಿಂದ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡ ರಾಕೆಲ್ ಹೊರಾಟದ ಮುಂದಾಳತ್ವ ವಹಿಸಿಕೊಳ್ಳುತ್ತಾಳೆ. ಇಷ್ಟು ವಿಷಯ ಇದೀಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಕಾಣುತ್ತಿದೆ.

  ವೆಬ್ ಸರಣಿಯ ಕೊನೆಯ ಸೀಸನ್ ಇದು

  ವೆಬ್ ಸರಣಿಯ ಕೊನೆಯ ಸೀಸನ್ ಇದು

  'ಮನಿ ಹೈಸ್ಟ್' ಸೀಸನ್ 5 ಈ ಜನಪ್ರಿಯ ವೆಬ್ ಸರಣಿಯ ಕೊನೆಯ ಭಾಗ ಆಗಿರಲಿದೆ ಎಂದು ಈ ಹಿಂದೆಯೇ ನಿರ್ದೇಶಕ ಅಲೆಕ್ಸ್ ಪಿನ್ಯಾ ಹೇಳಿದ್ದಾರೆ. ಹಾಗಾಗಿ ಈ ಸೀಸನ್ ಅನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಭಾಗಗಳಲ್ಲಿಯೂ ಎಂಟು ಎಪಿಸೋಡ್ ಇರಲಿದೆ ಎನ್ನಲಾಗುತ್ತಿದೆ. ಕೊನೆಯ ಸೀಸನ್ ಆಗಿರುವ ಕಾರಣ ಕುತೂಹಲಕಾರಿ ಕತೆಯನ್ನೇ ಹೊಂದಿರಲಿದೆ ಈ ಸೀಸನ್.

  ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವೆಬ್ ಸರಣಿ

  ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವೆಬ್ ಸರಣಿ

  'ಮನಿ ಹೈಸ್ಟ್' ಸೀಸನ್ ನಾಲ್ಕರ ಕತೆಯೇ ಮುಂದುವರೆಯುತ್ತಿರುವ ಕಾರಣ ಅದರಲ್ಲಿ ಇದ್ದ ಬಹುತೇಕ ನಟರು ಸೀಸನ್ 5ನಲ್ಲಿಯೂ ಮುಂದುವರೆದಿದ್ದಾರೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಟ್ರೇಲರ್ ಅನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಕಡಿಮೆ ವೆಚ್ಚದಲ್ಲಿ ಫ್ಲಾಪ್ ಟಿವಿ ಶೋ ಆಗಿ ಆರಂಭವಾಗಿದ್ದ 'ಮನಿ ಹೈಸ್ಟ್' ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಜನ ನೋಡಿರುವ ವೆಬ್ ಸರಣಿ ಆಗಿ ಮಾರ್ಪಟ್ಟಿದೆ. ಇದರ ಕೊನೆಯ ಸೀಸನ್ ಅನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

  English summary
  Money Heist season 05 will release on Netflix on September 03. Trailer released today in India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X