Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಷದ ಕೊನೆಯ ವಾರ ಒಟಿಟಿ ಬಂದ ಸಿನಿಮಾಗಳಿವು, ನಿಮ್ಮ ಆಯ್ಕೆ ಯಾವುದು?
ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ. ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.
ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.
ಪ್ರಭಾಸ್
ಅಭಿಮಾನಿಗಳ
ದೆಸೆಯಿಂದ
ಕ್ರ್ಯಾಶ್
ಆದ
ಆಹಾ
ಒಟಿಟಿ!
ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ.

ಅನುಪಮಾ ಪರಮೇಶ್ವರನ್ ನಟನೆಯ 'ಬಟರ್‌ಫ್ಲೈ'
ಕನ್ನಡದ 'ನಟಸಾರ್ವಭೌಮ' ಸೇರಿದಂತೆ ಹಲವು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿ ಹಾಟ್ ಫೇವರೇಟ್ ನಟಿ ಎನಿಸಿಕೊಂಡಿರುವ ಅನುಪಮಾ ಪರಮೇಶ್ವರನ್ ನಟನೆಯ ಹೊಸ ಸಿನಿಮಾ 'ಬಟರ್‌ಫ್ಲೈ' ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ವಾರ ತೆರೆಗೆ ಬಂದಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ.

'ಟಾಪ್‌ಗನ್: ಮೇವರಿಕ್'
ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ಟಾಪ್ ಗನ್ ಮೇವರಿಕ್ ಸಿನಿಮಾ ವರ್ಷದ ಕೊನೆಯ ವಾರ ಒಟಿಟಿಗೆ ಬಂದಿದೆ. ಟಾಮ್ ಕ್ರೂಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ. ಫೈಟರ್ ಜೆಟ್‌ಗಳು ಹಾಗೂ ಅದನ್ನು ಚಲಾಯಿಸುವ ಪೈಲೆಟ್‌ಗಳ ಬಗೆಗಿನ ಸಿನಿಮಾ ಇದಾಗಿದೆ. ಟಾಪ್‌ಗನ್ ಸರಣಿಯ ಎರಡನೇ ಸಿನಿಮಾ ಇದು.

'ಡಬಲ್ ಎಕ್ಸ್‌ಎಲ್' ಹಿಂದಿ ಸಿನಿಮಾ
ದಪ್ಪಗಿರುವ ಹೆಣ್ಣು ಮಕ್ಕಳ ಪರವಾದ ಸಿನಿಮಾ, ಸೌಂದರ್ಯವನ್ನು ದೇಹಾಕಾರದಿಂದ ಅಳೆಯಬಾರದೆಂದು ಸಾರುವ ಸಿನಿಮಾ 'ಡಬಲ್ ಎಕ್ಸ್‌ಎಲ್'. ಸೊನಾಕ್ಷಿ ಸಿನ್ಹಾ ಹಾಗೂ ಹುಮಾ ಖುರೇಷಿ ನಟನೆಯ ಈ ಸಿನಿಮಾ ಕೆಲ ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ದೇಹಾಕಾರದ ಕಾರಣಕ್ಕೆ ಅವಮಾನಿತರಾದ ಇಬ್ಬರು ಯುವತಿಯರು ದಪ್ಪ ದೇಹಿ ಹೆಣ್ಣುಮಕ್ಕಳಿಗಾಗಿಯೇ ಫ್ಯಾಷನ್ ಬ್ರ್ಯಾಂಡ್ ಸೃಷ್ಟಿಸುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಇದೀಗ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ.

ವಿಜಯ್ ಸೇತುಪತಿ ನಟನೆಯ 'ಡಿಎಸ್‌ಪಿ'
ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ನಟನೆಯ 'ಡಿಎಸ್‌ಪಿ' ಹೆಸರಿನ ಪಕ್ಕಾ ಆಕ್ಷನ್ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೆಲವು ತಿಂಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿರಲಿಲ್ಲ. ಇದೀಗ ನೆಟ್‌ಫ್ಲಿಕ್ಸ್ ಹಾಗೂ ಸನ್ ನೆಕ್ಸ್ಟ್ ಒಟಿಟಿಗಳಲ್ಲಿ ಏಕಕಾಲಕ್ಕೆ ತೆರೆಗೆ ಬಂದಿದೆ. 'ಡಿಎಸ್‌ಪಿ' ಸಿನಿಮಾದಲ್ಲಿ ವಿಜಯ್ ಸೇತುಪತಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

ಆಹಾದಲ್ಲಿ 'ಉದನ್‌ಪಾಲ್'
'ಕುತುಕು ಪಾತು' ಹೆಸರಿನ ವೆಬ್ ಸರಣಿ ನಿರ್ಮಿಸಿ ಗಮನ ಸೆಳೆದಿದ್ದ ತಂಡವೇ ಇದೀಗ 'ಉದನ್‌ಪಾಲ್' ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಶ್ರೀನಿವಾಸನ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಲಿಂಗಾ, ಗಾಯತ್ರಿ, ವಿವೇಕ್ ಪ್ರಸನ್ನಾ, ಅಬರ್ನಾತಿ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವು 'ಆಹಾ' ಒಟಿಟಿಯಲ್ಲಿ ತೆರೆಗೆ ಬಂದಿದೆ.