For Quick Alerts
  ALLOW NOTIFICATIONS  
  For Daily Alerts

  ನೆಟ್‌ಫ್ಲಿಕ್ಸ್ ಜೊತೆ ಒಪ್ಪಂದ: ವೆಂಕಟೇಶ್-ರಾಣಾ ಜುಗಲ್ ಬಂದಿ

  |

  ತೆಲುಗು ನಟ ವಿಕ್ಟರಿ ವೆಂಕಟೇಶ್ ಮತ್ತು ರಾಣಾ ದಗ್ಗುಬಾಟಿ ಹೊಸ ಪ್ರಾಜೆಕ್ಟ್‌ಗಾಗಿ ಒಂದಾಗಿದ್ದು, ಮೊದಲ ಸಲ ಈ ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡುವ ಅವಕಾಶ ಸಿಕ್ಕಿದೆ. ನೆಟ್‌ಫ್ಲಿಕ್ಸ್‌ಗಾಗಿ ವೆಬ್ ಸಿರೀಸ್ ತಯಾರಾಗುತ್ತಿದ್ದು, ಆ ಚಿತ್ರದಲ್ಲಿ ವೆಂಕಿ ಮತ್ತು ರಾಣಾ ನಟಿಸುತ್ತಿದ್ದಾರೆ.

  ಈ ಕುರಿತು ಸ್ವತಃ ರಾಣಾ ದಗ್ಗುಬಾಟಿ ಬುಧವಾರ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ''ನಮ್ಮ ಚಿಕ್ಕಪ್ಪನ ಜೊತೆ ನಟಿಸಬೇಕು ಎನ್ನುವುದು ಬಹುದೊಡ್ಡ ಕನಸಾಗಿತ್ತು. ಕೊನೆಗೂ ಆ ಕನಸು ನನಸಾಗುವ ಸಮಯ ಬಂದಿದೆ. ಅವರ ದೊಡ್ಡ ಅಭಿಮಾನಿಯಾದ ನಾನು ಅವರೊಂದಿಗೆ 'ರಾಣಾ ನಾಯ್ಡು' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ'' ಎಂದು ಪೋಸ್ಟ್ ಹಾಕಿದ್ದಾರೆ.

  ಶ್ರುತಿ ಹಾಸನ್-ಅಕ್ಷರಾ ಜೊತೆ ರಾಣಾ ದಗ್ಗುಬಾಟಿ ಹೊಸ ಪ್ರಾಜೆಕ್ಟ್?ಶ್ರುತಿ ಹಾಸನ್-ಅಕ್ಷರಾ ಜೊತೆ ರಾಣಾ ದಗ್ಗುಬಾಟಿ ಹೊಸ ಪ್ರಾಜೆಕ್ಟ್?

  ಈ ಪ್ರಾಜೆಕ್ಟ್ ಬಗ್ಗೆ ವೆಂಕಟೇಶ್ ಸಹ ಪೋಸ್ಟ್ ಹಾಕಿದ್ದು, "ರಾಣಾ ಚಿಕ್ಕ ಹುಡುಗನಿಂದ ಉತ್ತಮ ನಟನಾಗಿ ನನ್ನ ಮುಂದೆ ಬೆಳೆಯುವುದನ್ನು ನಾನು ನೋಡಿದ್ದೇನೆ. ಆದರೆ ರಾಣಾ ನಾಯ್ಡು ಚಿತ್ರದಲ್ಲಿ ಇನ್ನಷ್ಟು ನೋಡಬೇಕಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಶೀಘ್ರದಲ್ಲೇ ಬರಲಿದೆ" ಎಂದಿದ್ದಾರೆ.

  ರಾಣಾ ನಾಯ್ಡು ಅಮೆರಿಕದ ಜನಪ್ರಿಯ ವೆಬ್ ಸಿರೀಸ್ 'ರೇ ಡೊನೊವನ್'ನ ರಿಮೇಕ್ ಆಗಿದೆ. ಇದು ಲಾಸ್ ಏಂಜಲೀಸ್‌ನ ಶ್ರೀಮಂತ ಮತ್ತು ಪ್ರಭಾವಶಾಲಿ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಯ ಕಥೆಯನ್ನು ಒಳಗೊಂಡಿದೆ. ರೇ ಡೊನೊವನ್ ಪಾತ್ರ ಭಾರತದಲ್ಲಿ ರಾಣಾ ನಾಯ್ಡು ಆಗಿದೆ.

  ರಾಣಾ ನಾಯ್ಡು ಚಿತ್ರವನ್ನು ಕರಣ್ ಅಂಶುಮನ್ ಮತ್ತು ಸುಪರ್ನ್ ವರ್ಮಾ ನಿರ್ದೇಶಿಸಲಿದ್ದಾರೆ. ಲೊಕೊ ಮೋಟಿವ್ ಗ್ಲೋಬಲ್ ಮೀಡಿಯಾ ಎಲ್‌ಎಲ್‌ಪಿ ನಿರ್ಮಿಸುತ್ತದೆ.

  2012ರಲ್ಲಿ ರಾಣಾ ನಟಿಸಿದ್ದ 'ಕೃಷ್ಣಂ ವಂದೇ ಜಗದ್ಗುರುಮ್' ಚಿತ್ರದಲ್ಲಿ ವೆಂಕಟೇಶ್ ಅತಿಥಿ ಪಾತ್ರ ಮಾಡಿದ್ದರು. ಸುಮಾರು 9 ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.

  ಶಾರುಖ್ ಖಾನ್-ಅಟ್ಲೀ ಸಿನಿಮಾಗೆ ದಕ್ಷಿಣದ ಸ್ಟಾರ್ ನಟ ಎಂಟ್ರಿಶಾರುಖ್ ಖಾನ್-ಅಟ್ಲೀ ಸಿನಿಮಾಗೆ ದಕ್ಷಿಣದ ಸ್ಟಾರ್ ನಟ ಎಂಟ್ರಿ

  ರಾಣಾ ನಾಯ್ಡು ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ''ನಾನು ರಾಣಾ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ. ನಾವು ಸೆಟ್‌ನಲ್ಲಿ ಬ್ಲಾಸ್ಟ್ ಮಾಡಲಿದ್ದೇವೆ. ನಮಗೆ ಕೆಲಸ ಮಾಡಲು ಸೂಕ್ತವಾದ ಪ್ರಾಜೆಕ್ಟ್ ಇದಾಗಿದೆ. ನಾನು ರೇ ಡೊನೊವನ್ ಚಿತ್ರದ ದೊಡ್ಡ ಅಭಿಮಾನಿ. ಅದಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ಇಡೀ ತಂಡ ಪ್ರಯತ್ನ ಮಾಡಲಿದೆ'' ಎಂದರು.

  ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಚಿತ್ರದ ಬಿಡುಗಡೆಯಾಗಬೇಕಿದೆ. ಕೊರೊನಾ ಎರಡನೇ ಅಲೆಯ ಭೀತಿಯಿಂದ ಮುಂದೂಡಿಕೆಯಾಗಿತ್ತು. ವೇಣು ಉಡುಗುಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಪವನ್ ಕಲ್ಯಾಣ್ ಜೊತೆ ಭಿಮ್ಲಾ ನಾಯಕ್ ಚಿತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ.

  ವೆಂಕಟೇಶ್ ಅವರ ಬಗ್ಗೆ ಹೇಳುವುದಾದರೆ ದೃಶ್ಯಂ 2 ತೆಲುಗು ರಿಮೇಕ್ ಶೂಟಿಂಗ್ ಮುಗಿಸಿದ್ದು, ತೆರೆಗೆ ಬರಬೇಕಿದೆ. ವರುಣ್ ತೇಜ ಜೊತೆ ನಟಿಸಿರುವ ಎಫ್ 3 ಚಿತ್ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

  English summary
  Netplix announces Rana Naidu starring Venkatesh and Rana Daggubati.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X