Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಲಯಾಳಂ ಸ್ಟಾರ್ ನಟರನ್ನು ಗುಡ್ಡೆ ಹಾಕುತ್ತಿದೆ ನೆಟ್‌ಫ್ಲಿಕ್ಸ್!
ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಭಾರತದ ಮನರಂಜನಾ ಕ್ಷೇತ್ರದ ಮೇಲೆ ಸಾವಿರಾರು ಕೋಟಿ ಹಣವನ್ನು ಈ ವರ್ಷ ಹೂಡಿಕೆ ಮಾಡುತ್ತಿದೆ.
ವಿಶ್ವದ ಶ್ರೀಮಂತ ಒಟಿಟಿಗಳಲ್ಲಿ ಒಂದಾಗಿರುವ ನೆಟ್‌ಫ್ಲಿಕ್ಸ್, ಅತ್ಯುತ್ತಮ ಕಂಟೆಂಟ್‌ಗಾಗಿ ದೊಡ್ಡ ಮೊತ್ತದ ಹಣ ಸುರಿಯಲು ಹಿಂದೆ-ಮುಂದೆ ಯೋಚಿಸುತ್ತಿಲ್ಲ.
ಹಲವು ಗುಣಮಟ್ಟದ ಸಿನಿಮಾ, ವೆಬ್ ಸರಣಿಗಳನ್ನು ಹೊಂದಿರುವ ನೆಟ್‌ಫ್ಲಿಕ್ಸ್ ಅಂಥಾಲಜಿ ಸಿನಿಮಾನ್ನು ಜನಪ್ರಿಯ ಗೊಳಿಸುವತ್ತ ದೃಷ್ಟಿಹರಿಸಿದೆ. ಈಗಾಗಲೇ ತಮಿಳು, ತೆಲುಗಿನ ಹಲವು ಅಂಥಾಲಜಿ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಪ್ರೆಸೆಂಟ್ ಮಾಡಿದ್ದು, ಇನ್ನಷ್ಟು ಇಂಥಹಾ ಮಾದರಿಯ ಸಿನಿಮಾಗಳನ್ನು ನಿರ್ಮಿಸಲು ಆಸಕ್ತಿವಹಿಸಿದೆ.
ಇದೀಗ ಮಲಯಾಳಂನ ಸ್ಟಾರ್ ನಟರನ್ನೆಲ್ಲ ಒಂದೆಡೆ ಗುಡ್ಡೆ ಹಾಕಿ ದೊಡ್ಡ ಪ್ರಾಜೆಕ್ಟ್ ಒಂದನ್ನು ಮಾಡಲು ಹೊರಟಿದೆ. ಮಲಯಾಳಂನ ಸ್ಟಾರ್ ನಟರುಗಳಾದ ಮೋಹನ್‌ಲಾಲ್, ಮಮ್ಮುಟಿ, ಫಹಾದ್ ಫಾಸಿಲ್ ಹಾಗೂ ಇನ್ನೂ ಹಲವರನ್ನು ಇಟ್ಟುಕೊಂಡು ಅಂಥಾಲಜಿ ಸಿನಿಮಾ ನಿರ್ಮಿಸಲು ನೆಟ್‌ಫ್ಲಿಕ್ಸ್ ಮುಂದಾಗಿದೆ.
ಕೇರಳದ ಜನಪ್ರಿಯ ಕಿರುಕತೆ ರಚನೆಗಾರ ಎಂಟಿ ವಾಸುದೇವನ್ ನಾಯರ್ ಅವರ ಕತೆಗಳನ್ನು ಆಧರಿಸಿ ಅಂಥಾಲಜಿ ಸಿನಿಮಾ ಮಾಡಲು ನೆಟ್‌ಫ್ಲಿಕ್ಸ್ ಸಿದ್ಧವಾಗಿದ್ದು, ಸಿನಿಮಾ ನಿರ್ದೇಶನಕ್ಕಾಗಿ ಮಲಯಾಳಂನ ಸೂಕ್ಷ್ಮ ನಿರ್ದೇಶಕರು ಎನಿಸಿಕೊಂಡಿರುವ ಲೀಜೊ ಜೋಸ್ ಫೆಲ್ಲಿಸೆರಿ, ಪ್ರಿಯದರ್ಶನ್, ಜಯರಾಜ್, ಶ್ಯಾಮ್‌ಪ್ರಸಾದ್, ಸಂತೋಶ್ ಸಿವನ್, ಮಹೇಶ್ ನಾರಾಯಣ್ ಇನ್ನೂ ಕೆಲವರನ್ನು ಸಂಪರ್ಕ ಮಾಡಿದೆ.
ಈ ಅಂಥಾಲಿಯ ಮತ್ತೊಂದು ವಿಶೇಷವೆಂದರೆ ಈ ಸಿನಿಮಾವನ್ನು ಕಮಲ್ ಹಾಸನ್ ಪ್ರೆಸೆಂಟ್ ಮಾಡಲಿದ್ದಾರೆ. ಕಮಲ್ ಹಾಸನ್ ಅವರೇ ಈ ಸಿನಿಮಾದ ನರೇಟರ್ ಆಗಿರಲಿದ್ದಾರೆ. ಆದರೆ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಅಥವಾ ನಿರ್ದೇಶನವನ್ನೂ ಮಾಡುವುದಿಲ್ಲ.
ಇದೇ ಅಂಥಾಲಜಿ ಸಿನಿಕ್ಕಾಗಿ 1960ರ ಸೂಪರ್ ಹಿಟ್ ಮಲಯಾಳಂ ಸಿನಿಮಾ 'ಒಲವುಮ್ ತೀರವುಮ್' ಅನ್ನು ಕಿರು ಸಿನಿಮಾ ಆಗಿ ರೀಮೇಕ್ ಮಾಡಲಿದ್ದಾರೆ ನಿರ್ದೇಶಕ ಪ್ರಿಯದರ್ಶನ್.
ನೆಟ್‌ಫ್ಲಿಕ್ಸ್ ಈವರೆಗೆ 'ಪಾವ ಕತೆಗಳ್', 'ನವರಸ', 'ಪಿಟ್ಟ ಕತಲು' ಸೇರಿದಂತೆ ಇನ್ನೂ ಕೆಲವು ಅಂಥಾಲಜಿ ಸಿನಿಮಾಗಳನ್ನು ತನ್ನ ವೇದಿಕೆಯನ್ನು ಸ್ಟ್ರೀಮ್ ಮಾಡುತ್ತಿದೆ. ಅಂಥಾಲಜಿ ಸಿನಿಮಾಗಳ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿರುವ ಕಾರಣ ಇನ್ನಷ್ಟು ಅಂಥಾಲಜಿ ಸಿನಿಮಾಗಳನ್ನು ನಿರ್ಮಾಣ ಮಾಡಲು ನೆಟ್‌ಫ್ಲಿಕ್ಸ್ ಮುಂದಾಗಿದೆ.
ಅಂಥಾಲಜಿ ಸಿನಿಮಾ ಎಂದರೆ ಯಾವುದಾದರೂ ಒಂದು ಮುಖ್ಯ ವಿಷಯ ಅಥವಾ ಧಾತು ಇಟ್ಟುಕೊಂಡು ಹಲವು ಬೇರೆ ಬೇರೆ ನಿರ್ದೇಶಕರು ಕತೆ ಹೆಣೆದು ಕಿರು ಸಿನಿಮಾಗಳನ್ನು ಮಾಡಿ ಪ್ರದರ್ಶಿಸುವುದನ್ನು ಅಂಥಾಲಜಿ ಸಿನಿಮಾ ಎನ್ನುತ್ತಾರೆ. ಕನ್ನಡದಲ್ಲಿಯೂ ಇಂಥಹಾ ಪ್ರಯೋಗಗಳು ಆಗಿವೆ. ಪುಟ್ಟಣ ಕಣಗಾಲರ 'ಕಥಾ ಸಂಗಮ', 'ಹ್ಯಾಪಿ ನ್ಯೂ ಇಯರ್', 'ಐದೊಂದ್ಲ ಐದು', 2019ರಲ್ಲಿ ಬಿಡುಗಡೆ ಆಗಿದ್ದ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದ ಹೊಸ 'ಕಥಾ ಸಂಗಮ' ಸಿನಿಮಾ ಸೇರಿದಂತೆ ಇನ್ನೂ ಕೆಲವು ಪ್ರಯತ್ನಗಳು ಆಗಿವೆ.