For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಒಟಿಟಿ: ಪಕ್ಷಪಾತ ಮಾಡುತ್ತಿದ್ದಾರಾ ಕರಣ್?, ಶಮಿತಾ ಪರ ವಕೀಲ ಎಂದು ನೆಟ್ಟಿಗರು ಕಿಡಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋ ಅನೇಕ ಕಾರಣಗಳಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಮನೆ ಅಂದ್ಮೇಲೆ ಕಿತ್ತಾಟ, ಜಗಳ, ಮುನಿಸು ಎಲ್ಲಾ ಕಾಮನ್. ಆದರೆ ಬಿಗಿ ಬಾಸ್ ಒಟಿಟಿಯಲ್ಲಿ ಇದೆಲ್ಲಾ ಕೊಂಚ ಜಾಸ್ತಿಯೇ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಬಿಗ್ ಮನೆಯಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹೆಚ್ಚು ಹೈಲೆಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಪ್ರಾರಂಭದಿಂದನೂ ಶಮಿತಾ ಹೆಚ್ಚು ಗಮನ ಸೆಳೆಯುವ ಸ್ಪರ್ಧಿಯಾಗಿದ್ದಾರೆ. ಟಾಸ್ಕ್, ಜಗಳ, ಕಣ್ಣೀರು ಹೀಗೆ ಪ್ರತಿಯೊಂದು ವಿಚಾರದಲ್ಲೂ ಶಮಿತಾ ಗಮನಸೆಳೆಯುತ್ತಿದ್ದಾರೆ.

  ಸಹ ಸ್ಪರ್ಧಿಗಳು ಶಮಿತಾ ಜೊತೆ ಸದಾ ಕಿತ್ತಾಡುತ್ತಿರುತ್ತಾರೆ. ಆದರೆ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಶಮಿತಾ ಪರ ವಹಿಸಿ ಜಾಸ್ತಿ ಮಾತಾನಾಡುತ್ತಾರೆ, ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ, ಕರಣ್ ಜೋಹರ್, ಶಮಿತಾ ಶೆಟ್ಟಿ ಅವರ ವೈಯಕ್ತಿಕ ವಕೀಲನಹಾಗೆ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

  ಸಂಡೇ ಕಾ ವಾರ್ ಎಪಿಸೋಡ್ ನಲ್ಲಿ ಕರಣ್ ಜೋಹರ್ ಭಾಗಿಯಾಗಿದ್ದರು. ಈ ಸಂಚಿಕೆಯಲ್ಲಿ ಕರಣ್ ಎಲ್ಲಾ ಸ್ಪರ್ಧಿಗಳನ್ನು ಸರಿಯಾಗಿ ಗ್ರಿಲ್ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಕಿತ್ತಾಡಿದ್ದ ಜೀಶನ್ ಖಾನ್ ಅವರಿಗೆ ಕರಣ್ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಅಕ್ಷರಾ ಸಿಂಗ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜೀಶಾನ್ ಅವರಿಗೆ ಕರಣ್ ವೀಕೆಂಡ್ ಎಪಿಸೋಡ್ ನಲ್ಲಿ ಸರಿಯಾಗಿ ತರಾಟೆ ತೆಗೆದುಕೊಂಡಿದ್ದರು.

  ಆದರೆ ಶಮಿತಾ ಬಗ್ಗೆ ಮಾತ್ರ ಕರಣ್ ಮೃದು ಧೋರಣೆ ಹೊಂದಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಕೊನೆಯ ಬಾರಿ ದಿವ್ಯಾ ಅಗರ್ವಾಲ್ ಮತ್ತು ಪ್ರತಿಕ್ ಅವರಿಗೆ ಕರಣ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು, ಆದರೆ ಶಮಿತಾ ಅವರನ್ನು ತುಂಬಾ ವಹಿಸಿಕೊಂಡು ಮಾತನಾಡುತ್ತಿದ್ದಾರೆ. ಕರಣ್, ಶಮಿತಾ ಅವರ ವಯಕ್ತಿಕ ವಕೀಲರಹಾಗೆ ನಡೆದುಕೊಳ್ಳುತ್ತಿದ್ದಾರೆ' ನೆಟ್ಟಿಗರೊಬ್ಬರು ಕಿಡಿ ಕಾರಿದ್ದಾರೆ.

  'ಯಾವಾಗಲು ಶಮಿತಾ ಅವರಿಗೆ ಹೆಚ್ಚು ಮಾತನಾಡಲು ಕರಣ್ ಅವಕಾಶ ನೀಡುತ್ತಿರುವುದೇಕೆ?' ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ, 'ಕರಣ್, ಶಮಿತಾ ಅವರನ್ನು ತುಂಬಾ ರಕ್ಷಣೆ ಮಾಡುತ್ತಿದ್ದಾರೆ, ಉಳಿದ ಎಲ್ಲರನ್ನು ಕಡೆಗಣಿಸುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ. ಆದರೆ ಕರಣ್ ಜೋಹರ್ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ ಶೋ ನಡೆಸಿಕೊಡುತ್ತಿದ್ದಾರೆ. ಮೊದಲ ಬಾರಿಗೆ ಕರಣ್ ಜೋಹರ್ ಬಿಗ್ ಬಾಸ್ ಒಟಿಟಿ ನಡೆಸಿಕೊಡುತ್ತಿದ್ದಾರೆ.

   Netizens call Karan Johar biased towards Shamita Shetty, call him Shamitas Personal Advocate

  ಅಂದಹಾಗೆ ಬಿಗ್ ಮನೆಯಲ್ಲಿ ಶಮಿತಾ ಒಂದಲ್ಲೊಂದು ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಜಗಳ, ಕಣ್ಣೀರು, ಸಹ ಸ್ಪರ್ಧಿಗಳ ಬಗ್ಗೆ ದೂರು ಅಥವಾ ತಮ್ಮದೇ ಸಿನಿಬದುಕಿನ ಕಷ್ಟ, ಜೀವನದ ಕಷ್ಟ-ನಷ್ಟ, ಅಕ್ಕ ಶಿಲ್ಪಾ ಶೆಟ್ಟಿ ಕುರಿತು ಮಾತು ಹೀಗೆ ತಮ್ಮೆಡೆಗೆ ಮಾಧ್ಯಮಗಳ ಗಮನ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಬಿಗ್ ಮನೆಯಲ್ಲಿ ಮತ್ತೆ ಕಣ್ಣೀರಾಗಿರುವ ಶಮಿತಾ ಶೆಟ್ಟಿ, ತಮ್ಮ ಕುಟುಂಬದ ಕಾರಣಕ್ಕೆ ನನ್ನನ್ನು ಭಿನ್ನವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಶಮಿತಾ ಆರೋಪ ಮಾಡಿದ್ದರು.

  ಇನ್ನು ಬಾರಿ ಬಿಗ್ ಬಾಸ್ ಮನೆಯಿಂದ ನಿಂದ ಕರಣ್ ನಾಥ್ ಮತ್ತು ರಿಧಿಮಾ ಪಂಡಿತ್ ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದರು. ಈ ಬಾರಿ ಡಬಲ್ ಎಲಿಮಿನೇಷನ್ ಇದ್ದಿದ್ದು ಸ್ಪರ್ಧಿಗಳಿಗೆ ಶಾಕ್ ನೀಡಿತ್ತು. ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿದ್ದು, ಬಿಗ್ ಬಾಸ್ ಒಟಿಟಿ ವಿನ್ನರ್ ಆಗಿ ಯಾರು ಹೊರಹೊಮ್ಮಲಿದ್ದಾರೆ ಎಂದು ಕಾದುನೋಡಬೇಕು.

  English summary
  Bigg Boss Ott: Netizens call Karan Johar biased towards Shamita Shetty, call him Shamita's Personal Advocate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X