For Quick Alerts
  ALLOW NOTIFICATIONS  
  For Daily Alerts

  'ಬೆತ್ತಲೆಗೊಳ್ಳಲು ಮುಜುಗರವಿಲ್ಲವೇ? ಹಾಗಿದ್ದರೆ ನಟಿಸಲು ಬನ್ನಿ'

  |

  ಬೆತ್ತಲೆ ದೃಶ್ಯಗಳಯ ಹಾಲಿವುಡ್‌ನ ಸಿನಿಮಾಗಳಿಗೆ ತೀರಾ ಹೊಸವೇನಲ್ಲ. ವೆಬ್ ಸರಣಿಗಳು ಬಂದಮೇಲಂತೂ ನಗ್ನ ದೃಶ್ಯಗಳು ಸಾಮಾನ್ಯ ಎಂಬಂತಾಗಿವೆ. ಇದೇ ಟ್ರೆಂಡ್ ಹಿಂದಿಯವರೂ ನಕಲು ಮಾಡುತ್ತಿದ್ದಾರೆ.

  ಆದರೆ ಇಲ್ಲಿ ವಿಷಯ ಅದಲ್ಲ, ವೆಬ್ ಸರಣಿ ನಿರ್ಮಾಣ ಮಾಡುತ್ತಿರುವ ಸಂಸ್ಥೆಯೊಂದು ತನ್ನ ಜಾಹೀರಾತೊಂದರಲ್ಲಿ ನಟಿಸುವ ಹಾಗಿದ್ದರೆ ಬೆತ್ತಲಾಗಲು ಒಪ್ಪಬೇಕು ಎಂಬ ಷರತ್ತನ್ನೇ ವಿಧಿಸಿದೆ. ಇದು ಹಲವರ ವಿರೋಧಕ್ಕೂ ಕಾರಣವಾಗಿದೆ.

  ಲಾರ್ಡ್ ಆಫ್ ದಿ ರಿಂಗ್ಸ್ ಎಂಬುದು ಬಹು ಪ್ರಖ್ಯಾತ ಪುಸ್ತಕ ಹಾಗೂ ಸಿನಿಮಾ ಸರಣಿ. ಲಾರ್ಡ್ ಆಫ್ ರಿಂಗ್ಸ್ ನ ಸಿನಿಮಾ ಸರಣಿ ಅತ್ಯಂತ ಜನಪ್ರಿಯ, ಈ ಸರಣಿಯ ಒಂದು ಸಿನಿಮಾ ಆಸ್ಕರ್‌ ಸಹ ಗಳಿಸಿದೆ. ಈಗ ಇದೇ ಲಾರ್ಡ್ ಆಫ್ ರಿಂಗ್ಸ್ ವೆಬ್ ಸರಣಿಯಾಗಿ ಮೂಡಿಬರುತ್ತಿದೆ.

  ಲಾರ್ಡ್ ಆಫ್ ದಿ ರಿಂಗ್ಸ್ ವೆಬ್ ಸರಣಿ

  ಲಾರ್ಡ್ ಆಫ್ ದಿ ರಿಂಗ್ಸ್ ವೆಬ್ ಸರಣಿ

  ಅಮೆಜಾನ್ ಪ್ರೈಂ ನಲ್ಲಿ ಲಾರ್ಡ್ ಆಫ್ ದಿ ರಿಂಗ್ಸ್ ವೆಬ್ ಸರಣಿ ಪ್ರಸಾರವಾಗಲಿದ್ದು, ಇದಕ್ಕಾಗಿ ನ್ಯೂಜಿಲೆಂಡ್‌ನ ಆಕ್‌ಲೆಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣಕ್ಕೆ ನಟ-ನಟಿಯರು ಬೇಕಾದಾಗ ವೆಬ್ ಸರಣಿ ನಿರ್ಮಾಣ ಸಂಸ್ಥೆ ನೀಡಿರುವ ಜಾಹೀರಾತು ವಿವಾದ ಎಬ್ಬಿಸಿದೆ.

  'ಗಾತ್ರ ಆಕಾರದ ಬಗ್ಗೆ ತಕರಾರಿಲ್ಲ'

  'ಗಾತ್ರ ಆಕಾರದ ಬಗ್ಗೆ ತಕರಾರಿಲ್ಲ'

  'ಬೆತ್ತಲಾಗಲು ಮುಜುಗರವಿಲ್ಲವೆ? ಹಾಗಿದ್ದರೆ ಬನ್ನಿ ನಮ್ಮ ವೆಬ್ ಸರಣಿಯಲ್ಲಿ ನಟಿಸಿ, ದಿನಕ್ಕೆ 500 ಡಾಲರ್ ಗಳಿಸಿ. ನಟಿಸುವವರು ಆಕ್‌ಲೆಂಡ್‌ನ ನಿವಾಸಿಗಳಾಗಿರಬೇಕು, ವಯಸ್ಸು 18 ಕ್ಕೂ ಹೆಚ್ಚಿರಬೇಕು, ಗಾತ್ರ ಮತ್ತು ಆಕಾರದ ಬಗ್ಗೆ ತಕರರಾರಿಲ್ಲ' ಎಂದು ಜಾಹೀರಾತು ನೀಡಿದೆ.

  ಲಾರ್ಡ್‌ ಆಫ್ ದಿ ರಿಂಗ್ಸ್ ಸಿನಿಮಾದಲ್ಲಿ ನಗ್ನತೆ ಇರಲಿಲ್ಲ

  ಲಾರ್ಡ್‌ ಆಫ್ ದಿ ರಿಂಗ್ಸ್ ಸಿನಿಮಾದಲ್ಲಿ ನಗ್ನತೆ ಇರಲಿಲ್ಲ

  ಲಾರ್ಡ್‌ ಆಫ್ ದಿ ರಿಂಗ್ಸ್ ಸರಣಿಯ ಸಿನಿಮಾದಲ್ಲಿ ನಗ್ನತೆ ಇಲ್ಲ. ತೀರಾ ಸರಸದ ದೃಶ್ಯಗಳನ್ನು ಸಹ ಲಾರ್ಡ್ ಆಫ್ ದಿ ರಿಂಗ್ಸ್ ಸಿನಿಮಾದಲ್ಲಿ ಬಳಸಲಾಗಿಲ್ಲ. ಆದರೆ ಈಗ ವೆಬ್ ಸರಣಿಯಲ್ಲಿ ನಗ್ನ ದೃಶ್ಯಗಳನ್ನು ತುರುಕಲಾಗುತ್ತಿದೆ. ಇದು ಲಾರ್ಡ್ ಆಫ್ ದಿ ರಿಂಗ್ಸ್ ಪ್ರಿಯರಿಗೆ ಬೇಸರ ತರಿಸಿದೆ.

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada
  ಗೇಮ್‌ ಆಫ್ ಥ್ರೋನ್ಸ್ ಮಾದರಿಯ ಯತ್ನ

  ಗೇಮ್‌ ಆಫ್ ಥ್ರೋನ್ಸ್ ಮಾದರಿಯ ಯತ್ನ

  ಗೇಮ್ ಆಫ್ ಥ್ರೋನ್ಸ್‌ ತನ್ನ ಅತ್ಯಬ್ಧುತ ಕತೆ, ಸಂಭಾಷಣೆ, ದೊಡ್ಡ ಕ್ಯಾನ್ವಾಸ್ ಗಳಿಂದ ಪ್ರಸಿದ್ಧಿಯಾದಷ್ಟೆ ವೆಬ್ ಸರಣಿಯಲ್ಲಿದ್ದ ನಗ್ನ ದೃಶ್ಯಗಳಿಂದಲೂ ಖ್ಯಾತಿಯಾಗಿತ್ತು. ಬಹುತೇಕ ಅದೇ ಮಾದರಿಯ ಕತಾ ಸೂತ್ರ ಹೊಂದಿರುವ ಲಾರ್ಡ್‌ ಆಫ್ ದಿ ರಿಂಗ್ಸ್‌ ನಲ್ಲೂ ನಗ್ನ ದೃಶ್ಯಗಳನ್ನು ತುರುಕುವ ಯತ್ನ ಮಾಡಲಾಗುತ್ತಿದೆ.

  English summary
  Netizens unhappy with lord of the rings web series which will be telecast in Amazon prime for its possible nudity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X