For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ನಲ್ಲಿ ಬೆತ್ತಲೆ ಯೋಗ: ದಿನಕ್ಕೆ 50 ಲಕ್ಷ ಕೇಳಿದ ಯೋಗ ಗುರು!

  |

  ಬಿಗ್‌ಬಾಸ್ ಭಾರತದ ಜನಪ್ರಿಯ ರಿಯಾಲಿಟಿ ಶೋ ಜೊತೆಗೆ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ಸಹ ಹೌದು. ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತಿದೆ. ಆದರೆ ಅತಿ ಹೆಚ್ಚು ವಿವಾದ ಎಬ್ಬಿಸಿರುವುದು ಹಿಂದಿ ಭಾಷೆಯಲ್ಲಿ ಪ್ರಸಾರವಾಗು ಬಿಗ್‌ಬಾಸ್ ಕಾರ್ಯಕ್ರಮ.

  ಟಿವಿಯಲ್ಲಿ ಹಲವು ಮಾನದಂಡಗಳ ನಡುವೆಯೂ ಸಖತ್ ಹಾಟ್ ಆಗಿಯೇ ಬಿಗ್‌ಬಾಸ್ ಶೋ ಅನ್ನು ಪ್ರೆಸೆಂಟ್ ಮಾಡಿರುವ ಹಲವು ಉದಾಹರಣೆಗಳು ಇವೆ. ಹಿಂದಿ ಬಿಗ್‌ಬಾಸ್ ಶೋಗೆ ಸನ್ನಿ ಲಿಯೋನ್, ಪಮೇಲಾ ಆಂಡರ್ಸನ್ ಇನ್ನೂ ಕೆಲವು ಗ್ಲಾಮರ್‌ ಗೊಂಬೆಗಳನ್ನು ಕರೆಸಲಾಗಿದ್ದುದ್ದು ಇದೇ ಕಾರಣಕ್ಕೆ.

  ಇದೀಗ ಒಟಿಟಿಯಲ್ಲಿ ಸಹ ಬಿಗ್‌ಬಾಸ್ ಶೋ ಪ್ರಾರಂಭವಾಗುತ್ತಿದ್ದು, ಹೆಚ್ಚು ನಿಯಮಗಳು, ಮಾನದಂಡಗಳು, ಸೆನ್ಸಾರ್‌ ಇಲ್ಲದ ಒಟಿಟಿಯಲ್ಲಿ ಬಿಗ್‌ಬಾಸ್ ಅನ್ನು ಇನ್ನೂ ಗ್ಲಾಮರಸ್ ಆಗಿ, ಎರೊಟಿಕಾ ಮಾದರಿಯಲ್ಲಿ ಪ್ರೆಸೆಂಟ್ ಮಾಡಲು ಯೋಜಿಸಲಾಗಿದೆ. ಕಾರ್ಯಕ್ರಮದ ಗ್ಲಾಮರ್‌ ಥೀಮ್‌ಗೆ ಹೊಂದಿಕೆ ಆಗುವಂತಹಾ ಸ್ಪರ್ಧಿಗಳನ್ನೇ ಶೋಗೆ ಕರೆತರಲಾಗುತ್ತಿದೆ.

  ಒಟಿಟಿ ಬಿಗ್‌ಬಾಸ್‌ನಲ್ಲಿ ಬೆತ್ತಲೆ ಯೋಗ ಇರುವುದು ಬಹುತೇಖ ಖಾತ್ರಿಯಾಗಿದೆ. ಇದನ್ನು ಶೋನಲ್ಲಿ ಭಾಗವಹಿಸಲಿರುವ ಸ್ಪರ್ಧಿಯೊಬ್ಬರು ಬಹಿರಂಗಗೊಳಿಸಿದ್ದಾರೆ. ಬೆತ್ತಲೆ ಯೋಗ ಗುರು ಎಂದೇ ಖ್ಯಾತವಾಗಿರುವ ವಿವೇಕ್ ಮಿಶ್ರಾ ಅನ್ನು ಒಟಿಟಿ ಬಿಗ್‌ಬಾಸ್‌ ಆಯೋಜಕರು ಸಂಪರ್ಕಿಸಿದ್ದಾರೆ.

  ಈ ಬಗ್ಗೆ ಮಾತನಾಡಿರುವ ವಿವೇಕ್ ಮಿಶ್ರಾ, ''ಒಟಿಟಿ ಬಿಗ್‌ಬಾಸ್‌ ಆಯೋಜಕರು ನನ್ನನ್ನು ಸಂಪರ್ಕಿಸಿ ಶೋ ನಲ್ಲಿ ಭಾಗವಹಿಸುವಂತೆ ಕೇಳಿದರು. ಜೊತೆಗೆ ಶೋ ನಲ್ಲಿ ಬೆತ್ತಲೆ ಅಥವಾ ಅರೆಬೆತ್ತಲೆಯಾಗಿ ಯೋಗ ಮಾಡಲು ಸಹ ಹೇಳಿದರು. ಅವರ ಡಿಮ್ಯಾಂಡ್ ಕೇಳಿ ನನಗೆ ಆಶ್ಚರ್ಯವಾಯಿತು'' ಎಂದಿದ್ದಾರೆ ವಿವೇಕ್.

  ದಿನಕ್ಕೆ ಐವತ್ತು ಲಕ್ಷ ಕೊಟ್ಟರೆ ಹೋಗುತ್ತೇನೆ: ವಿವೇಕ್

  ದಿನಕ್ಕೆ ಐವತ್ತು ಲಕ್ಷ ಕೊಟ್ಟರೆ ಹೋಗುತ್ತೇನೆ: ವಿವೇಕ್

  ''ದಿನವೊಂದಕ್ಕೆ ಐವತ್ತು ಲಕ್ಷ ಹಣ ಕೊಡುವುದಾದರೆ ಮಾತ್ರವೇ ನಾನು ಒಟಿಟಿ ಬಿಗ್‌ಬಾಸ್‌ನಲ್ಲಿ ಭಾವಹಿಸುತ್ತೇನೆ ಮತ್ತು ಶೋನಲ್ಲಿ ಬೆತ್ತಲೆ ಯೋಗ ಮಾಡುತ್ತೇನೆ ಎಂದು ನಾನು ಆಯೋಜಕರಿಗೆ ಹೇಳಿದ್ದೇನೆ. ನಾನು ಈಗಾಗಲೇ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದೇನೆ, ಅಲ್ಲಿ ನನ್ನ ಪ್ರತಿಭೆ ಪ್ರದರ್ಶನ ಮಾಡಿದ್ದೇನೆ. ಹಾಗಾಗಿ ಈ ಆಫರ್ ನನಗೆ ಹೊಸದೇನೂ ಅಲ್ಲ'' ಎಂದಿದ್ದಾರೆ ವಿವೇಕ್.

  ಅವಕಾಶಕ್ಕೆ ಕಾಯುತ್ತಿರುವ ಹೊಸ ನಟ ನಾನಲ್ಲ: ವಿವೇಕ್

  ಅವಕಾಶಕ್ಕೆ ಕಾಯುತ್ತಿರುವ ಹೊಸ ನಟ ನಾನಲ್ಲ: ವಿವೇಕ್

  ''ನಾನು ಜನಪ್ರಿಯತೆಗೆ ಹಾತೊರೆಯುತ್ತಿರುವ ಹೊಸ ನಟನಲ್ಲ. ಬದಲಿಗೆ ಈಗಾಗಲೇ ಸೆಲೆಬ್ರಿಟಿ ಆಗಿದ್ದೇನೆ. ಹಾಗಾಗಿ ಒಟಿಟಿ ಬಿಗ್‌ಬಾಸ್‌ ನನಗೆ ಅವಕಾಶ ಎಂಬುದು ಸುಳ್ಳು. ಹಾಗಾಗಿಯೇ ನಾನು ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಬೆತ್ತಲೆಯಾಗಿ ಯೋಗ ಮಾಡಬೇಕೆಂದರೆ ನನಗೆ ಅವರು ದಿನಕ್ಕೆ 50 ಲಕ್ಷ ಕೊಡಬೇಕು. ಇಲ್ಲವಾದರೆ ನನ್ನ ಪ್ರತಿಭೆಯನ್ನು ನಾನೇಕೆ ಉಚಿತವಾಗಿ ಅವರ ಶೋಗೆ ನೀಡಲಿ'' ಎಂದಿದ್ದಾರೆ ವಿವೇಕ್.

  ''ಶೋ ನಡೆಯುವುದು ಸ್ಪರ್ಧಿಗಳಿಂದ, ನಿರೂಪಕರಿಂದ ಅಲ್ಲ''

  ''ಶೋ ನಡೆಯುವುದು ಸ್ಪರ್ಧಿಗಳಿಂದ, ನಿರೂಪಕರಿಂದ ಅಲ್ಲ''

  ''ಬಿಗ್‌ಬಾಸ್‌ ಶೋ ನಿರೂಪಕರ ಬಗ್ಗೆ ಮಾತನಾಡಿರುವ ವಿವೇಕ್. ಯಾವುದೇ ಶೋ ಅದರ ನಿರೂಪಕರಿಂದ ನಡೆಯುತ್ತದೆ ಎಂಬುದು ಸುಳ್ಳು. ಶೋ ನಡೆಯುವುದು ಸ್ಪರ್ಧಿಗಳಿಂದ ನಿರೂಪಕರು ಸ್ವಲ್ಪ ಯೋಗದಾನ ನೀಡುತ್ತಾರೆ ಅಷ್ಟೆ. ಸಲ್ಮಾನ್ ಖಾನ್, ಕರಣ್ ಜೋಹರ್, ಜೆನೀಫರ್ ಲೊಪೇಜ್ ಇರಲಿ ಅವರಿಂದಲೇ ಶೋ ಒಂದು ನಡೆಯುತ್ತದೆ ಎಂದು ಹೇಳಲಾಗದು'' ಎಂದಿದ್ದಾರೆ ವಿವೇಕ್.

  ಒಳ್ಳೆಯ ಪ್ರಾಜೆಕ್ಟ್ ಮಾಡುವ ನಿರೀಕ್ಷೆಯಲ್ಲಿದ್ದೇನೆ: ವಿವೇಕ್

  ಒಳ್ಳೆಯ ಪ್ರಾಜೆಕ್ಟ್ ಮಾಡುವ ನಿರೀಕ್ಷೆಯಲ್ಲಿದ್ದೇನೆ: ವಿವೇಕ್

  ''ನಾನು ಈಗಾಗಲೇ ಬಿಗ್‌ಬಾಸ್ ನಲ್ಲಿ ಭಾಗವಹಿಸಿದ್ದೇನೆ. ಹಾಗಾಗಿ ಮತ್ತೊಮ್ಮೆ ನಾನು ಬಿಗ್‌ಬಾಸ್‌ಗೆ ಹೋಗಬೇಕೆಂದರೆ ನನಗೆ ದೊಡ್ಡ ಮೊತ್ತದ ಮೊತ್ತ ನೀಡಬೇಕು. ಇಲ್ಲವಾದರೆ ನಾನು ಹೋಗುವುದಿಲ್ಲ. ವರ್ಷಕ್ಕೊಂದು ಸಾಧಾರಣ ಪ್ರಾಜೆಕ್ಟ್ ಮಾಡುವುದಕ್ಕಿಂತಲೂ ಐದು ವರ್ಷಗಳಿಗೊಮ್ಮೆ ಒಳ್ಳೆಯ ಪ್ರಾಜೆಕ್ಟ್ ಮಾಡುವುದು ಉತ್ತಮ. ನಾನು ಈಗಾಗಲೇ ಕಾಮಿಡಿ ಪ್ರಾಜೆಕ್ಟ್ ಒಂದನ್ನು ಮಾಡುವ ಯೋಜನೆಯಲ್ಲಿದ್ದೇನೆ'' ಎಂದಿದ್ದಾರೆ ವಿವೇಕ್.

  ನಿರೂಪಣೆ ಮಾಡಲಿರುವ ಕರಣ್ ಜೋಹರ್

  ನಿರೂಪಣೆ ಮಾಡಲಿರುವ ಕರಣ್ ಜೋಹರ್

  ಒಟಿಟಿಯಲ್ಲಿ ಬಿಗ್‌ಬಾಸ್‌ ಶೋ ಪ್ರಸಾರವಾಗಲಿದ್ದು ಈಗಾಲಗೇ ಶೋ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಶೋ ಅನ್ನು ಕರಣ್ ಜೋಹರ್ ನಿರೂಪಣೆ ಮಾಡಲಿದ್ದಾರೆ. ಕೆಲವಾರು ಸೆಲೆಬ್ರಿಟಿಗಳನ್ನು ಅದರಲ್ಲಿಯೂ ವಿವಾದಾತ್ಮಕ ಸೆಲೆಬ್ರಿಟಿಗಳನ್ನು ಆಯೋಜಕರು ಸಂಪರ್ಕ ಮಾಡಿದ್ದಾರೆ. ನೇಹಾ ಬಾಶಿನ್ ಸ್ಪರ್ಧಿಯಾಗಿ ಭಾಗವಹಿಸುವುದು ಬಹುತೇಕ ಖಾತ್ರಿಯಾಗಿದೆ. ಇನ್ನೂ ಕೆಲವು ಸ್ಪರ್ಧಿಗಳನ್ನು ಹುಡುಕಾಡುತ್ತಿದ್ದು, ಒಟಿಟಿ ಬಿಗ್‌ಬಾಸ್ ಸಖತ್ ಹಾಟ್ ಆಗಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

  English summary
  OTT Bigg Boss is on its way. Vivek Misra said bigg boss organizers contacted him and ask to participate and do erotic Yoga on the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X