Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
SSMB28: ಓಟಿಟಿ ಡೀಲ್ ಕುದುರಿಸಿದ ಮಹೇಶ್- ತ್ರಿವಿಕ್ರಮ್ ಸಿನಿಮಾ: ಕನ್ನಡದಲ್ಲೂ ಪ್ರಿನ್ಸ್ ಪ್ರತಾಪ
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ 3ನೇ ಸಿನಿಮಾ ಬರ್ತಿರೋದು ಗೊತ್ತೇಯಿದೆ. ಸಿನಿಮಾ ಶೂಟಿಂಗ್ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ. ಇದೆಲ್ಲದರ ನಡುವೆ ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.
ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ ಓಟಿಟಿಗೆ ಬರೋದು ಇತ್ತೀಚಿನ ಟ್ರೆಂಡ್. ದೊಡ್ಡ ದೊಡ್ಡ ಸಿನಿಮಾಗಳು ಕೂಡ 50 ದಿನ ಪೂರೈಸೋಕು ಮೊದಲೇ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಅಬ್ಬರಿಸುತ್ತವೆ. ಮಹೇಶ್ ಬಾಬು- ತ್ರಿವಿಕ್ರಮ್ ಹ್ಯಾಟ್ರಿಕ್ ಸಿನಿಮಾ ಯಾವ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವುದು ಪಕ್ಕಾ ಆಗಿದೆ. ಸ್ವತಃ ಆ ಸಂಸ್ಥೆಯೇ ಇದನ್ನು ಖಚಿತಪಡಿಸಿದೆ. ಈ ಸುದ್ದಿ ಕೇಳಿ ಟಾಲಿವುಡ್ ಪ್ರಿನ್ಸ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಇದು ಮಹೇಶ್ ಬಾಬು ನಟನೆಯ 28 ಸಿನಿಮಾ. ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಸದ್ಯ SSMB28 ಹೆಸರಿನಲ್ಲಿ ಸಿನಿಮಾ ಕೆಲಸಗಳು ನಡೀತಿದೆ.
'ಅತಡು', 'ಖಲೇಜಾ' ಸಿನಿಮಾಗಳಲ್ಲಿ ಈ ಹಿಂದೆ ಮಹೇಶ್ ಬಾಬು- ತ್ರಿವಿಕ್ರಮ್ ಶ್ರೀನಿವಾಸ್ ಕೆಲಸ ಮಾಡಿದ್ದರು. 'ಅತಡು' ಬಾಕ್ಸಾಫೀಸ್ ಶೇಕ್ ಮಾಡಿದ್ರೆ, 'ಖಲೇಜಾ' ಒಳ್ಳೆ ಸಿನಿಮಾ ಎನಿಸಿಕೊಂಡಿತ್ತು. ಇವರಿಬ್ಬರು ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ನೆಟ್‌ಫ್ಲಿಕ್ಸ್‌ನಲ್ಲಿ SSMB28
ಟಾಲಿವುಡ್‌ನಲ್ಲಿ SSMB28 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮಹೇಶ್, ತ್ರಿವಿಕ್ರಮ್ ಇಬ್ಬರು ಹಿಟ್ ಸಿನಿಮಾಗಳ ಮೂಲಕ ಮುನ್ನುಗ್ಗುತ್ತಿದ್ದಾರೆ. ಇಂತಹ ಹೊತ್ತಲ್ಲೇ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿರುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ಸಿನಿಮಾ ಶೂಟಿಂಗ್ ತಡವಾಗುತ್ತಿದೆ. ಆದರೆ ಈಗಾಗಲೇ ಚಿತ್ರದ ಓಟಿಟಿ ಡೀಲ್ ಕುದುರಿಸಲಾಗಿದೆ. ನೆಟ್ ಫ್ಲಿಕ್ಸ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಕನ್ನಡದಲ್ಲೂ SSMB28 ಹವಾ
ಟಾಲಿವುಡ್‌ನ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 50 ದಿನಗಳ ನಂತರ ಓಟಿಟಿಗೆ ಬರಲಿದೆ. SSMB28 ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಕೊಟ್ಟಿಲ್ಲ. ಆದರೆ ಓಟಿಟಿಯಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬರಲಿದೆ. ಇದನ್ನು ನೆಟ್ ಫ್ಲಿಕ್ಸ್ ಸಂಸ್ಥೆ ಖಚಿತಪಡಿಸಿದೆ. ಕನ್ನಡದಲ್ಲೂ ಪ್ರಿನ್ಸ್ ಪ್ರತಾಪ ಶುರುವಾಗಲಿದೆ. ಮಹೇಶ್ ಬಾಬು ಈವರೆಗೆ ಪ್ಯಾನ್ ಇಂಡಿಯಾ ಸಿನಿಮಾ ಸಾಹಸಕ್ಕೆ ಕೈ ಹಾಕಿಲ್ಲ. ಈ ಸಿನಿಮಾ ಮೂಲಕ ಅದು ಪ್ರಾರಂಭ ಆಗುತ್ತಾ ಕಾಡು ನೋಡಬೇಕು.

ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್
ಶೂಟಿಂಗ್ ಶುರುವಾಗುವುದಕ್ಕೂ ಮೊದ್ಲೆ SSMB28 ಏಪ್ರಿನ್ 28ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಆದರೆ ಪದೇ ಪದೇ ಶೂಟಿಂಗ್ ತಡವಾಗುತ್ತಿದೆ. ಇನ್ನು ಮೂರುವರೆ ತಿಂಗಳಲ್ಲಿ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್ ಮುಗಿಸಿ ಸಿನಿಮಾ ರಿಲೀಸ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಚಿತ್ರದ ರಿಲೀಸ್ ಡೇಟ್ ಆಗಸ್ಟ್‌ಗೆ ಪೋಸ್ಟ್‌ಪೋನ್ ಆದರೂ ಅಚ್ಚರಿ ಪಡಬೇಕಿಲ್ಲ.

ಶ್ರೀಲೀಲಾ 2ನೇ ನಾಯಕಿ?
'ಮಹರ್ಷಿ' ಚಿತ್ರದಲ್ಲಿ ಮಹೇಶ್ ಬಾಬು- ಪೂಜಾ ಹೆಗ್ಡೆ ಒಟ್ಟಿಗೆ ನಟಿಸಿ ಗಮನ ಸೆಳೆದಿದ್ದರು. SSMB28 ಚಿತ್ರದಲ್ಲೂ ಈ ಜೋಡಿ ತೆರೆಹಂಚಿಕೊಳ್ಳುತ್ತಿದೆ. ಚಿತ್ರದ ಮತ್ತೊಬ್ಬ ನಾಯಕಿ ಪಾತ್ರಕ್ಕೆ ಕನ್ನಡ ನಟಿ ಶ್ರೀಲೀಲಾ ಆಯ್ಕೆ ಆಗುತ್ತಾರೆ ಎನ್ನಲಾಗ್ತಿದೆ. ಆದರೆ ಒಂದಷ್ಟು ಷರತ್ತುಗಳನ್ನು ಹಾಕಿದ ಪರಿಣಾಮ ಆಕೆಯನ್ನು ಕೈಬಿಟ್ಟಿದ್ದಾರೆ ಎನ್ನುವ ಗುಸುಗುಸು ಕೂಡ ಫಿಲ್ಮ್‌ನಗರ್‌ನಲ್ಲಿ ಚಕ್ಕರ್ ಹೊಡೀತಿದೆ.