For Quick Alerts
  ALLOW NOTIFICATIONS  
  For Daily Alerts

  ಹೆಸರಿಗಾಗಿ ನಿತ್ಯಾನಂದನನ್ನು ಮದುವೆ ಆಗ್ತಾರಂತೆ ನಟಿ ಪ್ರಿಯಾ ಆನಂದ್!

  |

  ತಮಿಳು ನಟಿ ಪ್ರಿಯಾ ಆನಂದ್ ಸೌತ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪ್ರಿಯಾ ಆನಂದ್ ಕನ್ನಡಿಗರಿಗೂ ಕೂಡ ಚಿರಪರಿಚಿತ. ಕನ್ನಡದ ಸಿನಿಮಾಗಳಲ್ಲಿ ಪ್ರಿಯಾ ಆನಂದ್ ನಟಿಸಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಜೊತೆಗೆ 'ಜೇಮ್ಸ್' ಮತ್ತು 'ರಾಜಕುಮಾರ' ಸಿನಿಮಾದಲ್ಲಿ ಪ್ರಿಯಾ ಆನಂದ್ ನಟಿಸಿದ್ದಾರೆ.

  ಪ್ರಿಯಾ ಆನಂದ್ ಆಗಾಗ ಕೆಲವು ವಿಚಾರಗಳಿಗೆ ಮಾತ್ರವೇ ಸುದ್ದಿ ಆಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಅಷ್ಟೇನೂ ಸಕ್ರಿಯವಾಗಿ ಇರುವುದಿಲ್ಲ. ಆದರೆ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಎಲ್ಲಿ ನೋಡಿದರೂ ಪ್ರಿಯಾ ಬಗ್ಗೆಯೇ ಚರ್ಚೆ ಶುರುವಾಗಿದೆ.

  ಅಷ್ಟಕ್ಕೂ ಪ್ರಿಯಾ ಆನಂದ್ ಮಾತನಾಡಿರುವುದು ತಮ್ಮ ಮದುವೆಯ ವಿಚಾರದ ಬಗ್ಗೆ. ಹಾಗಂತ ಪ್ರಿಯಾ ಆನಂದ್ ಮದುವೆಯಾಗಲು ತಯಾರಾಗಿದ್ದಾರೆ ಅಂತಲ್ಲ. ಸುಮ್ಮನೆ ಮಾತಿಗೆ ಹಾಗೆ ಹೇಳಿದ್ದಾರೆ. ಆದರೂ ಕೂಡ ದೇವಮಾನವ ಎಂದು ಕರೆದುಕೊಳ್ಳುವ ನಿತ್ಯಾನಂದನನ್ನು ಮದುವೆಯಾಗ್ತಿನಿ ಎಂದಿದ್ದೆ ಚರ್ಚೆಗೆ ಗ್ರಾಸವಾಗಿದೆ.

  ಮದುವೆ ಬಗ್ಗೆ ಪ್ರಿಯಾ ಆನಂದ್ ಅಚ್ಚರಿ ಹೇಳಿಕೆ!

  ಮದುವೆ ಬಗ್ಗೆ ಪ್ರಿಯಾ ಆನಂದ್ ಅಚ್ಚರಿ ಹೇಳಿಕೆ!

  ನಟಿ ಪ್ರಿಯಾ ಆನಂದ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೇಡಿಕೆಯ ನಟಿಯರಲ್ಲಿ ಪ್ರಿಯಾ ಆನಂದ್ ಕೂಡ ಒಬ್ಬರು. ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ ಪ್ರಿಯಾ ಆನಂದ್. ಆದರೀಗ ಸಂದರ್ಶನದಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುವ ವಿವಾದಿತ ನಿತ್ಯಾನಂದನನ್ನು ಮದುವೆಯಾಗ್ತೀನಿ ಎಂದಿದ್ದಾರೆ. ಈ ಆಸೆಯನ್ನ ಕೇಳಿದ ನೆಟ್ಟಿಗರು ಪ್ರಿಯಾ ಆನಂದ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಪ್ರಿಯಾ ಆನಂದ್ ಹೆಸರಲ್ಲಿದ್ದಾರಂತೆ ನಿತ್ಯಾನಂದ!

  ಪ್ರಿಯಾ ಆನಂದ್ ಹೆಸರಲ್ಲಿದ್ದಾರಂತೆ ನಿತ್ಯಾನಂದ!

  ನಟಿ ಪ್ರಿಯಾ ಆನಂದ್ ನಿತ್ಯಾನಂದನನ್ನು ಮದುವೆಯಾಗುತ್ತೇನೆ ಎಂದು ತಮಾಷೆಗೆ ಹೇಳಿದ್ದಾರೆ. ನಿತ್ಯಾನಂದನ ಬಗ್ಗೆ ಪ್ರಶ್ನೆ ಎದುರಾದಾಗ "ತನ್ನ ವರ್ಚಸ್ಸಿನ ಮೂಲಕ ಸೆಳೆಯುವ ಕಾರಣ ಸಾವಿರಾರು ಜನ ಆತನನ್ನು ಹಿಂಬಾಲಿಸುತ್ತಾರೆ. ಅಲ್ಲದೇ ನಿತ್ಯಾನಂದನನ್ನು ಮದುವೆಯಾದರೆ ನನ್ನ ಹೆಸರನ್ನು ಬದಲಾಯಿಸಬೇಕಾಗಿಲ್ಲ. ಏಕೆಂದರೆ ಅದು ಈಗಾಗಲೇ ಹೆಚ್ಚು ಕಡಿಮೆ ಹೋಲುತ್ತದೆ." ಎಂದು ಪ್ರಿಯಾ ಹಾಸ್ಯಮಯವಾಗಿ ಹೇಳಿದ್ದಾರೆ. ಆದ್ರೆ ಈ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಜೇಮ್ಸ್ ಪ್ರಿಯಾ ಆನಂದ್ ಕನ್ನಡದ ಕೊನೆ ಸಿನಿಮಾ!

  ಜೇಮ್ಸ್ ಪ್ರಿಯಾ ಆನಂದ್ ಕನ್ನಡದ ಕೊನೆ ಸಿನಿಮಾ!

  ಪ್ರಿಯಾ ಆನಂದ್ ಕಡೆಯದಾಗಿ ಕಾಣಿಸಿಕೊಂಡ ಕನ್ನಡ ಸಿನಿಮಾ ಜೇಮ್ಸ್. ಸದ್ಯ ಅವರ 'ಸುಮೋ' ಮತ್ತು 'ಕಾಸೆದನ್ ಕಡವುಲಡಾ' ಸಿನಿಮಾಗಳು ತೆರೆಗೆ ಬರಬೇಕಿದೆ. ಜೊತೆಗೆ 'ಅಂಧಗನ್' ಎನ್ನುವ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಅದೇನೆ ಇದ್ದರೂ ಯಾವ ವಿಚಾರಕ್ಕೂ ಹೆಚ್ಚಾಗಿ ಸುದ್ದಿ ಆಗದ ನಟಿ ಪ್ರಿಯಾ ಆನಂದ್, ನಿತ್ಯಾನಂದನ ಹೆಸರು ಹೇಳಿ ಸುದ್ದಿ ಆಗಿಬಿಟ್ಟಿದ್ದಾರೆ.

  English summary
  Priya Anand Wants To Married Nityananda, Shocking Comment Goes Viral, Know More
  Saturday, July 9, 2022, 18:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X