For Quick Alerts
  ALLOW NOTIFICATIONS  
  For Daily Alerts

  ಕಸ್ತೂರಿ ಚಾನೆಲ್‌ ಬಳಿ ಇದ್ದ ಅಪ್ಪು ಅಭಿನಯದ ಹಿಟ್ ಚಿತ್ರಗಳ ಎಚ್‌ಡಿ ಪ್ರಿಂಟ್ ಇನ್ಮುಂದೆ ಇಲ್ಲಿ ಲಭ್ಯ

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಕ್ಸ್ ಆಫೀಸ್ ಕಿಂಗ್ ಮಾತ್ರ ಆಗಿರದೇ ಟಿಆರ್‌ಪಿ ಕಿಂಗ್ ಎಂಬ ಬಿರುದನ್ನೂ ಕೂಡ ಸಂಪಾದಿಸಿದ್ದರು. ಏಕೆಂದರೆ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಗಳೆಂದರೆ ಜನರು ಟಿವಿಯಲ್ಲೂ ಸಹ ಮುಗಿಬಿದ್ದು ವೀಕ್ಷಸುತ್ತಿದ್ದರು. ಈಗಲೂ ಸಹ ಅತಿಹೆಚ್ಚು ಟಿ ಆರ್‌ ಪಿ ಪಡೆದ ಕನ್ನಡ ಚಿತ್ರಗಳ ಟಾಪ್ 5 ಪಟ್ಟಿ ತೆರೆದರೆ ಅದರಲ್ಲಿ ಸಿಂಹಪಾಲು ಅಪ್ಪು ಅಭಿನಯದ ಚಿತ್ರಗಳದ್ದೇ.

  ದೊಡ್ಮನೆ ಹುಡ್ಗ ಬರೆದ ಟಿವಿಆರ್ ದಾಖಲೆಗೆ ಜೀ ವಾಹಿನಿ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಹೀಗೆ ಕಿರುತೆರೆಯಲ್ಲೂ ಅಪ್ಪು ಟಾಪ್ ರೆಕಾರ್ಡ್ ಹೊಂದಿದ್ದು, ಈ ಸಲುವಾಗಿಯೇ ಟಿವಿ ಚಾನೆಲ್‌ಗಳು ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಗಳ ಟಿವಿ ಪ್ರಸಾರದ ಹಕ್ಕನ್ನು ಖರೀದಿಸಲು ಮುಗಿಬೀಳುತ್ತಿದ್ದರು. ಇನ್ನು ಪುನೀತ್ ರಾಜ್‌ಕುಮಾರ್ ಅಭಿನಯದ ಆರಂಭದ ಚಿತ್ರಗಳ ಚಿತ್ರಗಳ ಪ್ರಸಾರದ ಹಕ್ಕನ್ನು ಹೊಂದಿದ್ದದ್ದು ಕಸ್ತೂರಿ ಚಾನೆಲ್ ಹೊಂದಿತ್ತು.

  ಈಗ ಅಪ್ಪು ಅಭಿನಯದ ವಿಂಟೇಜ್ ಚಿತ್ರಗಳ ಹಕ್ಕನ್ನು ವೂಟ್ ಸೆಲೆಕ್ಟ್ ಖರೀದಿಸಿದ್ದು, ಅಕ್ಟೋಬರ್ 28ರಿಂದ ಪ್ರಸಾರ ಮಾಡುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು, ಅಭಿ, ಆಕಾಶ್, ಮೌರ್ಯ, ನಮ್ಮ ಬಸವ ಹಾಗೂ ಅಜಯ್ ಚಿತ್ರಗಳ ಪ್ರಸಾರದ ಹಕ್ಕನ್ನು ಈಗ ವೂಟ್ ಸೆಲೆಕ್ಟ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಈ ಚಿತ್ರಗಳ ಎಚ್ ಡಿ ಪ್ರಿಂಟ್‌ಗಳನ್ನು ವೀಕ್ಷಕರು ಮೊಬೈಲ್‌ನಲ್ಲೇ ವೀಕ್ಷಿಸಬಹುದಾಗಿದೆ.

  ಇನ್ನು ಈ ಆರೂ ಚಿತ್ರಗಳೂ ಸಹ ಬಿಡುಗಡೆಯಾದಾಗ ಮುಖ್ಯ ಚಿತ್ರಗಳಲ್ಲಿ ನೇರ ಶತದಿನೋತ್ಸವ ಪ್ರದರ್ಶನ ಕಂಡ ಚಿತ್ರಗಳಾಗಿವೆ. ಇನ್ನು ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಕಾರಣದಿಂದ ಅವರ ಅಭಿನಯದ ಈ ವಿಂಟೇಜ್ ಚಿತ್ರಗಳನ್ನು ನೋಡುವ ಇಚ್ಛೆ ಹಲವು ವೀಕ್ಷಕರಿಗಿದ್ದು, ಅಂಥವರು ವೂಟ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

  English summary
  Puneeth Rajkumar's initial hit movies hd print is now streaming on voot select. Read on
  Monday, October 31, 2022, 19:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X