Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಅತಿಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರ ಯಾವುದು? ಕೆಜಿಎಫ್ ನಂ. 1 ಯಾಕಾಗಲಿಲ್ಲ?
2022 ಕೊರೊನಾ ಲಾಕ್‌ಡೌನ್ ಇಲ್ಲದೇ ಎಲ್ಲಾ ವ್ಯವಹಾರ ಕ್ಷೇತ್ರಗಳೂ ಸಹ ಸಂಪೂರ್ಣವಾಗಿ ಚೇತರಿಸಿಕೊಂಡ ವರ್ಷ. ಅದರಲ್ಲಿಯೂ ಕಳೆದೆರಡು ವರ್ಷಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರವಂತೂ ಈ ವರ್ಷ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಸಿನಿ ರಸಿಕರು ಮತ್ತೆ ಥಿಯೇಟರ್‌ಗಳತ್ತ ಮುಖ ಮಾಡಿದ್ದಾರೆ. ಇನ್ನು ಜನರು ದೊಡ್ಡ ಸಂಖ್ಯೆಯಲ್ಲಿ ಮತ್ತೆ ಚಿತ್ರಮಂದಿರದತ್ತ ಬರಲು ಕಾರಣವಾದದ್ದು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು.
ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳು ಈ ವರ್ಷ ಅಬ್ಬರಿಸಿ ಬೊಬ್ಬಿರಿದವು. ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಂಡ ಆರ್‌ಆರ್‌ಆರ್, ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕೆಜಿಎಫ್ ಚಾಪ್ಟರ್ 2, ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಮಂಡ ಕಾಂತಾರ ಹಾಗೂ ಪೊನ್ನಿಯಿನ್ ಸೆಲ್ವನ್ ಚಿತ್ರಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ರೂಲ್ ಮಾಡಿದವು.
ಇನ್ನು ಭಾರತದ ಎಲ್ಲಾ ಇಂಡಸ್ಟ್ರಿಗಳೂ ಸೇರಿದಂತೆ ಈ ವರ್ಷ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಹೀಗೆ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡಿದ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವುದನ್ನು ಮಿಸ್ ಮಾಡಿಕೊಂಡ ಸಿನಿ ರಸಿಕರು ಆ ಚಿತ್ರಗಳನ್ನು ಓಟಿಟಿ ಅಪ್ಲಿಕೇಶನ್‌ಗಳಲ್ಲಿ ವೀಕ್ಷಿಸಲು ಮುಗಿಬಿದ್ದಿದ್ದಾರೆ. ಚಿತ್ರಮಂದಿರಗಳು ಮಾತ್ರವಲ್ಲದೇ ಓಟಿಟಿಯಲ್ಲೂ ಸಹ ಆ ಚಿತ್ರಗಳು ಅಬ್ಬರಿಸಿವೆ. ಇನ್ನು ಈ ವರ್ಷ ಜನಪ್ರಿಯ ಓಟಿಟಿಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಭಾರತದ ಚಿತ್ರಗಳ ಟಾಪ್ ಚಿತ್ರಗಳ 10 ಪಟ್ಟಿ ಈ ಕೆಳಕಂಡಂತಿದೆ..

ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಚಿತ್ರಗಳು
2022ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೊನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಭಾರತದ ಚಿತ್ರಗಳ ಟಾಪ್ 10 ಪಟ್ಟಿ ಇಲ್ಲಿದೆ..
1. ಪುಷ್ಪ - ದಿ ರೈಸ್
2. ಕೆಜಿಎಫ್ ಚಾಪ್ಟರ್ 2
3. ಕೆಜಿಎಫ್ ಚಾಪ್ಟರ್ 1
4. ಸೀತಾ ರಾಮಮ್
5. ಪೊನ್ನಿಯಿನ್ ಸೆಲ್ವನ್: ಪಾರ್ಟ್ 1
6. ಬಚ್ಚನ್ ಪಾಂಡೆ
7. ಜುಗ್ ಜುಗ್ ಜೀಯೋ
8. ರನ್ ವೇ 34
9. ಜುರಾಸಿಕ್ ವರ್ಲ್ಡ್ ಡೊಮಿನಿಯನ್
10. ಗೆಹ್ರೈಯಾನ್

ಕೆಜಿಎಫ್ ಚಾಪ್ಟರ್ 2 ಯಾಕೆ ನಂಬರ್ 1 ಆಗಲಿಲ್ಲ?
ಇನ್ನು ಪುಷ್ಪ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಗಳಿಸಿದ ಭಾರತದ ಚಿತ್ರ ಎನಿಸಿಕೊಂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಓಟಿಟಿಯಲ್ಲಿ ಏಕೆ ನಂಬರ್ ಒನ್ ಆಗಲಿಲ್ಲ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಕೋಟ್ಯಂತರ ಸಿನಿ ಪ್ರೇಕ್ಷಕರಿಂದ ಚಿತ್ರಮಂದಿರದಲ್ಲಿಯೇ ವೀಕ್ಷಿಸಲ್ಪಟ್ಟಿದ್ದ ಕಾರಣ ಕೆಜಿಎಫ್ ಚಾಪ್ಟರ್ 2 ಚಿತ್ರ ಓಟಿಟಿಯಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿಲ್ಲ. ಕಾಂತಾರ ಚಿತ್ರವೂ ಕೂಡ ಇದೇ ರೀತಿಯ ಫಲಿತಾಂಶವನ್ನು ಓಟಿಟಿಯಲ್ಲಿ ನೀಡಲಿದೆ ಎಂದೂ ಸಹ ಹೇಳುತ್ತಿದ್ದಾರೆ. ಇನ್ನು ಬಾಕ್ಸ್ ಆಫೀಸ್ ಲೂಟಿ ಹೊಡೆದಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಟಿವಿಯಲ್ಲೂ ಸಹ ಹೆಚ್ಚೇನೂ ಟಿಆರ್‌ಪಿ ಗಳಿಸಲಿಲ್ಲ. ಆದರೂ ಸಹ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ಪಟ್ಟಿಯಲ್ಲಿರುವುದು ದೊಡ್ಡ ವಿಷಯವೇ ಸರಿ.

ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೇಕೆ ಬೃಹತ್ ವೀಕ್ಷಣೆ?
ಇನ್ನು 2019ರಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಈ ವರ್ಷ ಅತಿಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಳ್ಳಲು ಕಾರಣ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೊಂಡದ್ದು. ಹೌದು, ದ್ವಿತೀಯ ಭಾಗವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವ ಮುನ್ನ ಸಿನಿ ರಸಿಕರು ಓಟಿಟಿಯಲ್ಲಿ ಮೊದಲ ಭಾಗವನ್ನು ವೀಕ್ಷಿಸಿದ ಸಲುವಾಗಿ ಈ ಚಿತ್ರ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.