Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೀವ ಉಳಿಸಿಕೊಳ್ಳಲು ಕಾಡಿನಲ್ಲಿ ಓಡಿದ ರಣ್ವೀರ್, ಬೆನ್ನು ಬಿಡದ ಕರಡಿ
ರಣ್ವೀರ್ ಸಿಂಗ್ ಬಾಲಿವುಡ್‌ನ ಕ್ರೇಜಿ ನಟ. ತಮ್ಮ ಹುಚ್ಚಾಟಗಳಿಂದ ಬಹಳ ಖ್ಯಾತರು ಇವರು. ರಣ್ವೀರ್ ಸಿಂಗ್‌ಗೆ ಇರುವ ಎನರ್ಜಿ ಬಾಲಿವುಡ್‌ನ ಇನ್ಯಾವ ನಟರಿಗೂ ಇಲ್ಲ.
ಸದಾ ಹೊಸತನಕ್ಕೆ, ಹೊಸ ಹುಚ್ಚಾಟಕ್ಕೆ, ಹೊಸ ಸಾಹಸಗಳಿಗೆ ತುಡಿವ ರಣ್ವೀರ್ ಸಿಂಗ್ ಇದೀಗ ಹೊಸ ಸಾಹಸವೊಂದನ್ನು ಮಾಡಲು ಹೋಗಿ ಜೀವಕ್ಕೆ ತುತ್ತು ತಂದುಕೊಂಡಿದ್ದರು.
ಕಾಡಿಗೆ ಹೋಗಿದ್ದ ರಣ್ವೀರ್ ಸಿಂಗ್ ಸುಮ್ಮನಿರದೆ ಅಲ್ಲಿ ಕರಡಿಗಳನ್ನು ಕೆಣಕಿದ್ದಾರೆ, ಸಿಟ್ಟಿಗೆದ್ದ ಕರಡಿಯೊಂದು ರಣ್ವೀರ್ ಸಿಂಗ್ ಬೆನ್ನು ಬಿದ್ದಿದೆ. ಜೀವ ಉಳಿಸಿಕೊಳ್ಳಲು ರಣ್ವೀರ್ ಸಿಂಗ್ ಕಾಡಿನಲ್ಲಿ ಓಟ ಕಿತ್ತಿದ್ದಾರೆ. ಆದರೂ ಕೊನೆಗೆ ಕರಡಿ ಕೈಗೆ ಸಿಕ್ಕಿಕೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾಡಿನಲ್ಲಿ ಕರಡಿಯ ಕೆಣಕಿದ ರಣ್ವೀರ್
ಆಗಿದ್ದಿಷ್ಟು, ರಣ್ವೀರ್ ಸಿಂಗ್, 'ಮ್ಯಾನ್ v/s ವೈಲ್ಡ್ ಖ್ಯಾತಿಯ ಸಾಹಸಿಗ ಬಿಯರ್ ಗ್ರಿಲ್ಸ್ ಜೊತೆ ಕಾಡಿಗೆ ಸಾಹಸ ಯಾತ್ರೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ರಣ್ವೀರ್ ಸಿಂಗ್ ಕಾಡಿನಲ್ಲಿ ಎದುರಾದ ಕರಡಿಯೊಂದನ್ನು ಬೇಕೆಂದೇ ಕೆಣಕಿದ್ದಾರೆ. ಅದರ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಕೂಡಲೇ ಆ ಕರಡಿ ರಣ್ವೀರ್ ಸಿಂಗ್ ಅನ್ನು ಅಟ್ಟಾಡಿಸಿಕೊಂಡು ಬಂದಿದೆ!

ಸತ್ತಂತೆ ನಟಿಸಿದ ರಣ್ವೀರ್ ಸಿಂಗ್
ಎದ್ದೆನೋ ಬಿದ್ದೆನೊ ಎಂದುಕೊಂಡು ರಣ್ವೀರ್ ಓಡಿದ್ದಾರೆ. ಅಲ್ಲಿ ಇಲ್ಲಿ ಬಚ್ಚಿಟ್ಟುಕೊಂಡ ಬಳಿಕವೂ ಕರಡಿ ಬೆನ್ನು ಬಿಟ್ಟಿಲ್ಲ. ಕೊನೆಗೆ ಬಿಯರ್ ಗ್ರಿಲ್ಸ್ ಹೇಳಿದಂತೆ ಕರಡಿ ಬರುವ ವೇಳೆಗೆ ಸತ್ತವರಂತೆ ಕದಲದೆ ನೆಲದ ಮೇಲೆ ಮಲಗಿದ್ದಾರೆ ರಣ್ವೀರ್. ರಣ್ವೀರ್ ಮುಖದ ಹತ್ತಿರಕ್ಕೆ ಬರುವ ಕರಡಿ ರಣ್ವೀರ್ ಅನ್ನು ಮೂಸಿ ಸುಮ್ಮನೆ ವಾಪಸ್ ಹೋಗಿದೆ. ರಣ್ವೀರ್ ಪಾಪ ಬದುಕಿದೆಯಾ ಬಡ ಜೀವವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಹಲವು ಸಾಹಸಗಳನ್ನು ಮಾಡಿದ್ದಾರೆ ರಣ್ವೀರ್
ಕರಡಿ ಮಾತ್ರವೇ ಅಲ್ಲದೆ ಬಿಯರ್ ಗ್ರಿಲ್ಸ್ ಜೊತೆ ಅರಣ್ಯದಲ್ಲಿ ಹಲವು ಸಾಹಸಗಳನ್ನು ರಣ್ವೀರ್ ಸಿಂಗ್ ಮಾಡಿದ್ದಾರೆ. ಆಳವಾದ ಕಣಿವೆಗಳನ್ನು ಹಗ್ಗ ಹಿಡಿದುಕೊಂಡು ಇಳಿದಿದ್ದಾರೆ. ಹಗ್ಗದಲ್ಲಿ ನೇತಾಡುತ್ತಾ ಕಣಿವೆಗಳನ್ನು ದಾಟಿದ್ದಾರೆ. ಕಡಿದಾದ ಜಾಗಗಳಲ್ಲಿ ಅಡ್ಡಾಡಿದ್ದಾರೆ, ನೀರಿನಲ್ಲಿ ಮುಳುಗೆದ್ದಿದ್ದಾರೆ. ಒಟ್ಟಿನಲ್ಲಿ ಬಿಯರ್ ಗ್ರಿಲ್ಸ್ ಜೊತೆಗೆ ಸಾಕಷ್ಟು ಸಾಹಸಗಳನ್ನು ರಣ್ವೀರ್ ಸಿಂಗ್ ಮಾಡಿದ್ದಾರೆ. ಬಿಯರ್ ಗ್ರಿಲ್ಸ್ ಅನ್ನು ''ನನಗಿಂತ ಹುಚ್ಚ' ಎಂದು ಕರೆದಿದ್ದಾರೆ ರಣ್ವೀರ್ ಸಿಂಗ್.

ಹಲವು ಖ್ಯಾತನಾಮರು ಭಾಗವಹಿಸಿರುವ ಕಾರ್ಯಕ್ರಮ
ಬಿಯರ್ ಗ್ರಿಲ್ಸ್ ಜೊತೆಗಿನ ರಣ್ವೀರ್ ಸಿಂಗ್‌ರ ಸಾಹಸ ಯಾತ್ರೆ ನೆಟ್‌ಫ್ಲಿಕ್ಸ್‌ನಲ್ಲಿ ಜುಲೈ 08 ರಂದು ಪ್ರಸಾರವಾಗಲಿದೆ. ಬಿಯರ್ ಗ್ರಿಲ್ಸ್ ತಮ್ಮ ಕಾಡಿನ ಸಾಹಸಗಳಿಗೆ ಜನಪ್ರಿಯರಾಗಿದ್ದು, ಈ ಮುಂಚೆ ಪ್ರಧಾನಿ ಮೋದಿ ಅವರೊಂದಿಗೆ ಕಾಡಿನಲ್ಲಿ ಸಾಹಸ ಯಾತ್ರೆ ಮಾಡಿದ್ದ. ರಜನೀಕಾಂತ್, ಅಕ್ಷಯ್ ಕುಮಾರ್ ಅವರೊಟ್ಟಿಗೂ ಸಾಹಸ ಯಾತ್ರೆ ಕೈಗೊಂಡಿದ್ದ. ಬರಾಕ್ ಒಬಾಮಾ ಸೇರಿದಂತೆ ಹಲವು ಖ್ಯಾತನಾಮರು ಬಿಯರ್ ಗ್ರಿಲ್ಸ್ ಶೋನಲ್ಲಿ ಭಾಗವಹಿಸಿದ್ದಾರೆ.