twitter
    For Quick Alerts
    ALLOW NOTIFICATIONS  
    For Daily Alerts

    'ರತ್ನನ್ ಪ್ರಪಂಚ' ಸಿನಿಮಾ ನೋಡಿದವರು ಹೇಳಿದ ಮಾತುಗಳು

    |

    ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸಿ ರೋಹಿತ್ ಪದಕಿ ನಿರ್ದೇಶನ ಮಾಡಿರುವ 'ರತ್ನನ್ ಪ್ರಪಂಚ' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಸಿನಿಮಾವನ್ನು ಸಿನಿಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.

    ನಿನ್ನೆ ರಾತ್ರಿಯೇ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ರಾತ್ರಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕ ತನ್ನ ವಿಮರ್ಶೆ ವ್ಯಕ್ತಪಡಿಸುತ್ತಿದ್ದು, ಸಿನಿಮಾ ನೋಡಿದ ಬಹುತೇಕರು ಸಿನಿಮಾ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲ ಪುನೀತ್ ರಾಜ್‌ಕುಮಾರ್ ಅಂಥಹಾ ಸ್ಟಾರ್ ನಟರು ಸಹ ಸಿನಿಮಾ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ.

    ''ರತ್ನನ್ ಪ್ರಪಂಚ' ಸಿನಿಮಾ ನೋಡ್ದೆ, ಅದ್ಭುತವಾದ ಸಿನಿಮಾ, ಬಹಳ ಖುಷಿಯಾಯ್ತು. ಧನಂಜಯ, ರೆಬಾ ಮೋನಿಕಾ, ಪ್ರಮೋದ್, ಉಮಾಶ್ರೀಯವರು, ಶ್ರುತಿ ಮೇಡಂ, ರವಿಶಂಕರ್, ಅನು ಪ್ರಭಾಕರ್, ಅಚ್ಯುತ್ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾದ ಸಂಭಾಷಣೆ, ಸಿನಿಮಾಟೊಗ್ರಫಿ ಮತ್ತು ಸಂಗೀತ ಸಿನಿಮಾಕ್ಕಿದೆ, ಇಡೀಯ ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ ನಟ ಪುನೀತ್ ರಾಜ್‌ಕುಮಾರ್.

    ''ಕನ್ನಡ ಚಿತ್ರರಂಗ ಜೀವಂತ ಇದೆ ಎನ್ನುವುದಕ್ಕೆ 'ರತ್ನನ್ ಪ್ರಪಂಚ' ಸಾಕ್ಷಿ''

    ''ಕನ್ನಡ ಚಿತ್ರರಂಗ ಜೀವಂತ ಇದೆ ಎನ್ನುವುದಕ್ಕೆ 'ರತ್ನನ್ ಪ್ರಪಂಚ' ಸಾಕ್ಷಿ''

    ಹಿರಿಯ ನಿರ್ದೇಶಕ, ನಟ ಎಸ್.ನಾರಾಯಣ್ ವಿಡಿಯೋ ಒಂದನ್ನು ಪ್ರಕಟಿಸಿದ್ದು, ''ಕನ್ನಡ ಚಿತ್ರರಂಗ ಜೀವಂತ ಇದೆ ಎನ್ನುವುದಕ್ಕೆ 'ರತ್ನನ್ ಪ್ರಪಂಚ' ಸಿನಿಮಾ ಸಾಕ್ಷಿ. ಬಹಳ ದಿನಗಳ ನಂತರ ಮೌಲ್ಯಾಧಾರಿತ ಸಿನಿಮಾ ನೋಡಿದಂತ ಸಂತೋಶ ನನಗಾಯಿತು. ಬಹಳ ಒಳ್ಳೆಯ ವಸ್ತು, ಒಳ್ಳೆಯ ಸಂಭಾಷಣೆ, ಒಳ್ಳೆಯ ಚಿತ್ರಕತೆ ಮತ್ತು ಪಾತ್ರಗಳ ಆಯ್ಕೆ ಅದ್ಭುತ. ಎಲ್ಲ ಪಾತ್ರಗಳು ಮನಸ್ಸಿನಲ್ಲಿ ಉಳಿದುಕೊಳ್ಳುತ್ತೆ. ಸಿನಿಮಾದ ನಿರ್ದೇಶಕರು ಬಹಳ ಚೆನ್ನಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಅಭಿನಂದನೆಗಳು'' ಎಂದಿದ್ದಾರೆ.

    ''ಕಣ್ಣುಗಳನ್ನು ತೇವಗೊಳಿಸಿದ ರತ್ನನ್ ಪ್ರಪಂಚ''

    ''ಕಣ್ಣುಗಳನ್ನು ತೇವಗೊಳಿಸಿದ ರತ್ನನ್ ಪ್ರಪಂಚ''

    ''ಇದೊಂದು ಅದ್ಭುತ ಭಾವನಾತ್ಮಕ ಪ್ರಪಂಚ, ನಮ್ಮೆಲ್ಲರ ಕಣ್ಣುಗಳನ್ನು ತೇವಗೊಳಿಸಿದ ರತ್ನನ್ ಪ್ರಪಂಚ. ಒಂದು ಒಳ್ಳೆಯ ಸಿನಿಮಾ. ಮನೆ ಮಂದಿಯೆಲ್ಲ ಕುಳಿತು ನೋಡಬೇಕಾದ ಸಿನಿಮಾ. ಗೆಳೆಯರೇ ಮರೆಯದೇ ನೋಡಿ. ಧನಂಜಯ್‌ರಿಂದ ಮತ್ತೊಂದು ಅದ್ಭುತ ಸಿನಿಮಾ. ಒಳ್ಳೆಯ ಸಿನಿಮಾ ಕೊಟ್ಟಿದ್ದಕ್ಕೆ ರೋಹಿತ್ ಪದಕಿಗೆ ಧನ್ಯವಾದ'' ಎಂದು ಟ್ವೀಟ್ ಮಾಡಿದ್ದಾರೆ ರಾಘವೇಂದ್ರ ಅಡಿಗ.

    ''ಡಾಲಿಯನ್ನು ಮರೆತು ರತ್ನಾಕರನನ್ನು ನೆನಪಿಟ್ಟುಕೊಳ್ಳಬೇಕು''

    ''ಡಾಲಿಯನ್ನು ಮರೆತು ರತ್ನಾಕರನನ್ನು ನೆನಪಿಟ್ಟುಕೊಳ್ಳಬೇಕು''

    ''ಡಾಲಿಯನ್ನ ಮರೆತು ರತ್ನನನ್ನು ನೆನಪಿಟ್ಟುಕೊಳ್ಳಬೇಕಾದಂಥಹಾ ಸಿನಿಮಾ. ಧನಂಜಯ್ ಅವರ ಕರಿಯರ್‌ನಲ್ಲಿಯೇ ಅತ್ಯುತ್ತಮ ಸಿನಿಮಾ. 'ರತ್ನಾಕರ'ನ ಪಾತ್ರ ನಿಮ್ಮ ವೃತ್ತಿಯಲ್ಲಿಯೇ ಅತ್ಯದ್ಭುತ ಪಾತ್ರ. 'ಪುಟ್ನಂಜ', 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಆದ ಬಳಿಕ ಉಮಾಶ್ರೀ ಅವರು ಮತ್ತೊಂದು ನೆನಪುಳಿಯೋ ನಟನೆ ನೀಡಿದ್ದಾರೆ. ಸಿನಿಮಾ ಮುಗಿದರೂ ಕಣ್ಣಂಚಲ್ಲಿ ನೀರು ಉಳಿಸುತ್ತೆ'' ಎಂದು ಟ್ವೀಟ್ ಮಾಡಿರುವುದು 'ಭಲೆ ಸಾಮ್ರಾಜ್ಯ' ಅನ್ನೋ ಪೇಜ್.

    ''ಅಮ್ಮನನ್ನು ಕೂಡಲೇ ತಬ್ಬಿಕೊಳ್ಳಬೇಕೆಂದೆನಿಸಿತು''

    ''ಅಮ್ಮನನ್ನು ಕೂಡಲೇ ತಬ್ಬಿಕೊಳ್ಳಬೇಕೆಂದೆನಿಸಿತು''

    ''ಅತ್ಯುತ್ತಮವಾದ ಚಿತ್ರ. ಹೃದಯ ತುಂಬಾ‌ ಭಾರವಾಯಿತು. ಅಮ್ಮನನ್ನು ಕೂಡಲೇ ತಬ್ಬಿಕೊಳ್ಳಬೇಕೆಂದೆನಿಸಿತು. ಈ ಚಿತ್ರಕ್ಕೆ ಶ್ರಮಿಸಿದ ಎಲ್ಲ ಕಲಾವಿದರಿಗೂ,ತಂತ್ರಜ್ಞರಿಗೂ, ಮುಖ್ಯವಾಗಿ ನೀರ್ದೆಶಕರಿಗೆ ಹೃದಯ ಪೂರ್ವಕ ಧನ್ಯವಾದಗಳು.'' ಎಂದು ಶ್ರೀಕಾಂತ್ ನಂದಿ ಎಂಬುವರು, 'ಫಿಲ್ಮಿಬೀಟ್ ಕನ್ನಡ' ನೀಡಿದ 'ರತ್ನನ್ ಪ್ರಪಂಚ' ಸಿನಿಮಾ ವಿಮರ್ಶೆಗೆ ಕಮೆಂಟ್ ಮಾಡಿದ್ದಾರೆ.

    ''ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕಿತ್ತು''

    ''ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕಿತ್ತು''

    ''ಸತ್ಯವಾಗಲು ತುಂಬಾ ಅರ್ಥಗರ್ಭಿತ ಸಿನಿಮಾ ,ಅಮ್ಮನ ಮಮತೆ , ವಾಸ್ತವದ ಜೀವನ ಶೈಲಿ, ಮಧ್ಯಮವರ್ಗದ ಅಣೆಬರಹ ಹಾಗೂ ಎಲ್ಲಿಯ ಮಗು ಎಲ್ಲಿಯ ತಾಯಿ, ಸಾಕಿ ಸಲವೂ ವವರು ಎಷ್ಟು ಮುಖ್ಯ ವಾವ್ ಸಿನಿಮಾ ಅಂದ್ರೆ ಇದಲ್ವಾ , ಇದನ್ನ ದೊಡ್ಡಮಟ್ಟದ ಚಿತ್ರ ಮಂದಿರಗಳಲ್ಲಿ ತೆರೆ ಕಂಡು ಇಡೀ ದೇಶಕ್ಕೆ ತಾಯಿಯ ಮಮತೆಯ ಬೆಲೆ ತಿಳಿಯುವ ಹಾಗೆ ಮಾಡಿದ್ದರೆ ಉತ್ತಮವಾಗಿತ್ತು'' ಎಂದು ಕಮೆಂಟ್ ಮಾಡಿದ್ದಾರೆ ಸಿನಿಮಾ ಪ್ರೇಮಿ ತಿಪ್ಪೇಶ್.

    ''ಆಲ್‌ ದಿ ಬೆಸ್ಟ್ ರತ್ನಾಕರ''

    ''ಆಲ್‌ ದಿ ಬೆಸ್ಟ್ ರತ್ನಾಕರ''

    ''ಧನಂಜಯ್‌ರ ನಟನೆ ಪ್ರಮೋದ್ ಅವರ ಉತ್ತರ ಕರ್ನಾಟಕ ಶೈಲಿಯ ಭಾಷೆ ಸೂಪರ್. ಸಿನೆಮಾ ಭಾವನೆಗಳೊಂದಿಗೆ ಪ್ರೇಕ್ಷಕನ್ನನ್ನ ಸೆರೆಹಿಡಿಯೋದ್ ಅಷ್ಟೇ ಅಲ್ಲದೇ, ಸಂಭಂಧಗಳ ಆಳವನ್ನು ಚಿತ್ರಿಸುತ್ತಾ ಹೋಗುತ್ತದೆ. ಸಿನೆಮಾ ಇನ್ನೂ ಯಶಸ್ವಿಯಾಗಲಿ‌. ಆಲ್ ದಿ ಬೆಸ್ಟ್ ರತ್ನಾಕರ‌'' ಎಂದು ಟ್ವೀಟ್ ಮಾಡಿದ್ದಾರೆ ಹನಮಂತ ಕಂಬಗಿ.

    English summary
    Daali Dhananjay starrer Ratnan Prapancha Twitter Review: Dhananjaya Starrer gets thumbs up from fans.
    Friday, October 22, 2021, 21:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X