For Quick Alerts
  ALLOW NOTIFICATIONS  
  For Daily Alerts

  ಈ ದಿನದಂದು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಇಂಡಸ್ಟ್ರಿ ಹಿಟ್ 'ಕಾಂತಾರ'; ಯಾವ ಅಪ್ಲಿಕೇಶನ್‌ನಲ್ಲಿ ರಿಲೀಸ್?

  |

  ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ಕಾಂತಾರ ಚಿತ್ರ ಇಂದಿಗೆ ( ನವೆಂಬರ್ 17 ) 49 ದಿನಗಳನ್ನು ಪೂರೈಸಿದ್ದು ಅರ್ಧಶತಕ ಬಾರಿಸುವ ಹೊಸ್ತಿಲಲ್ಲೇ ಮುಖ್ಯಚಿತ್ರಮಂದಿರದಿಂದ ಹೊರಬಿದ್ದಿದೆ. ಇನ್ನು ಮುಖ್ಯ ಚಿತ್ರಮಂದಿರದಲ್ಲಿ ಅಲ್ಲದಿದ್ದರೂ ಬೆಂಗಳೂರಿನ ಹಾಗೂ ರಾಜ್ಯದ ಇತರೆ ನಗರ ಮತ್ತು ಪಟ್ಟಣಗಳ ಅನೇಕ ಚಿತ್ರಮಂದಿರಗಳಲ್ಲಿ ಕಾಂತಾರ ಅರ್ಧಶಕರ ಬಾರಿಸಲಿದೆ.

  ಇಂದಿಗೂ ಸಹ ವಿವಿಧ ನಗರಗಳ ಕೆಲ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ವಾರಾಂತ್ಯದಲ್ಲಿ ಫ್ಯಾಮಿಲಿ ಆಡಿಯನ್ಸ್‌ಗಳಿಂದ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ. ಇನ್ನು ಕಲೆಕ್ಷನ್ ವಿಚಾರವಾಗಿ ಕರ್ನಾಟಕದಲ್ಲಿ ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಯನ್ನೂ ಅಳಿಸಿ ಹಾಕಿರುವ ಕಾಂತಾರ ಚಿತ್ರ ರಾಜ್ಯದ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ.

  ಸದ್ಯ ಎಲ್ಲಾ ಭಾಷೆಯೂ ಸೇರಿದಂತೆ 380 ಕೋಟಿ ಗಳಿಕೆ ಮಾಡಿರುವ ಕಾಂತಾರ 400 ಕೋಟಿ ಗಳಿಸುವತ್ತ ದಾಪುಗಾಲು ಇಟ್ಟಿದ್ದು, ಇದೇ ವೇಳೆ ಕಾಂತಾರ ಚಿತ್ರದ ಓಟಿಟಿ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದೆ.

  ಯಾವಾಗ, ಯಾವ ಅಪ್ಲಿಕೇಶನ್‌ನಲ್ಲಿ ಕಾಂತಾರ ಬಿಡುಗಡೆ?

  ಯಾವಾಗ, ಯಾವ ಅಪ್ಲಿಕೇಶನ್‌ನಲ್ಲಿ ಕಾಂತಾರ ಬಿಡುಗಡೆ?

  ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊ ಓಟಿಟಿಯಲ್ಲಿ ಇದೇ ನವೆಂಬರ್ 24ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಕಾಂತಾರ ಚಿತ್ರವನ್ನು ಈವರೆಗೂ ಕರ್ನಾಟಕದಲ್ಲೇ ಕೋಟಿಗೂ ಅಧಿಕ ಜನ ವೀಕ್ಷಿಸಿದ್ದು ನವೆಂಬರ್ 24ರವರೆಗೆ ಚಿತ್ರವು ತನ್ನ ಓಟವನ್ನು ಮುಗಿಸುವ ಸಾಧ್ಯತೆಗಳಿದ್ದು ಚಿತ್ರವನ್ನು ಆ ದಿನ ಓಟಿಟಿಯಲ್ಲಿ ಬಿಡುಗಡೆಗೊಳಿಸಲು ಯೋಜನೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಎರಡು ಬಾರಿ ಮುಂದೂಡಿಕೆ

  ಎರಡು ಬಾರಿ ಮುಂದೂಡಿಕೆ

  ಇನ್ನು ಮೊದಲಿಗೆ ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ನವೆಂಬರ್ 4ರಂದೇ ಬಿಡುಗಡೆಗೊಳಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ ಚಿತ್ರ ಭರ್ಜರಿ ಗಳಿಕೆ ಮಾಡಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ಕಾರಣ ಓಟಿಟಿ ಸ್ಟ್ರೀಮಿಂಗ್ ದಿನಾಂಕವನ್ನು ಮುಂದೂಡಲಾಗಿತ್ತು. ಬಳಿಕ ನವೆಂಬರ್ 18ರಂದು ಕಾಂತಾರ ಬಿಡುಗಡೆಗೊಳ್ಳಲಿದೆ ಎಂಬ ಸುದ್ದಿ ಇತ್ತು. ಸದ್ಯ ಈ ದಿನದಿಂದ ನವೆಂಬರ್ 24ಕ್ಕೆ ಓಟಿಟಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

  ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲೂ ಅಬ್ಬರ

  ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲೂ ಅಬ್ಬರ

  ಕಾಂತಾರ ಚಿತ್ರ ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡ ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿತು. ಸದ್ಯ ಹಿಂದಿ ಬೆಲ್ಟ್‌ನಲ್ಲಿ 75 ಕೋಟಿ ಗಳಿಸಿರುವ ಕಾಂತಾರ ತೆಲುಗಿನಲ್ಲಿ 52 ಕೋಟಿ ಹಾಗೂ ಮಲಯಾಳಂನಲ್ಲಿ 17 ಕೋಟಿ ಗಳಿಸಿದೆ. ಇದರ ಜತೆಗೆ ಚಿತ್ರದ ಸ್ಯಾಟಲೈಟ್ ಹಕ್ಕುಗಳೂ ಸಹ ಬೃಹತ್ ಮೊತ್ತಕ್ಕೆ ಸೇಲ್ ಆಗಿದ್ದು, ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಚಿತ್ರ ಬೃಹತ್ ಹಣವನ್ನು ಬಾಚಿಕೊಂಡಿದೆ.

  English summary
  Rishab Shetty starrer Kantara likely to be streaming from November 24 on amazon prime video. Read on
  Thursday, November 17, 2022, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X