For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಭಿನಯದ 'ಯಶೋಧಾ' ಓಟಿಟಿ ಬಿಡುಗಡೆ ದಿನಾಂಕ ಘೋಷಣೆ; ಚಿತ್ರಮಂದಿರದಲ್ಲಿ ಗೆಲ್ತಾ, ಸೋಲ್ತಾ?

  |

  ಸಮಂತಾ ರುತ್ ಪ್ರಭು ವಿವಾಹ ವಿಚ್ಚೇದನ ಪಡೆದುಕೊಂಡ ನಂತರ ಕೇವಲ ಹಾಟ್ ರೋಲ್‌ಗಳನ್ನು ಮಾಡಲು ಪ್ರಾತಿನಿಧ್ಯ ನೀಡುತ್ತಿದ್ದಾರೆ ಎಂಬ ಗಂಭೀರ ಟ್ರೋಲ್ ಒಂದು ನಡೆದಿತ್ತು. ಈ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳದ ನಟಿ ಸಮಂತಾ ರುತ್ ಪ್ರಭು ತನ್ನ ಪಾಡಿಗೆ ತಾನು ತಮಿಳಿನಲ್ಲಿ 'ಕಾದುವಾಕುಲ ರೆಂಡು ಕಾದಲ್' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನು ತೆಲುಗಿನ ಸೂಪರ್ ಹಿಟ್ ಚಿತ್ರ ಪುಷ್ಟ ದ ರೈಸ್‌ನಲ್ಲಿ ಐಟಂ ಹಾಡಿಗೂ ಸಹ ಸಮಂತಾ ಈ ನಡುವೆ ಸೊಂಟ ಬಳುಕಿಸಿದ್ದರು.

  ಹೀಗೆ ಸಮಂತಾ ಈ ಎರಡು ಚಿತ್ರಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲ್‌ಗೆ ಒಳಗಾಗಿದ್ದ ಸಮಂತಾ ಈ ವರ್ಷ ಬಿಡುಗಡೆಗೊಂಡ ಯಶೋಧಾ ಚಿತ್ರದ ಮೂಲಕ ಟ್ರೋಲ್‌ಗಳಿಗೆಲ್ಲಾ ತಿರುಗೇಟು ನೀಡಿದರು. ಒಂದೊಳ್ಳೆ ಥ್ರಿಲ್ಲಿಂಗ್ ಕತೆಯಿದ್ದ ಮಹಿಳಾ ಪ್ರಧಾನ ಚಿತ್ರವನ್ನು ಆಯ್ದುಕೊಂಡಿದ್ದ ಸಮಂತಾ ಚಿತ್ರದಲ್ಲಿನ ತನ್ನ ಪ್ರದರ್ಶನಕ್ಕೆ ದೊಡ್ಡ ಮಟ್ಟದ ಪ್ರಶಂಸೆ ಗಿಟ್ಟಿಸಿಕೊಂಡರು.

  ನವೆಂಬರ್ 11ರಂದು ಬಿಡುಗಡೆಗೊಂಡಿದ್ದ ಈ ಚಿತ್ರ ಸರೋಗಸಿ ಸುತ್ತ ಸುತ್ತುವ ರೋಚಕ ಕತೆಯನ್ನು ಹೊಂದಿತ್ತು. ಚಿತ್ರ ವೀಕ್ಷಿಸಿದ ಚಿತ್ರ ರಸಿಕರು ಸಮಂತಾ ನಟನೆ ಮಾತ್ರವಲ್ಲದೇ ಚಿತ್ರವನ್ನೂ ಸಹ ಮೆಚ್ಚಿಕೊಂಡಿದ್ದರು. ಹೀಗಾಗಿಯೇ ಯಶೋಧಾ ಹಾಕಿದ್ದ ಬಂಡವಾಳಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿತು ಹಾಗೂ ನಿರ್ಮಾಪಕರು ಮತ್ತು ವಿತರಕರ ಪಾಲಿನ ಮೊತ್ತವನ್ನೂ ಸಹ ಕಲೆಹಾಕಿ ಲಾಭವನ್ನು ತಂದುಕೊಟ್ಟಿತು. ಹೀಗೆ ಲಾಭ ತಂದುಕೊಟ್ಟು ಸೇಫ್ ಆದ ಸಮಂತಾ ನಟನೆಯ ಯಶೋಧಾ ಚಿತ್ರ ಯಾವಾಗ ಯಾವ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಚಿತ್ರಮಂದಿರದಲ್ಲಿ ಎಷ್ಟು ಕೋಟಿ ಗಳಿಸಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

  ಓಟಿಟಿ ಬಿಡುಗಡೆ ಯಾವಾಗ?

  ಓಟಿಟಿ ಬಿಡುಗಡೆ ಯಾವಾಗ?

  ಸಮಂತಾ ರುತ್ ಪ್ರಭು ನಟನೆಯ ಯಶೋಧಾ ಚಿತ್ರ ಡಿಸೆಂಬರ್ 9ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಗೊಳ್ಳಲಿದೆ. ಮೂಲ ತೆಲುಗು ಭಾಷೆಯ ಚಿತ್ರವಾದ ಯಶೋಧಾ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಲಿದೆ.

  ಚಿತ್ರದ ಬಜೆಟ್ ಹಾಗೂ ಕಲೆಕ್ಷನ್?

  ಚಿತ್ರದ ಬಜೆಟ್ ಹಾಗೂ ಕಲೆಕ್ಷನ್?

  ಇನ್ನು ಮೊದಲಿಗೆ ಸಣ್ಣ ಬಜೆಟ್‌ನೊಂದಿಗೆ ಆರಂಭವಾಗಿದ್ದ ಯಶೋಧಾ ಚಿತ್ರದ ಬಜೆಟ್ ಅನ್ನು ನಿರ್ಮಾಪಕರು ನಂತರದ ದಿನಗಳಲ್ಲಿ ಚಿತ್ರದ ಕತೆಗೆ ಅನುಗುಣವಾಗಿ ಏರಿಕೆ ಮಾಡಿದ್ದರು ಹಾಗೂ ಈ ವಿಷಯವನ್ನು ಸ್ವತಃ ಚಿತ್ರದ ನಿರ್ಮಾಪಕರೇ ಹಂಚಿಕೊಂಡಿದ್ದರು. 30 ಕೋಟಿ ವೆಚ್ಚದಲ್ಲಿಲ ತಯಾರಾಗಿದ್ದ ಯಶೋಧಾ ಚಿತ್ರ ಅಂತಿಮವಾಗಿ 34 ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಇನ್ನು 12 ಕೋಟಿ ಶೇರ್ ಅನ್ನು ಬ್ರೇಕ್ ಈವೆನ್ ಟಾರ್ಗೆಟ್ ಆಗಿ ಹೊಂದಿದ್ದ ಯಶೋಧಾ 15 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಮಾಡುವ ಮೂಲಕ ಮೂರು ಕೋಟಿ ಲಾಭವನ್ನು ತಂದುಕೊಟ್ಟಿದೆ.

  ಸಮಂತಾ ಮುಂದಿನ ಚಿತ್ರಗಳಾವುವು?

  ಸಮಂತಾ ಮುಂದಿನ ಚಿತ್ರಗಳಾವುವು?

  ಸದ್ಯ ಯಶೋಧಾ ಯಶಸ್ಸಿನಲ್ಲಿರುವ ಸಮಂತಾ ಅನಾರೋಗ್ಯಕ್ಕೂ ಸಹ ಒಳಗಾಗಿದ್ದು, ಸದ್ಯ ಶಾಕುಂತಲಂ ಎಂಬ ಚಿತ್ರದಲ್ಲಿ ನಟಿಸಿದ್ದಾರೆ ಹಾಗೂ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿರುವ 'ಖುಷಿ' ಚಿತ್ರದಲ್ಲೂ ಸಹ ಸಮಂತಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾಂಬಿನೇಶನ್ ಚಿತ್ರದ ಮೇಲೆ ನಿರೀಕ್ಷೆ ಸಹ ಇದೆ..

  English summary
  Samantha starrer Yashoda will stream on Amazon Prime video from December 9. Read on
  Tuesday, December 6, 2022, 14:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X