For Quick Alerts
  ALLOW NOTIFICATIONS  
  For Daily Alerts

  ಯಶ್ ಧ್ವನಿಗೆ ಮಾರು ಹೋದ ಸಮಂತಾ: ಈಡೇರುತ್ತಾ ಸ್ಯಾಮ್ ಆಸೆ?

  |

  ರಾಕಿ ಭಾಯಿ ಈಗ ನ್ಯಾಷನಲ್ ಸ್ಟಾರ್ ಅನ್ನೋದು ಗೊತ್ತೇ ಇದೆ. ಕನ್ನಡಿಗರಿಗಷ್ಟೇ ಅಲ್ಲ. ಇಡೀ ವಿಶ್ವದಲ್ಲಿರುವ ಭಾರತೀಯರಿಗೆ ಯಶ್ ಈಗ ಚಿರಪರಿಚಿತ. ಅದರಲ್ಲೂ 'ಕೆಜಿಎಫ್ 2' ಬಾಕ್ಸಾಫೀಸ್‌ ಕೊಳ್ಳೆ ಹೊಡೆದ ಬಳಿಕವಂತೂ ಯಶ್ ಎಲ್ಲಾ ಕಡೆ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ.

  ಎಲ್ಲಾ ಚಿತ್ರರಂಗದವರೂ ಯಶ್ ಬಗ್ಗೆನೇ ಮಾತಾಡುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದನ್ನು ಎದುರು ನೋಡುತ್ತಿದ್ದಾರೆ. ಕೆಲವರು ಯಶ್ ಜೊತೆ ಕೆಲಸ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೆ ಕೆಲವು ರಾಕಿ ಭಾಯ್‌ ಅನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

  ಕಾಫಿ ವಿತ್ ಕರಣ್‌ನಲ್ಲಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ ಸಮಂತಾಕಾಫಿ ವಿತ್ ಕರಣ್‌ನಲ್ಲಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ ಸಮಂತಾ

  ಈಗ ಸಮಂತಾ ಕೂಡ ಯಶ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಸೀಸನ್ 7ರಲ್ಲಿ ಭಾಗವಹಿಸಿದ್ದಾಗ, ಕರಣ್ ಕೇಳಿದ ಪ್ರಶ್ನೆಗೆ ಸಮಂತಾ ಕನ್ನಡ ನಟನ ಹೆಸರು ಹೇಳಿದ್ದಾರೆ. ಅಷ್ಟಕ್ಕೂ ಸಮಂತಾ, ಯಶ್ ಬಗ್ಗೆ ಹೇಳಿದ್ದೇನು? ಅಂತ ತಿಳಿಯಲು ಮುಂದೆ ಓದಿ.

  'ಕಾಫಿ ವಿಥ್ ಕರಣ್‌' ಶೋ ಗೆ ಬಂದ ಸಮಂತಾ

  'ಕಾಫಿ ವಿಥ್ ಕರಣ್‌' ಶೋ ಗೆ ಬಂದ ಸಮಂತಾ

  ಸಮಂತಾ ಹಾಗೂ ಅಕ್ಷಯ್ ಕುಮಾರ್ 'ಕಾಫಿ ವಿಥ್ ಕರಣ್' ಶೋಗೆ ಬರುತ್ತಾರೆ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತು. ಪ್ರೋಮೊಗಳು ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿತ್ತು. ಈ ಬೆನ್ನಲ್ಲೇ ಜುಲೈ 21ಕ್ಕೆ ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಅವರ ವಿಶೇಷ ಸಂದರ್ಶನ ಬಿದ್ದಿದೆ. ಕರಣ್‌ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಸಮಂತಾ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರಹಾಕಿದ್ದಾರೆ.

  ಉರ್ಕೊಳ್ಳೋರ್ ಉರ್ಕೊಳ್ಳಲಿ: ಅಕ್ಷಯ್ ಕುಮಾರ್ ತೆಕ್ಕೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಮಂತಾ!ಉರ್ಕೊಳ್ಳೋರ್ ಉರ್ಕೊಳ್ಳಲಿ: ಅಕ್ಷಯ್ ಕುಮಾರ್ ತೆಕ್ಕೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಮಂತಾ!

  ಯಶ್ ಧ್ವನಿಗೆ ಸಮಂತಾ ಫಿದಾ!

  ಯಶ್ ಧ್ವನಿಗೆ ಸಮಂತಾ ಫಿದಾ!

  ಕರಣ್‌ ಜೋಹರ್ ಹಾಗೂ ಸಮಂತಾ ನಡುವಿನ ಸಂಭಾಷಣೆಯಲ್ಲಿ ಕೆಲವು ಆಸಕ್ತಿಕರಸ ವಿಷಯಗಳು ಹೊರಬಿದ್ದಿವೆ. "GPSನಲ್ಲಿ ನೀವು ಯಾರ ಧ್ವನಿಯನ್ನು ಕೇಳಲು ಇಷ್ಟ ಪಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಮಂತಾ ಒಂದು ಕ್ಷಣವೂ ಯೋಚನೆ ಮಾಡದೆ "GPSನಲ್ಲಿ ಯಶ್ ಧ್ವನಿಯನ್ನು ಕೇಳಲು ಇಷ್ಟ ಪಡುತ್ತೇನೆ" ಎಂದು ಹೇಳಿದ್ದಾರೆ. ಸಮಂತಾ ಟಾಕ್ ಶೋನಲ್ಲಿ ಯಶ್ ಹೆಸರು ಪ್ರಸ್ತಾಪ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ GPSನಲ್ಲಿ ಯಶ್ ಧ್ವನಿ ಕೇಳಿಸುತ್ತಾ? ಸಮಂತಾ ಆಸೆ ಈಡೇರುತ್ತಾ? ಅನ್ನುವ ಪ್ರಶ್ನೆಯಂತೂ ಎದ್ದಿದೆ.

  ಸಮಂತಾ ಮೂವರು ನಟರ ಬಗ್ಗೆ ಮಾತು!

  ಸಮಂತಾ ಮೂವರು ನಟರ ಬಗ್ಗೆ ಮಾತು!

  'ಕಾಫಿ ವಿಥ್ ಕರಣ್' ಇಡೀ ಶೋ ನಲ್ಲಿ ಸಮಂತಾ ಮೂವರು ನಟರ ಬಗ್ಗೆ ಹೆಚ್ಚಾಗಿ ಮಾತಾಡಿದ್ದರು. ಅವರಲ್ಲಿ ಪ್ರಮುಖರು ರಣ್‌ವೀರ್ ಸಿಂಗ್. ಸಮಂತಾ ಬಾಲಿವುಡ್‌ ನಟ ರಣ್‌ವೀರ್ ಸಿಂಗ್‌ ಬಗ್ಗೆನೇ ಪದೇ ಪದೆ ಮಾತಾಡಿದ್ದಾರೆ. ಇನ್ನೊಂದು ಕಡೆ ಯಶ್ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಆಡಿದ ಮಾತುಗಳ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಮೂವರು ನಟರು ಸಮಂತಾ ಮೇಲೆ ಹೆಚ್ಚು ಪರಿಣಾಮ ಬೀರಿದಂತಿದೆ.

  ಯಶ್-ಸಮಂತಾ ಒಟ್ಟಿಗೆ ನಟಿಸಬಹುದಾ?

  ಯಶ್-ಸಮಂತಾ ಒಟ್ಟಿಗೆ ನಟಿಸಬಹುದಾ?

  ಯಶ್ ಧ್ವನಿಗೆ ಫಿದಾ ಆಗಿರುವ ಸಮಂತಾ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ನೆಟ್ಟಿಗರು ಇಬ್ಬರೂ ಒಟ್ಟಿಗೆ ನಟಿಸಿದರೆ ಹೇಗಿರುತ್ತೆ? ಎಂದೂ ಚರ್ಚೆ ಮಾಡುತ್ತಿದ್ದಾರೆ. ಇಲ್ಲಾ ಅಂದರೆ, ಯಶ್ ಮುಂದಿನ ಸಿನಿಮಾಗೆ ಒಂದು ಹಾಡಿನಲ್ಲದರೂ ಬರಲಿ ಎನ್ನುತ್ತಿದ್ದಾರೆ. ಆದರೆ, ಇನ್ನೂ ಸಿನಿಮಾದ ಡೇಟ್ ಅನೌನ್ಸ್ ಆಗಿಲ್ಲ. ಅಂದ್ಮೇಲೆ ಸಮಂತಾ ಹಾಗೂ ಯಶ್ ಒಟ್ಟಿಗೆ ಪರದೆ ಮೇಲೆ ಕಾಣಿಸಿಕೊಳ್ಳುವುದು ಸದ್ಯ ದೂರದ ಮಾತು.

  Recommended Video

  PuneethRajkumar ಅವರ ಹೆಸರಿನಲ್ಲಿ ಪ್ರಶಸ್ತಿ, ಪ್ರಶಸ್ತಿ ಪ್ರದಾನ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ *Sandalwood
  English summary
  Samantha Wants To Here Yash Voice In GPS Says Koffee With Karan Season 7 In Disney Hot Star, Know More.
  Friday, July 22, 2022, 16:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X