For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರ ಬಂಧನದ ನಡುವೆಯೂ 'ಬಿಗ್ ಬಾಸ್'ಗೆ ಬಂದ ಕಾರಣ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಸಹೋದರಿ

  |

  ಹಿಂದಿ ಒಟಿಟಿ 'ಬಿಗ್ ಬಾಸ್'ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಭಾನುವಾರ (ಆಗಸ್ಟ್ 08) ಒಟಿಟಿ ಬಿಗ್ ಬಾಸ್ ಪ್ರಾರಂಭವಾಗಿದ್ದು, ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುವ ಜೊತೆಗೆ ಟಿವಿಯಲ್ಲೂ ಬಿಗ್ ಬಾಸ್ ಪ್ರಸಾರವಾಗಲಿದೆ.

  ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಆರು ವಾರಗಳ ಮೊದಲೇ ಪ್ರಸಾರವಾಗಲಿದೆ. ಇತ್ತೀಚಿಗಷ್ಟೆ ಹಿಂದಿ ಬಿಗ್ ಬಾಸ್ ಒಟಿಟಿಯ ಪ್ರೋಮೋ ಬಿಡುಗಡೆಯಾಗಿತ್ತು. ಈ ಪ್ರೋಮೋ 15ನೇ ಆವೃತ್ತಿ ಸಖತ್ ಬೋಲ್ಡ್ ಹಾಗೂ ಹಾಟ್ ಆಗಿರಲಿದೆ ಎಂದು ಸುಳಿವು ನೀಡಿತ್ತು. ಈ ಪ್ರೋಮೋ ನೋಡಿದ್ಮೇಲೆ ಈ ಸಲ ಬಿಗ್ ಬಾಸ್ ಸಾಮಾನ್ಯ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು. ಈ ಶೋ ವಯಸ್ಕರಿಗಾಗಿ ಮಾಡಿರುವುದು ಎನ್ನುವುದು ಚರ್ಚೆ ಪ್ರಾರಂಭವಾಗಿತ್ತು. ಇಲ್ಲಿ ಸ್ಪರ್ಧಿಗಳು ಬೆತ್ತಲಾಗುತ್ತಾರೆ, ಅರೆ ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನು ಸ್ವತಃ ಕರಣ್ ಜೋಹರ್ ಅವರೇ ಹೇಳಿದ್ದರು.

  ಪ್ರೋಮೋ ಬಿಡುಗಡೆ ಮಾಡಿದ ಬಳಿಕ ಒಟಿಟಿ ಬಿಗ್ ಬಾಸ್ ಹೇಗಿರಲಿದೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಕುತೂಹಲ ಮತ್ತು ನಿರೀಕ್ಷೆಯೊಂದಿಗೆ ಬಿಗ್ ಬಾಸ್ ಆಗಲೇ ಪ್ರಾರಂಭವಾಗಿದೆ. ನಿರೀಕ್ಷೆಯಂತೆ ಶಿಲ್ಪಾ ಶೆಟ್ಟಿ ಸೋಹದರಿ ಶಮಿತಾ ಶೆಟ್ಟಿ ಭಾಗಿಯಾಗಿದ್ದಾರೆ. ಶಮಿತಾ ಶೆಟ್ಟಿ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರುತ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಆದರೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಬಿಗ್ ಮನೆಗೆ ಎಂಟ್ರಿ ಕೊಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂದೆ ಓದಿ..

  ರಾಜ್ ಕುಂದ್ರ ಬಂಧನದ ನಡುವೆಯೂ 'ಬಿಗ್ ಬಾಸ್'ನಲ್ಲಿ ಶಮಿತಾ

  ರಾಜ್ ಕುಂದ್ರ ಬಂಧನದ ನಡುವೆಯೂ 'ಬಿಗ್ ಬಾಸ್'ನಲ್ಲಿ ಶಮಿತಾ

  ಶಮಿತಾ ಶೆಟ್ಟಿ ಬಾವ ರಾಜ್ ಕುಂದ್ರ ಬಂಧನದ ನಡುವೆಯೂ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಾರಾ ಎನ್ನುವ ಅನುಮಾನ ಕಿರುತೆರೆ ಪ್ರೇಕ್ಷಕರನ್ನು ಕಾಡುತ್ತಿತ್ತು. ಆದರೆ ನಿನ್ನೆ ಪ್ರಾರಂಭವಾದ ಬಿಗ್‌ಬಾಸ್‌ನಲ್ಲಿ ಮೊದಲ ಸ್ಪರ್ಧಿಯಾಗಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಶಮಿತಾ ಎಂಟ್ರಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ರಾಜ್ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ಬಗ್ಗೆ ಏನು ಹೇಳಿಲ್ಲವಾದರೂ, ಈ ಸಮಯದಲ್ಲಿ 'ಬಿಗ್ ಬಾಸ್'ಗೆ ಎಂಟ್ರಿ ಕೊಡುವುದು ಸರಿಯಾದ ಸಮಯವಲ್ಲ ಎಂದು ಹೇಳಿದ್ದಾರೆ.

  ಇದು ಸರಿಯಾದ ಸಮಯವಲ್ಲ, ಆದರೆ...: ಶಮಿತಾ

  ಇದು ಸರಿಯಾದ ಸಮಯವಲ್ಲ, ಆದರೆ...: ಶಮಿತಾ

  ಸರಿಯಾದ ಸಮಯ ಅಲ್ಲ ಎಂದು ಗೊತ್ತಿದ್ದರೂ ಬಿಗ್‌ಬಾಸ್‌ನಲ್ಲಿ ಭಾಗಿಯಾದ ಬಗ್ಗೆ ಶಮಿತಾ ಮಾತನಾಡಿದ್ದಾರೆ. "ಈ ಸಮಯದಲ್ಲಿ ನಾನು ಬಿಗ್ ಬಾಸ್ ಗೆ ಹೋಗುವುದು ಸರಿಯಲ್ಲ ಎಂದು ಭಾವಿಸಿದ್ದೆ. ಆದರೆ ಬಿಗ್‌ಬಾಸ್‌ಗೆ ಹೋಗುವ ಆಫರ್ ಬಹಳ ಹಿಂದೆಯೇ ಸಿಕ್ಕಿತ್ತು. ಆಗ ನಾನು ಒಪ್ಪಿಗೆ ನೀಡಿದ್ದೆ. ಆ ನಂತರ ತುಂಬಾ ಸಂಭವಿಸಿತು. ಮನೆಯೊಳಗೆ ಹೋಗಲು ಸರಿಯಾದ ಸಮಯವಲ್ಲ ಎಂದುಕೊಂಡೆ. ಆದರೆ ಒಮ್ಮೆ ಒಪ್ಪಿಕೊಂಡ ನಂತರ ನಾನು ನನ್ನ ಮಾತನ್ನು ಕೇಳುವುದಿಲ್ಲ" ಎಂದು ಹೇಳಿದ್ದಾರೆ.

  ಮೊದಲ ದಿನವೇ ಬಿಗ್ ಮನೆಯಲ್ಲಿ ಶಮಿತಾ ಕಿಡಿ

  ಮೊದಲ ದಿನವೇ ಬಿಗ್ ಮನೆಯಲ್ಲಿ ಶಮಿತಾ ಕಿಡಿ

  ಅಂದಹಾಗೆ ಶಮಿತಾ ಶೆಟ್ಟಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡುವುದು ಇದೆ ಮೊದಲಲ್ಲ. ಈ ಈ ಹಿಂದೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ 9ರಲ್ಲಿ ಶಮಿತಾ ಭಾಗಿಯಾಗಿದ್ದರು. ಇದೀಗ ಮೊದಲ ಬಾರಿಗೆ ಒಟಿಟಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗಾಗಲೇ ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನ ಕಳೆದಿರುವ ಶಮಿತಾ ಸಹ ಸ್ಪರ್ಧಿ ಜೊತೆ ಕಾಳಗಕ್ಕೆ ಇಳಿದಿದ್ದಾರೆ. ಶಮಿತಾ ಕಿತ್ತಾಟದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ರಿಯಾಲಿಟಿ ಶೋನಿಂದ ದೂರ ಉಳಿದ ಶಿಲ್ಪಾ ಶೆಟ್ಟಿ

  ರಿಯಾಲಿಟಿ ಶೋನಿಂದ ದೂರ ಉಳಿದ ಶಿಲ್ಪಾ ಶೆಟ್ಟಿ

  ಮತ್ತೊಂದೆಡೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಬಂಧನದ ಬಳಿಕ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮದಿಂದ ದೂರ ಉಳಿದ್ದಾರೆ. ಶಿಲ್ಪಾ ಶೆಟ್ಟಿ ಸೂಪರ್ ಡಾನ್ಸರ್ 4ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ರಾಜ್ ಕುಂದ್ರ ಬಂಧನದ ಬಳಿಕ ಶೋನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಿಲ್ಪಾ ಜಾಗದಲ್ಲಿ ಬೇರೆ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಾರೆ.

  ಜುಲೈ 19ಕ್ಕೆ ರಾಜ್ ಕುಂದ್ರ ಬಂಧನ

  ಜುಲೈ 19ಕ್ಕೆ ರಾಜ್ ಕುಂದ್ರ ಬಂಧನ

  ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಅವರನ್ನು ಮುಂಬೈ ಪೋಲೀಸರು ಜುಲೈ 19 ರಂದು ಬಂಧಿಸಿದರು. ಜುಲೈ 27 ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಕುಂದ್ರ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಕುಂದ್ರ ಜೈಲಿನಲ್ಲಿದ್ದಾರೆ. ತಕ್ಷಣ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಕುಂದ್ರಗೆ ಕೋರ್ಟ್ ಜಾಮೀನು ನಿರಾಕರಿಸಿದೆ.

  English summary
  Shilpa Shetty sister's Shamita Shetty reaction to Participate on OTT Bigg Boss amid Raj Kundra arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X