twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ಸಾಯಿ ಪಲ್ಲವಿ ನಟನೆಯ ಸಿನಿಮಾ

    |

    ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ ವಿಶ್ವ ಸಿನಿಮಾಗಳ ಖಣಜ. ಭಾರತೀಯ ಭಾಷೆಯ ಕಂಟೆಂಟ್ ಮಾತ್ರವೇ ಅಲ್ಲದೆ ವಿಶ್ವದ ಹಲವು ಭಾಷೆಗಳ ಕಂಟೆಂಟ್‌ಗಳು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ.

    ನೆಟ್‌ಫ್ಲಿಕ್ಸ್‌ ಆರಂಭದ ಕೆಲ ಸಮಯ ಭಾರತೀಯ ಕಂಟೆಂಟ್‌ನಿಂದ ದೂರವೇ ಉಳಿದಿತ್ತು. ಭಾರತೀಯ ಸಿನಿಮಾಗಳು, ವೆಬ್ ಸರಣಿಗಳ ಬಗ್ಗೆ ಸ್ವತಃ ನೆಟ್‌ಫ್ಲಿಕ್ಸ್‌ಗೆ ಅನುಮಾನವಿತ್ತು. ಇಂಗ್ಲೀಷ್, ಕೊರಿಯನ್, ಫ್ರೆಂಚ್ ಭಾಷೆಯ ಸಿನಿಮಾ, ವೆಬ್ ಸರಣಿಗಳ ಗುಣಮಟ್ಟವನ್ನು ಭಾರತೀಯ ಕಂಟೆಂಟ್ ತಲುಪುವುದಿಲ್ಲ ಎಂದುಕೊಂಡಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ.

    ಭಾರತೀಯ ಭಾಷೆಯ ಸಿನಿಮಾಗಳು ವಿಶ್ವಮಟ್ಟದ ಸಿನಿಮಾ, ವೆಬ್ ಸರಣಿಗೆ ಸ್ಪರ್ಧೆ ನೀಡುತ್ತಿರುವುದು ಮಾತ್ರವಲ್ಲ ಯಶಸ್ಸನ್ನೂ ಗಳಿಸುತ್ತಿವೆ. ಅದಕ್ಕೆ ನೆಟ್‌ಫ್ಲಿಕ್ಸ್‌ ಇತ್ತೀಚಿಗೆ ಬಿಡುಗಡೆ ಮಾಡಿರುವ ಮಾಹಿತಿಯೇ ಸಾಕ್ಷಿಯಾಗಿ ನಿಂತಿದೆ.

    ಜನವರಿ ತಿಂಗಳ 17 ರಿಂದ 23ರವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ಇಂಗ್ಲೀಷೇತರ ಸಿನಿಮಾ, ವೆಬ್ ಸರಣಿಗಳ ಮಾಹಿತಿಯನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದ್ದು, ಭಾರತದ ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾ ಒಂದು ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಸಾಮಾನ್ಯದ ಸಾಧನೆಯಲ್ಲ.

    'ಶ್ಯಾಮ ಸಿಂಘ ರಾಯ್' ವಿಶೇಷ ಸಾಧನೆ

    'ಶ್ಯಾಮ ಸಿಂಘ ರಾಯ್' ವಿಶೇಷ ಸಾಧನೆ

    ತೆಲುಗಿನ ನಟ ನಾನಿ, ಸಾಯಿ ಪಲ್ಲವಿ, ಕರ್ನಾಟಕ ಮೂಲದ ಕೃತಿ ಶೆಟ್ಟಿ ನಟಿಸಿರುವ 'ಶ್ಯಾಮ ಸಿಂಘ ರಾಯ್' ಸಿನಿಮಾವನ್ನು ಕಳೆದ ವಾರದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಅವಧಿಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಹತ್ತು ಸಿನಿಮಾಗಳ ಪಟ್ಟಿಯನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದ್ದು ಮೂರನೇ ಸ್ಥಾನದಲ್ಲಿ 'ಶ್ಯಾಮ ಸಿಂಘ ರಾಯ್' ಸಿನಿಮಾ ಇದೆ. ವಿಶೇಷವೆಂದರೆ 'ಶ್ಯಾಮ ಸಿಂಘ ರಾಯ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿದ್ದೇ ಜನವರಿ 21 ರಂದು. ಅಂದರೆ ಕೇವಲ ಎರಡೇ ದಿನಕ್ಕೆ ಈ ಸಿನಿಮಾ ಟಾಪ್ ಹತ್ತರ ಪಟ್ಟಿ ಸೇರಿಕೊಂಡಿದ್ದು ಮಾತ್ರವಲ್ಲ, ಮೂರನೇ ಸ್ಥಾನಕ್ಕೆ ಏರಿದೆ.

    ಎರಡು ದಿನದಲ್ಲಿ 3.59 ಲಕ್ಷ ಗಂಟೆಗಳ ವೀಕ್ಷಣಾ ಅವಧಿ

    ಎರಡು ದಿನದಲ್ಲಿ 3.59 ಲಕ್ಷ ಗಂಟೆಗಳ ವೀಕ್ಷಣಾ ಅವಧಿ

    'ಶ್ಯಾಮ ಸಿಂಘ ರಾಯ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ಎರಡೇ ದಿನದಲ್ಲಿ 3.59 ಲಕ್ಷ ಗಂಟೆಗಳ ಕಾಲ ಸಿನಿಮಾ ವೀಕ್ಷಣೆಗೆ ಒಳಗಾಗಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಭಾರತೀಯ ಸಿನಿಮಾ ಒಂದು ಟಾಪ್ ಮೂರರ ಸ್ಥಾನಕ್ಕೇರಿದೆ. ಹಾಗೂ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ತೆಲುಗು ಸಿನಿಮಾ ಎಂಬ ಖ್ಯಾತಿಗೆ ಸಹ 'ಶ್ಯಾಮ ಸಿಂಘ ರಾಯ್' ಪಾತ್ರವಾಗಿದೆ. ಪಟ್ಟಿಯ ಮೊದಲ ಸ್ಥಾನದಲ್ಲಿ ಪೋಲಿಶ್ ಸಿನಿಮಾ 'ನೌ ಐ ಫೆಲ್ ಇನ್ ಲವ್ ವಿತ್ ಗ್ಯಾಂಗ್‌ಸ್ಟರ್' ಸಿನಿಮಾಕ್ಕೆ ದೊರೆತಿದೆ.

     ಚಿತ್ರಮಂದಿರಗಳಲ್ಲಿ ಹಿನ್ನಡೆ

    ಚಿತ್ರಮಂದಿರಗಳಲ್ಲಿ ಹಿನ್ನಡೆ

    'ಶ್ಯಾಮ ಸಿಂಘ ರಾಯ್' ಸಿನಿಮಾವು ಕಳೆದ ವರ್ಷ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಆದರೆ ಕೊರೊನಾ ಹಾಗೂ ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ಸಮಸ್ಯೆ ಇದ್ದ ಕಾರಣ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲು ಸಿನಿಮಾ ವಿಫಲವಾಯಿತು. ಸಿನಿಮಾವನ್ನು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿದ್ದು, ವೆಂಕಟ್ ಬೋಯನಪಲ್ಲಿ ನಿರ್ಮಾಣ ಮಾಡಿದ್ದಾರೆ.

    ಟಾಪ್ ಟ್ರೆಂಡಿಂಗ್‌ನಲ್ಲಿದ್ದ 'ಅನ್ನಾತೆ'

    ಟಾಪ್ ಟ್ರೆಂಡಿಂಗ್‌ನಲ್ಲಿದ್ದ 'ಅನ್ನಾತೆ'

    ಈ ಮೊದಲು ರಜನೀಕಾಂತ್ ನಟನೆಯ 'ಅನ್ನಾತೆ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದಾಗ ಹಲವು ದಿನ ಇದೇ ಸಿನಿಮಾ ಟಾಪ್ ಟ್ರೆಂಡಿಂಗ್‌ನಲ್ಲಿತ್ತು. ನೆಟ್‌ಫ್ಲಿಕ್ಸ್‌ನ ಆಲ್‌ಟೈಮ್ ಟಾಪ್ ಮನಿ ಹೈಸ್ಟ್‌ ಅನ್ನು ಕೆಲ ದಿನಗಳ ಕಾಲ ಹಿಂದಿಕ್ಕಿ ಭಾರತದಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿತ್ತು. ಸಿನಿಮಾದ ತಮಿಳು, ತೆಲುಗು ಹಾಗೂ ಹಿಂದಿ ವರ್ಷನ್‌ಗಳು ಮೂರು ಸಹ ಟಾಪ್ 10 ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದಿದ್ದು ವಿಶೇಷವಾಗಿತ್ತು. ನೆಟ್‌ಫ್ಲಿಕ್ಸ್ ಇದೀಗ ಭಾರತದ ಅದರಲ್ಲಿಯೂ ದಕ್ಷಿಣ ಭಾರತ ಕಂಟೆಂಟ್‌ಗಳ ಕಡೆಗೆ ಹೆಚ್ಚು ಗಮನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಹಲವು ದಕ್ಷಿಣ ಭಾರತ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ ತನ್ನ ವೇದಿಕೆಯಲ್ಲಿ ಬಿಡುಗಡೆ ಮಾಡಲಿದೆ.

    English summary
    Telugu movie Shyam Singha Roy became most watched non English movie on Netflix. Movie staring Nani, Sai Pallavi and Kruti Shetty released on Netflix on January 21.
    Saturday, January 29, 2022, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X