For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಬಾಂಬ್ ಸ್ಪೋಟದ ಕತೆ ಹೊತ್ತು ಬರುತ್ತಿರುವ ಸಿಂಧು ಲೋಕನಾಥ್

  |

  ನಟಿ ಸಿಂಧು ಲೋಕನಾಥ್ ಮತ್ತೆ ಬಂದಿದ್ದಾರೆ. ಈ ಬಾರಿ ಬಹಳ ಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರೆದುರು ಸಿಂಧು ಕಾಣಿಸಿಕೊಳ್ಳಲಿದ್ದಾರೆ.

  2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣಗಳು ಬಹುತೇಕರಿಗೆ ನೆನಪಿದೆ. ಈ ಸರಣಿ ಬಾಂಬ್ ಬ್ಲಾಸ್ಟ್ ಘಟನೆ ಬೆಂಗಳೂರಿಗರಲ್ಲಿ ಭಯ ಹುಟ್ಟುಹಾಕಿದ್ದವು. ಜೊತೆಗೆ ಈ ಪ್ರಕರಣವನ್ನು ಭೇದಿಸುವುದು ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

  ಇದೀಗ ಇದೇ ಕತೆಯನ್ನು ಆಧರಿಸಿದ ವೆಬ್ ಸರಣಿಯೊಂದು ನಿರ್ಮಾಣವಾಗುತ್ತಿದ್ದು ಸಿಂಧು ಲೋಕನಾಥ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಬ್ ಸರಣಿಯಲ್ಲಿ ಸಿಂಧು ಅವರದ್ದು ರಾ ಏಜೆಂಟ್ ಪಾತ್ರ. ಈ ಹಿಂದೆ 'ಲೂಸ್ ಕನೆಕ್ಷನ್' ಹೆಸರಿನ ವೆಬ್ ಸರಣಿಯಲ್ಲಿ ಸಿಂಧು ಲೋಕನಾಥ್ ನಟಿಸಿದ್ದರು. ಇದು ಸಿಂಧು ಅವರಿಗೆ ಎರಡನೇ ವೆಬ್ ಸರಣಿ.

  'ಅಟೆಮ್ಟ್ ಟು ಮರ್ಡರ್' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಅಮರ್ ಗೌಡ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತಾದ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ. ವೆಬ್ ಸರಣಿಯ ಚಿತ್ರೀಕರಣ 75% ಭಾಗ ಮುಗಿದಿದೆ. ವೆಬ್ ಸರಣಿಯ ಹೆಸರು ಇನ್ನು ಅಂತಿಮವಾಗಿಲ್ಲ.

  ಬೆಂಗಳೂರು ಸರಣಿ ಬಾಂಬ್ ಪ್ರಕರಣದ ಕತೆ ಮುಖ್ಯವಾಗಿದ್ದರೂ ಅದಕ್ಕೆ ಒಂದಿಷ್ಟು ಕಾಲ್ಪನಿಕ ವಿಷಯಗಳನ್ನು ಸೆರಿಸಿ ಕತೆ ಹೆಣೆಯಲಾಗಿದ್ದು, ಈ ವೆಬ್ ಸರಣಿಯು ಹತ್ತು ಎಪಿಸೋಡ್‌ಗಳನ್ನು ಹೊಂದಿರಲಿದೆ. ಡಿಸೆಂಬರ್ ತಿಂಗಳಲ್ಲಿ ವೆಬ್ ಸರಣಿಯನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಇರಾದೆ ನಿರ್ದೇಶಕರಿಗೆ ಇದೆ.

  ವೆಬ್ ಸರಣಿ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಸಿಂಧು ಲೋಕನಾಥ್, ''ನನ್ನ ವೃತ್ತಿ ಜೀವನದಲ್ಲಿ ಈವರೆಗೆ ನಟಿಸಿರದಿದ್ದ ರೀತಿಯ ಪಾತ್ರ ನನಗೆ ಸಿಕ್ಕಿದೆ. ಹಳ್ಳಿ ಹುಡುಗಿ, ಕಾಲೇಜು ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದ ನನಗೆ ಇದೇ ಮೊದಲ ಬಾರಿಗೆ ಅಂಡರ್‌ಕವರ್ ರಾ ಏಜೆಂಟ್ ಪಾತ್ರ ದೊರೆತಿದೆ'' ಎಂದಿದ್ದಾರೆ.

  ಬಾಂಬ್ ಬ್ಲಾಸ್ಟ್‌ ಸುತ್ತಲ ಕತೆಯನ್ನು ವೆಬ್ ಸರಣಿ ಹೊಂದಿರಲಿದ್ದು, 30 ನಿಮಿಷಗಳ ಹತ್ತು ಎಪಿಸೋಡ್‌ಗಳನ್ನು ವೆಬ್ ಸರಣಿ ಹೊಂದಿರಲಿದೆ. ಸಿಂಧು ಲೋಕನಾಥ್ ಜೊತೆಗೆ ಶ್ರೀಧರ್, ಭರತ್ ಬೋಪಣ್ಣ ಇನ್ನೂ ಹಲವರು ವೆಬ್ ಸರಣಿಯಲ್ಲಿ ನಟಿಸಿದ್ದಾರೆ.

  English summary
  Sindhu Loknath acting in web series which is based on Bengaluru serial bomb blast. Web series will release in December.
  Monday, September 6, 2021, 11:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X