For Quick Alerts
  ALLOW NOTIFICATIONS  
  For Daily Alerts

  ನಟನಾದ ಗಾಯಕ ಸಂಜಿತ್ ಹೆಗ್ಡೆ: ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್!

  |

  ಕನ್ನಡದ ಮಧುರ ಕಂಠದ ಗಾಯಕ ಸಂಜಿತ್ ಹೆಗ್ಡೆ ನಟರಾಗಿ ಪಾದಾರ್ಪಣೆ ಮಾಡಿದ್ದಾರೆ. ಸಂಚಿತ್ ನಟಿಸಿರುವ ತೆಲುಗು ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

  ತೆಲುಗು ಸಿನಿಮಾ 'ಪಿಟ್ಟ ಕತಲು' ಸಿನಿಮಾದ ಮೂಲಕ ಸಂಜಿತ್ ಹೆಗಡೆ ನಟರಾಗಿದ್ದು, ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್‌ನಲ್ಲಿ ಕಾಣುತ್ತಿರುವಂತೆ ಠಪೋರಿ ಯುವಕನಾಗಿ ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಸಂಜಿತ್ ಹೆಗ್ಡೆ.

  ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿರುವ ಸಂಜಿತ್ ಹೆಗ್ಡೆ ನಟರಾಗಿದ್ದು ಅಭಿಮಾನಿಗಳಿಗೆ ಸಖತ್ ಆಶ್ಚರ್ಯ ಮೂಡಿಸಿದೆ.

  ನಟನಾಗಿ ಹೊಸ ಪಯಣ ಆರಂಭಿಸಿದ ಸಂಜಿತ್ ಹೆಗ್ಡೆ

  ನಟನಾಗಿ ಹೊಸ ಪಯಣ ಆರಂಭಿಸಿದ ಸಂಜಿತ್ ಹೆಗ್ಡೆ

  ಕನ್ನಡದ ಸಾರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಈ ಪ್ರತಿಭೆ ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತ ಗಾಯಕನಾಗಿ ಹೊರಹೊಮ್ಮಿದ್ದಾರೆ. ಇದೀಗ ನಟನಾಗಿ ಹೊಸ ಪಯಣ ಆರಂಭಿಸಿದ್ದು, ನಟನಾಗಿ ಎಷ್ಟು ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  ಮೊದಲ ಸಿನಿಮಾದಲ್ಲಿಯೇ ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್

  ಮೊದಲ ಸಿನಿಮಾದಲ್ಲಿಯೇ ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್

  ಸಂಜಿತ್ ನಟಿಸಿರುವ ಮೊದಲ ಸಿನಿಮಾದಲ್ಲಿಯೇ ಖ್ಯಾತ ನಟಿ ಶ್ರುತಿ ಹಾಸನ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ. ಕೆಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಶ್ರುತಿ ಹಾಸನ್ ಜೊತೆ ನಟಿಸಿದ್ದಾರೆ. ಸಂಜಿತ್ ನಟಿಸಿರುವ ಕತೆಯನ್ನು ನಿರ್ದೇಶಿಸಿರುವುದು 'ಮಹಾನಟಿ' ನಿರ್ದೇಶಕ ನಾಗ್ ಅಶ್ವಿನ್. ಇದೇ ನಾಗ್ ಅಶ್ವಿನ್ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಸಿನಿಮಾವನ್ನು ಸಹ ನಿರ್ದೇಶಿಸುತ್ತಿದ್ದಾರೆ.

  ನೆಟ್‌ಫ್ಲಿಕ್ಸ್‌ನ ಮೊದಲ ತೆಲುಗು ಸಿನಿಮಾ

  ನೆಟ್‌ಫ್ಲಿಕ್ಸ್‌ನ ಮೊದಲ ತೆಲುಗು ಸಿನಿಮಾ

  ಸಂಜಿತ್ ಹೆಗಡೆ ನಟಿಸಿರುವ 'ಪಿಟ್ಟ ಕತಲು' ಮೊದಲ ನೆಟ್‌ಫ್ಲಿಕ್ಸ್‌ ಒರಿಜಿನಲ್ ತೆಲುಗು ಸಿನಿಮಾ ಆಗಿದೆ. ಈ ಹಿಂದೆ ಇನ್ನಾವುದೇ ತೆಲುಗು ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ಬಂಡವಾಳ ಹೂಡಿರಲಿಲ್ಲ. ಇದೊಂದು ಅಂತಾಲಜಿ ಸಿನಿಮಾ ಆಗಿದ್ದು ನಾಲ್ಕು ಮಂದಿ ನಿರ್ದೇಶಕರು ನಾಲ್ಕು ಕತೆಗಳನ್ನು ನಿರ್ದೇಶಿಸಿದ್ದಾರೆ.

  ಫೆಬ್ರವರಿ 19 ರಂದು ಸಿನಿಮಾ ಬಿಡುಗಡೆ

  ಫೆಬ್ರವರಿ 19 ರಂದು ಸಿನಿಮಾ ಬಿಡುಗಡೆ

  ಪಿಟ್ಟ್ ಕತಲು ಸಿನಿಮಾದ ನಾಲ್ಕು ಕತೆಗಳಲ್ಲಿ ಅಮಲಾ ಪೌಲ್, ಜಗಪತಿ ಬಾಬು, ಅಶ್ವಿನಿ ಕಾಕಮಾನು, ಲಕ್ಷ್ಮಿ ಮಂಚು, ಸಾನ್ವೆ ಮೇಘನಾ, ಶ್ರುತಿ ಹಾಸನ್, ಸಂಜಿತ್ ಹೆಗ್ಡೆ ಹಾಗೂ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ನಾಲ್ಕು ಮಹಿಳೆಯರ ನಾಲ್ಕು ಕತೆಗಳನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವು ಫೆಬ್ರವರಿ 19 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

  English summary
  Singer Sanjith Hegde first movie as actor Pitta Kathalu will release on Netflix on February 19. Its a Telugu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X