Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022: ನೆಟ್‌ಫ್ಲಿಕ್ಸ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಭಾರತದ 10 ಚಿತ್ರಗಳಿವು
2022 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ವರ್ಷ ಭಾರತದ ಪ್ರಮುಖ ಚಿತ್ರರಂಗಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಎಲ್ಲವೂ ಸಹ ನೂರು ಕೋಟಿ ಗಳಿಕೆ ಮಾಡಿದ ಚಿತ್ರಗಳನ್ನು ನೀಡಿವೆ.
ಕನ್ನಡ ಇಂಡಸ್ಟ್ರಿ ಕೆಜಿಎಫ್ 2 ಹಾಗೂ ತೆಲುಗು ಚಿತ್ರರಂಗ ಆರ್ ಆರ್ ಆರ್ ಮೂಲಕ 1000 ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದರೆ, ತಮಿಳು ಚಿತ್ರರಂಗದ ವಿಕ್ರಮ್ ಹಾಗೂ ಪೊನ್ನಿಯಿನ್ ಸೆಲ್ವನ್ ಈ ಎರಡೂ ಚಿತ್ರಗಳು 500 ಕೋಟಿ ಗಳಿಸಿದವು. ಹೀಗೆ ಈ ವರ್ಷ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಅಬ್ಬರ ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿತ್ತು.
ಎರ್
ಆರ್
ರೆಹಮಾನ್
ನಿರ್ದೇಶನದ
'ಲೆಮಸ್ಕ್'
ಮೆಟಾವರ್ಸ್
ಎಕ್ಸ್ಪೀರಿಯನ್ಸ್ಗೆ
ಜಿಮ್ಮಿ
ಎನ್ಗ್ಯುಯೆನ್
ಫಿದಾ
ಇನ್ನು ಈ ವರ್ಷ ಬಿಡುಗಡೆಯಾದ ಭಾರತದ ಚಿತ್ರಗಳ ಪೈಕಿ ಬರೋಬ್ಬರಿ 30 ಚಿತ್ರಗಳು 100 ಕೋಟಿ ಗಳಿಕೆ ಮಾಡಿವೆ. ಇಷ್ಟರ ಮಟ್ಟಿಗೆ ಸದ್ದು ಮಾಡಿದ ಈ ಚಿತ್ರಗಳು ಕಳೆದೆರಡು ವರ್ಷಗಳಲ್ಲಿ ಲಾಕ್ ಡೌನ್ ನಿಯಮದಿಂದಾಗಿ ನಷ್ಟ ಅನುಭವಿಸಿದ್ದ ಸಿನಿಮಾ ರಂಗಕ್ಕೆ ಮರುಜನ್ಮ ನೀಡಿವೆ. ಹೀಗೆ ಚಿತ್ರಮಂದಿರಗಳಲ್ಲಿ ಅಬ್ನರಿಸಿ ಬೊಬ್ಬಿರಿದ ಚಿತ್ರಗಳನ್ನು ಮಿಸ್ ಮಾಡಿಕೊಂಡವರು ಓಟಿಟಿಗೆ ಬಂದ ನಂತರ ದೊಡ್ಡ ಮಟ್ಟದಲ್ಲಿ ವೀಕ್ಷಿಸಿದ್ದಾರೆ. ಹೌದು, ಈಗ ಓಟಿಟಿಯಲ್ಲಿ ಚಿತ್ರ ವೀಕ್ಷಣೆ ಮಾಡುವ ಸಿನಿ ರಸಿಕರ ಸಂಖ್ಯೆ ಹೆಚ್ಚಿದೆ. ದೊಡ್ಡ ಹಾಗೂ ಜನಪ್ರಿಯ ಓಟಿಟಿಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್ ನಲ್ಲಿ ಈ ವರ್ಷ ಅತಿಹೆಚ್ಚು ವೀಕ್ಷಿಸಲ್ಪಟ್ಟ ಭಾರತದ 10 ಚಿತ್ರಗಳು ಯಾವುವು ಎಂಬುದು ಬಿಡುಗಡೆಗೊಂಡಿದೆ.

ನೆಟ್ ಫ್ಲಿಕ್ಸ್ ನಲ್ಲಿ ಅತಿಹೆಚ್ಚು ವೀಕ್ಷಿಸಲ್ಪಟ್ಟ ಭಾರತದ 10 ಚಿತ್ರಗಳು
1. ಸೂರ್ಯವಂಶಿ ( ಹಿಂದಿ
2. ಆರ್ ಆರ್ ಆರ್ ( ತೆಲುಗು )
3. ಗಂಗೂಬಾಯಿ ಕಾಥಿಯಾವಾಡಿ ( ಹಿಂದಿ )
4. ಭೂಲ್ ಬುಲಯ್ಯ 2 ( ಹಿಂದಿ )
5. ಬೀಸ್ಟ್ ( ತಮಿಳು )
6. ಡಾರ್ಲಿಂಗ್ಸ್ ( ಹಿಂದಿ )
7. ಬಡಯೋ ( ಹಿಂದಿ )
8. 83 ( ಹಿಂದಿ )
9. ಶಾಮ್ ಸಿಂಗಾರಾಯ್ ( ತೆಲುಗು )
10. ಜಾದೂಗಾರ್ ( ಹಿಂದಿ )

ಅಮೆಜಾನ್ ಪ್ರೈಮ್ ವಿಡಿಯೊನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಚಿತ್ರಗಳು
2022ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೊನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಭಾರತದ ಚಿತ್ರಗಳ ಟಾಪ್ 10 ಪಟ್ಟಿ ಇಲ್ಲಿದೆ..
1. ಪುಷ್ಪ - ದಿ ರೈಸ್
2. ಕೆಜಿಎಫ್ ಚಾಪ್ಟರ್ 2
3. ಕೆಜಿಎಫ್ ಚಾಪ್ಟರ್ 1
4. ಸೀತಾ ರಾಮಮ್
5. ಪೊನ್ನಿಯಿನ್ ಸೆಲ್ವನ್: ಪಾರ್ಟ್ 1
6. ಬಚ್ಚನ್ ಪಾಂಡೆ
7. ಜುಗ್ ಜುಗ್ ಜೀಯೋ
8. ರನ್ ವೇ 34
9. ಜುರಾಸಿಕ್ ವರ್ಲ್ಡ್ ಡೊಮಿನಿಯನ್
10. ಗೆಹ್ರೈಯಾನ್

ಆರ್ ಆರ್ ಆರ್ ನಂಬರ್ ಒನ್ ಏಕೆ ಆಗಲಿಲ್ಲ?
ಸಾವಿರಕ್ಕೂ ಹೆಚ್ಚು ಕೋಟಿಗಳನ್ನು ಗಳಿಸಿದ ಆರ್ ಆರ್ ಚಿತ್ರವನ್ನು ಓಟಿಟಿಗೆ ಬಂದ ನಂತರವೂ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ವೀಕ್ಷಿಸಿದರು. ಆದರೂ ಸಹ ಆರ್ ಆರ್ ಆರ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏಕೆ ಏರಲಿಲ್ಲ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಆರ್ ಆರ್ ಆರ್ ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ಹೆಚ್ಚು ಜನ ವೀಕ್ಷಿಸಿದ್ದು ಹಾಗೂ ಮೂರ್ನಾಲ್ಕು ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾದದ್ದು.