twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಮೇಲಿನ ಎಲ್ಲ ಪ್ರಕರಣಗಳಿಗೂ ತಡೆ ನೀಡಿದ ಸುಪ್ರೀಂ

    |

    ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಹಾಟ್‌ಸ್ಟಾರ್, ಸೋನಿ ಲಿವ್, ಆಲ್ಟ್ ಬಾಲಾಜಿ ಇನ್ನು ಹಲವಾರು ಒಟಿಟಿಗಳ ಮೇಲೆ ದೇಶದಾದ್ಯಂತ ಬಾಕಿ ಇರುವ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

    ಎನ್‌ಜಿಓ ಒಂದು ಒಟಿಟಿಗಳ ಬಗ್ಗೆ ಹೂಡಿರುವ ಅರ್ಜಿಯ ವಿಚಾರಣೆಗೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ.

    ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್'ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್'

    ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಎನ್‌ಜಿಓ, 'ಒಟಿಟಿಗಳ ಮೇಲೆ ವಿಧಿಸಲಾಗಿರುವ ಸ್ವಯಂ ನಿರ್ಭಂಧ, ಸರ್ಕಾರದ ನಿರ್ಬಂಧಗಳು ಅವುಗಳ ಕಂಟೆಂಟ್ ಅನ್ನು ನಿಯಂತ್ರಿಸಲು ಸರಿಹೋಗುವುದಿಲ್ಲ. ಒಟಿಟಿ ಕಂಟೆಂಟ್‌ಗಳನ್ನು ನಿಯಂತ್ರಿಸಲು ಇನ್ನೂ ಪ್ರಭಲವಾದ 'ಟೂಲ್‌' ಬೇಕಿದೆ ಎಂದು ಅರ್ಜಿಯಲ್ಲಿ ಹೇಳಿದೆ.

    'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?

    'ಸೇಕ್ರೆಡ್ ಗೇಮ್ಸ್', 'ಮಿರ್ಜಾಪುರ್', ಎಕೆ v/s ಎಕೆ, ತಾಂಡವ್, ಎ ಸೂಟೇಬಲ್ ಬಾಯ್ ಇನ್ನೂ ಕೆಲವು ವೆಬ್ ಸರಣಿಗಳು ಈಗಾಗಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದಿರುವ ಎನ್‌ಜಿಓ, ವಿದೇಶಿ ವೆಬ್ ಸರಣಿಗಳಾದ 'ಗೇಮ್ ಆಫ್ ಥ್ರೋನ್ಸ್', 'ಸ್ಪಾರ್ಕಟಸ್‌' ವಿರುದ್ಧವೂ ಅಶ್ಲೀಲತೆಯ ಆರೋಪ ಮಾಡಿದೆ. ಈ ವೆಬ್ ಸರಣಿಗಳು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತವೆ ಎಂದು ಎನ್‌ಜಿಓ ಆರೋಪಿಸಿದೆ.

    'ತಜ್ಞರ ಸಮಿತಿ ಅಡಿಯಲ್ಲಿ ಹೊಸ ಮಾರ್ಗಸೂಚಿ ಅಗತ್ಯವಿದೆ'

    'ತಜ್ಞರ ಸಮಿತಿ ಅಡಿಯಲ್ಲಿ ಹೊಸ ಮಾರ್ಗಸೂಚಿ ಅಗತ್ಯವಿದೆ'

    ಒಟಿಟಿಗಳಿಗೆ ವಿಧಿಸಲಾಗಿರುವ ಸ್ವಯಂ ನಿರ್ಬಂಧ ಹಾಗೂ ಹೊಸ ಐಟಿ ಕಾಯ್ದೆ ತಿದ್ದುಪಡಿ ಸಹ ಒಟಿಟಿಗಳ ಕಂಟೆಂಟ್ ಅನ್ನು ನಿಯಂತ್ರಿಸಲು ಸಾಕಾಗುವುದಿಲ್ಲ ಇದಕ್ಕೆಂದೆ ತಜ್ಞರ ಸಮಿತಿಯ ಅಡಿಯಲ್ಲಿ ಹೊಸ ಮತ್ತು ಕಠಿಣ ಮಾರ್ಗಸೂಚಿಗಳು ತಯಾರಾಗಬೇಕು ಎಂದು ಎನ್‌ಜಿಓ ಹೇಳಿದೆ.

    ಮಾರ್ಚ್ 29 ರ ಬಳಿಕ ವಿಚಾರಣೆ

    ಮಾರ್ಚ್ 29 ರ ಬಳಿಕ ವಿಚಾರಣೆ

    ಹಾಗಾಗಿ ಒಟಿಟಿಗಳ ಕಂಟೆಂಟ್ ಬಗ್ಗೆ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಪ್ರಕರಣಗಳಿಗೂ ತಡೆ ನೀಡಿರುವ ಸುಪ್ರೀಂಕೋರ್ಟ್, ಮಾರ್ಚ್ 29 ರ ಬಳಿಕ ವಿಚಾರಣೆ ನಡೆಸಲಿದೆ. ಅರ್ಜಿಯ ವಿಸ್ತೃತ ವಿಚಾರಣೆಯ ಅಗತ್ಯವಿರುವುದಾಗಿ ಮನಗೊಂಡಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

    ಹಲವರು ದೂರು ದಾಖಲಿಸಿದ್ದರು

    ಹಲವರು ದೂರು ದಾಖಲಿಸಿದ್ದರು

    ಅಮೆಜಾನ್ ಪ್ರೈಂ ಸರಣಿಯಲ್ಲಿ ಬಿಡುಗಡೆ ಆದ 'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ವೆಬ್ ಸರಣಿ ವಿರುದ್ಧ ಕೇಂದ್ರ ಸಚಿವರೂ ಸೇರಿದಂತೆ ಹಲವರು ದೂರು ದಾಖಲಿಸಿದರು.

    'ತಾಂಡವ್' ಗಾಗಿ ಬೇಷರತ್ ಕ್ಷಮೆ ಕೇಳಿದ ಅಮೆಜಾನ್ ಪ್ರೈಂ'ತಾಂಡವ್' ಗಾಗಿ ಬೇಷರತ್ ಕ್ಷಮೆ ಕೇಳಿದ ಅಮೆಜಾನ್ ಪ್ರೈಂ

    ಒಟಿಟಿ ಕಂಟೆಂಟ್‌ ಬಗ್ಗೆ ಮಾರ್ಗಸೂಚಿ

    ಒಟಿಟಿ ಕಂಟೆಂಟ್‌ ಬಗ್ಗೆ ಮಾರ್ಗಸೂಚಿ

    'ತಾಂಡವ್' ವಿವಾದದ ಬಳಿಕ ವೆಬ್ ಸರಣಿಗಳ ಕಂಟೆಂಟ್ ಮೇಲೆ ನಿಯಂತ್ರಣ ಹೇರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಹೊಸ ಐಟಿ ಕಾಯ್ದೆಗೆ ಹೊಸ ನಿಯಮಗಳನ್ನು ಸೇರಿಸಿ ಒಟಿಟಿಗಳ ಕಂಟೆಂಟ್‌ ಬಗ್ಗೆ ಮಾರ್ಗೂಚಿ ಹೊರಡಿಸಲಾಗಿದೆ.

    English summary
    Supreme Court orders to pause all cases against Netflix, Amazon prime and other OTTs.
    Friday, March 26, 2021, 13:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X