For Quick Alerts
  ALLOW NOTIFICATIONS  
  For Daily Alerts

  ಅಮೇಜಾನ್ ಪ್ರೈಮ್ ಜೊತೆ ನಟ ಸೂರ್ಯ ಮೆಗಾ ಒಪ್ಪಂದಕ್ಕೆ ಸಹಿ

  |

  'ಸೂರರೈ ಪೊಟ್ರು' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಬಂದವು. ಸೂರ್ಯ ಕಮರ್ಷಿಯಲ್ ಹೀರೋ. ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಮಾಡಿದ್ರೆ ದುಡ್ಡು ಮಾಡಬಹುದು, ಫ್ಯಾನ್ಸ್ ಖುಷಿಯಾಗ್ತಾರೆ. ಆದರೆ, ಒಟಿಟಿಯಲ್ಲಿ ರಿಲೀಸ್ ಮಾಡಿದ್ರೆ ಕೆಲವೇ ಕೆಲವರು ನೋಡ್ಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದವು. ಆದರೆ, ನಿರ್ಮಾಪಕರ ಹಿತದೃಷ್ಟಿಯಿಂದ 'ಸೂರರೈ ಪೊಟ್ರು' ಚಿತ್ರ ಅಮೇಜಾನ್ ಪ್ರೈಮ್‌ಗೆ ಮಾರಾಟ ಆಯ್ತು. ಸಿನಿಮಾನೂ ಪ್ರೀಮಿಯರ್ ಕಾಣ್ತು. ನಿರೀಕ್ಷೆ ಮೀರಿದ ಯಶಸ್ಸು ಸೂರ್ಯ ಚಿತ್ರಕ್ಕೆ ಸಿಕ್ತು.

  ಮತ್ತೊಂದೆಡೆ ಪ್ರದರ್ಶಕ ಸಂಘದವರು ಸೂರ್ಯ ವಿರುದ್ಧ ಬೇಸರ ಮಾಡಿಕೊಂಡರು. ಥಿಯೇಟರ್‌ಗಳು ಸಂಕಷ್ಟದಲ್ಲಿದ್ದರೂ ಕಾಯದೇ, ಒಟಿಟಿಯಲ್ಲಿ ರಿಲೀಸ್ ಮಾಡಿದ್ದು, ಚಿತ್ರಮಂದಿರದ ಮಾಲೀಕರಿಗೆ ನಿರಾಸೆ ಉಂಟು ಮಾಡಿತ್ತು. ಇದರ ಪರಿಣಾಮ ಸೂರ್ಯ ಅವರ ಚಿತ್ರಗಳನ್ನು ಥಿಯೇಟರ್‌ನಲ್ಲಿ ನಿಷೇಧ ಮಾಡುವಂತೆ ಪ್ರದರ್ಶಕ ಸಂಘದಲ್ಲಿ ಚರ್ಚೆಯೂ ನಡೆದಿದೆ. ಬಹಳ ದಿನಗಳಿಂದಲೂ ಮುಚ್ಚಿರುವ ಚಿತ್ರಮಂದಿರಗಳು ಇನ್ನು ತೆರೆದಿಲ್ಲ. ಹಾಗಾಗಿ, ಈ ವಿಷಯ ಸದ್ಯಕ್ಕೆ ಸುಮ್ಮನಾಗಿದೆ.

  ನೈಜ ಘಟನೆ ಆಧಾರಿತ 'ಜೈ ಭೀಮ್'ನಲ್ಲಿ ಸೂರ್ಯ ಪಾತ್ರ ಬಹಿರಂಗ: ರಿಯಲ್ ಲಾಯರ್ ಇವರೇನೈಜ ಘಟನೆ ಆಧಾರಿತ 'ಜೈ ಭೀಮ್'ನಲ್ಲಿ ಸೂರ್ಯ ಪಾತ್ರ ಬಹಿರಂಗ: ರಿಯಲ್ ಲಾಯರ್ ಇವರೇ

  ಮತ್ತೊಂದೆಡೆ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಮಾಡಿ ವ್ಯವಹಾರ ಮುಂದುವರಿಸಿದ್ದಾರೆ. ಅಂದ್ಹಾಗೆ, ಸೂರರೈ ಪೊಟ್ರು ಚಿತ್ರಕ್ಕೆ ಸೂರ್ಯ ಅವರೇ ನಿರ್ಮಾಪಕರಾಗಿದ್ದ ಕಾರಣ ಹಾಕಿದ ಬಂಡವಾಳಕ್ಕಿಂತ ಲಾಭ ಮಾಡಿಕೊಂಡರು. ಇದೀಗ, ಸೂರರೈ ಪೊಟ್ರು ಯಶಸ್ಸಿನ ನಂತರ ಸೂರ್ಯ ಒಟಿಟಿ ಕಡೆ ಹೆಚ್ಚು ಒಲವು ತೋರಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆ.

  ನಾಲ್ಕು ಚಿತ್ರಗಳು ಅಮೇಜಾನ್‌ಗೆ ಸೇಲ್

  ನಾಲ್ಕು ಚಿತ್ರಗಳು ಅಮೇಜಾನ್‌ಗೆ ಸೇಲ್

  ಸೂರ್ಯ ಮತ್ತು ಜ್ಯೋತಿಕಾ ಅವರ '2ಡಿ ಎಂಟರ್‌ಟೈನ್‌ಮೆಂಟ್' ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುವ ಮುಂದಿನ ನಾಲ್ಕು ಚಿತ್ರಗಳನ್ನು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ವರದಿಯಾಗಿದೆ.

  ಬಿಡುಗಡೆಯಲ್ಲಿ ಹೊಸತನ ಕಂಡಿದ್ದೇವೆ

  ಬಿಡುಗಡೆಯಲ್ಲಿ ಹೊಸತನ ಕಂಡಿದ್ದೇವೆ

  ''ಕಳೆದ ವರ್ಷ ಬಹಳಷ್ಟು ಬದಲಾವಣೆ ಆಗಿವೆ. ಅಭೂತಪೂರ್ವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಬಿಡುಗಡೆ ಮಾದರಿಯಲ್ಲಿ ಹೊಸತನವನ್ನು ಕಂಡುಕೊಂಡಿದ್ದೇವೆ. 2ಡಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಲ್ಲಿ ತಯಾರಾದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಅಮೇಜಾನ್‌ನಲ್ಲಿ ತೆರೆಕಂಡು ಯಶಸ್ಸು ಕಂಡಿದೆ. 'ಪೊನ್ಮಗಳ್ ವಂದಾಲ್' ಮತ್ತು 'ಸೂರರೈ ಪೊಟ್ರು' ಚಿತ್ರಗಳನ್ನು ದೇಶದಲ್ಲಿ ಮಾತ್ರವಲ್ಲ ವರ್ಲ್ಡ್‌ವೈಡ್ ಪ್ರೇಕ್ಷಕರು ನೋಡಿ ಖುಷಿ ಪಟ್ಟಿದ್ದಾರೆ'' ಎಂದು ನಟ ಸೂರ್ಯ ಅಭಿಪ್ರಾಯ ಪಟ್ಟಿದ್ದಾರೆ.

  ಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆ

  ಮುಂದಿನ ನಾಲ್ಕು ಸಿನಿಮಾ ಯಾವುದು

  ಮುಂದಿನ ನಾಲ್ಕು ಸಿನಿಮಾ ಯಾವುದು

  ಸೂರ್ಯ ಮತ್ತು ಜ್ಯೋತಿಕಾ ನಿರ್ಮಾಣ ಮಾಡಲಿರುವ ಮುಂದಿನ ನಾಲ್ಕು ಚಿತ್ರಗಳು ಅಮೇಜಾನ್‌ನಲ್ಲಿ ರಿಲೀಸ್ ಆಗಲಿದೆ. ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಜೈ ಭೀಮ್', ಶಶಿಕುಮಾರ್, ಜ್ಯೋತಿಕಾ, ಸಮುದ್ರಕಣಿ ಕಾಣಿಸಿಕೊಂಡಿರುವ ಕೌಟುಂಬಿಕ ಚಿತ್ರ 'ಉದನ್‌ಪಿರಪ್ಪೆ', ಮಕ್ಕಳ ಚಿತ್ರ 'ಓ ಮೈ ಡಾಗ್', ಹಾಗೂ ರಮ್ಯಾ ಪಾಂಡಿಯನ್ ನಟನೆಯಲ್ಲಿ ಬರಲಿರುವ 'ರಾಮನ್ ಆಂಡಲುಮ್ ರಾವಣನ್ ಆಂಡಲುಮ್' ಚಿತ್ರಗಳು ಸಾಲಿನಲ್ಲಿದೆ.

  ಸೂರ್ಯ ಸಿನಿಮಾಗಳ ರಿಲೀಸ್ ದಿನಾಂಕ

  ಸೂರ್ಯ ಸಿನಿಮಾಗಳ ರಿಲೀಸ್ ದಿನಾಂಕ

  ವಕೀಲರೊಬ್ಬರ ನೈಜ ಕಥೆ ಆಧರಿಸಿ ಮಾಡುತ್ತಿರುವ 'ಜೈ ಭೀಮ್' ಸಿನಿಮಾ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. 'ಉದನ್‌ಪಿರಪ್ಪೆ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. 'ಓ ಮೈ ಡಾಗ್' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಪ್ರೀಮಿಯರ್ ಕಾಣಲಿದೆ. 'ರಾಮನ್ ಆಂಡಲುಮ್ ರಾವಣನ್ ಆಂಡಲುಮ್' ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.

  'ನವರಸ' ಪ್ರದರ್ಶನ

  'ನವರಸ' ಪ್ರದರ್ಶನ

  ಮಣಿರತ್ನಂ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರ 'ನವರಸ' ಸಿನಿಮಾ ಇಂದು ನೆಟ್‌ಪ್ಲಿಕ್ಸ್‌ನಲ್ಲಿ ಪ್ರದರ್ಶನ ಕಂಡಿದೆ. ಒಂಬತ್ತು ಕಥೆ, ಒಂಬತ್ತು ನಿರ್ದೇಶಕರು ಮಾಡಿರುವ ಚಿತ್ರ ಇದಾಗಿದ್ದು, ಒಂದು ಭಾಗದಲ್ಲಿ ಸೂರ್ಯ ಸಹ ನಟಿಸಿದ್ದಾರೆ.

  English summary
  Tamil Actor Suriya agree to release his four Films on Amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X