For Quick Alerts
  ALLOW NOTIFICATIONS  
  For Daily Alerts

  ಸೂರ್ಯಾ ನಟನೆಯ ಸಿನಿಮಾ ನೇರ ಒಟಿಟಿಗೆ: ವಿವಾದಕ್ಕೆ ಮುನ್ನುಡಿ?

  |

  ಖ್ಯಾತ ತಮಿಳು ನಟ ಸೂರ್ಯಾ ಅಭಿನಯದ 'ಸೂರರೈ ಪೊಟ್ರು' ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆ ಆಗಲಿದೆ. ಇದಾಗಲೇ ಬಿಡುಗಡೆ ದಿನಾಂಕ ನಿಗದಿಯಾಗಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  'ಸೂರರೈ ಪೊಟ್ರು' ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಅಕ್ಟೋಬರ್ 30 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಧಾ ಕೊಂಗಾರಾ ನಿರ್ದೇಶಿಸಿದ್ದು, ಸ್ವತಃ ಸೂರ್ಯಾ ಹಾಗೂ ಗುನೀತ್ ಮೊನಗ್ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ.

  ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ

  'ಸೂರರೈ ಪೊಟ್ರು' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವುದು ತಮಿಳಿನಲ್ಲಿ ವಿವಾದ ಎಬ್ಬಿಸುವ ಸರ್ವ ಸಾಧ್ಯತೆ ಇದೆ. ಈ ಹಿಂದೆ ಸಹ ಸಿನಿಮಾಗಳು ನೇರವಾಗಿ ಒಟಿಟಿಗೆ ಬಿಡುಗಡೆ ಆದಾಗ ಕೆಲವು ಪ್ರತಿಭಟನೆಗಳು ನಡೆದಿದ್ದವು.

  ಯಾಕಾದರೂ ಅಂತಹ ಸಿನಿಮಾಗಳನ್ನು ಮಾಡಿದೆನೋ...: 'ಸಿಂಗಂ' ನಿರ್ದೇಶಕನ ಪಶ್ಚಾತ್ತಾಪ

  ಚಿತ್ರಮಂದಿರ ಮಾಲೀಕರ ಸಂಘದ ತೀವ್ರ ವಿರೋಧ

  ಚಿತ್ರಮಂದಿರ ಮಾಲೀಕರ ಸಂಘದ ತೀವ್ರ ವಿರೋಧ

  ಸೂರ್ಯಾ ನಿರ್ಮಾಣ ಮಾಡಿದ್ದ, ಪತ್ನಿ ಜ್ಯೋತಿಕಾ ನಟಿಸಿದ್ದ 'ಪೊನ್ಮಗಳ್ ವಂದಾಳ್' ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗದೆ ನೇರವಾಗಿ ಒಟಿಟಿಗೆ ಬಿಡುಗಡೆ ಆದಾಗ ಚಿತ್ರಮಂದಿರಗಳ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

  ಸೂರ್ಯಾ ಸಿನಿಮಾ ಬಹಿಷ್ಕಾರಕ್ಕೆ ನಿರ್ಧಾರ

  ಸೂರ್ಯಾ ಸಿನಿಮಾ ಬಹಿಷ್ಕಾರಕ್ಕೆ ನಿರ್ಧಾರ

  'ಪೊನ್ಮಗಳ್ ವಂದಾಳ್' ಸಿನಿಮಾ ಒಟಿಟಿಗೆ ಬಿಡುಗಡೆ ಮಾಡಿದ್ದಕ್ಕೆ ಸೂರ್ಯಾ ನಟನೆಯ ಎಲ್ಲಾ ಸಿನಿಮಾವನ್ನು ಬಹಿಷ್ಕರಿಸಲು ಚಿತ್ರಮಂದಿರಗಳ ಮಾಲೀಕರ ಸಂಘ ನಿರ್ಧರಿಸಿತ್ತು. ಈಗ ಸ್ವತಃ ಸೂರ್ಯಾ ನಟನೆಯ ಸಿನಿಮಾ ಒಟಿಟಿಗೆ ನೇರವಾಗಿ ಬಿಡುಗಡೆ ಆಗುತ್ತಿದೆ. ಒಟಿಟಿ-ಚಿತ್ರಮಂದಿರಗಳ ತಿಕ್ಕಾಟವನ್ನು ಇದು ಇನ್ನಷ್ಟು ಹೆಚ್ಚಿಸಲಿದೆ.

  ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ

  ಒಟಿಟಿಗೆ ನೀಡುವುದಿಲ್ಲ ಎಂದಿರುವ ವಿಜಯ್, ಧನುಶ್

  ಒಟಿಟಿಗೆ ನೀಡುವುದಿಲ್ಲ ಎಂದಿರುವ ವಿಜಯ್, ಧನುಶ್

  ತಮಿಳಿನಲ್ಲಿ ಇತರೆ ಸ್ಟಾರ್ ನಟರಾದ ಧನುಶ್, ವಿಜಯ್ ಅವರುಗಳ ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದ್ದು, ಅವರಿಬ್ಬರೂ ತಾವು ತಮ್ಮ ಸಿನಿಮಾವನ್ನು ಒಟಿಟಿಗೆ ಕೊಡುವುದಿಲ್ಲವೆಂದು ಹೇಳಿದ್ದಾರೆ. ಆದರೆ ಸೂರ್ಯಾ ಮಾತ್ರ ತಮ್ಮ ಸಿನಿಮಾವನ್ನು ಒಟಿಟಿಗೆ ಕೊಟ್ಟು ಸೇಫ್ ಆಗಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮಾಲೀಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

  ಕನ್ನಡಿಗ ಜಿ.ಆರ್.ಗೋಪಿನಾಥ್ ಜೀವನ ಆಧರಿತ ಸಿನಿಮಾ

  ಕನ್ನಡಿಗ ಜಿ.ಆರ್.ಗೋಪಿನಾಥ್ ಜೀವನ ಆಧರಿತ ಸಿನಿಮಾ

  'ಸೂರರೈ ಪೊಟ್ರು' ಸಿನಿಮಾವು ಕರ್ನಾಟಕದ ಜಿ.ಆರ್.ಗೋಪಿನಾಥ್ ಅವರ ಜೀವನದ ಮೇಲೆ ಆಧರಿತವಾಗಿದೆ. ಜಿ.ಆರ್.ಗೋಪಿನಾಥ್ ಭಾರತೀಯ ವಾಯುಪಡೆಯಲ್ಲಿ ಕ್ಯಾಪ್ಟನ್ ಆಗಿದ್ದರು. ನಂತರ ಇವರೇ 'ಏರ್ ಡೆಕ್ಕನ್' ಅನ್ನು ಸ್ಥಾಪಿಸಿದರು.

  ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್

  English summary
  Actor Suriya's Soorarai Potru movie to be release on Amazon Prime on October 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X