twitter
    For Quick Alerts
    ALLOW NOTIFICATIONS  
    For Daily Alerts

    18 ವರ್ಷಗಳ ಬಳಿಕ ಬದಲಾಯ್ತು ಟಾಟಾ ಸ್ಕೈ: ಕಾರಣವೇನು?

    |

    ಡೈರೆಕ್ಟ್ ಬ್ರಾಡ್‌ಕಾಸ್ಟ್ ಸ್ಯಾಟಲೈಟ್ (ಸರಳ ಶಬ್ದಗಳಲ್ಲಿ 'ಖಾಸಗಿ ಕೇಬಲ್') ಸೇವೆ ನೀಡುತ್ತಿದ್ದ ಟಾಟಾ ಸ್ಕೈ (ಡಿಟಿಎಚ್‌: ಡೈರೆಕ್ಟ್ ಟು ಹೋಮ್) ಹದಿನೆಂಟು ವರ್ಷಗಳ ಯಶಸ್ವೀ ಸೇವೆ ಬಳಿಕ ಹೆಸರು ಮತ್ತು ಉದ್ಯಮದ ಮಾದರಿಯನ್ನು ಬದಲಾಯಿಸಿಕೊಂಡಿದೆ.

    ಟಾಟಾ ಸ್ಕೈ ಇನ್ನು ಮುಂದೆ ಟಾಟಾ ಪ್ಲೇ ಎಂದು ಬದಲಾಗುತ್ತಿದ್ದು, ತಮ್ಮ ಸೇವೆಯನ್ನು ವಿಸ್ತರಣೆ ಹಾಗೂ ಬದಲಾವಣೆ ಮಾಡಿಕೊಳ್ಳುತ್ತಿದೆ. ಟಾಟಾ ಪ್ಲೇ ಇನ್ನು ಮುಂದೆ ಡಿಟಿಎಚ್ (ಕೇಬಲ್ ಚಾನೆಲ್) ಸೇವೆಗಳ ಜೊತೆಗೆ ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ.

    ಈಗಾಗಲೇ 1.9 ಕೋಟಿ ಡಿಟಿಎಚ್ ಚಂದಾದಾರನ್ನು ಹೊಂದಿದ್ದ ಟಾಟಾ ಸ್ಕೈ ಇದೀಗ ಟಾಟಾ ಪ್ಲೇ ಮೂಲಕ ಫೈಬರ್ ಟು ಹೋಮ್ ಮೂಲಕ ಅಂತರ್ಜಾಲ ಸೇವೆ ಹಾಗೂ ಬಿಂಜ್ ಯೋಜನೆ ಮೂಲಕ ಹತ್ತಕ್ಕೂ ಹೆಚ್ಚು ಒಟಿಟಿ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಬಿಂಜ್‌ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್ ಸೇರಿದಂತೆ 14 ಜನಪ್ರಿಯ ಒಟಿಟಿ ಕಂಟೆಂಟ್‌ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ.

    Tata Sky Changed Its Name To Tata Play, Started Giving OTT Service
    ''ನಮ್ಮದು ಡಿಟಿಎಚ್ ಸಂಸ್ಥೆಯಾಗಿತ್ತು. ಆದರೆ ಇನ್ನು ಮುಂದೆ ನಾವು ಕಂಟೆಂಟ್ ವಿತರಣೆ ಮಾಡುವ ಸಂಸ್ಥೆಯಾಗಿ ಬದಲಾಗಲಿದ್ದೇವೆ. ನಮ್ಮ ಗ್ರಾಹಕರ ವರ್ಗ ಕಂಟೆಂಟ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಹಾಗಾಗಿ ಅವರ ಅಗತ್ಯಕ್ಕೆ ತಕ್ಕಂತೆ ನಾವು ನಮ್ಮ ಸೇವೆಯನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ'' ಎಂದಿದ್ದಾರೆ ಟಾಟಾ ಪ್ಲೇನ ಸಿಇಓ ಹರಿತ್ ನಾಗ್‌ಪಾಲ್.

    ''ನಮ್ಮ ಡಿಟಿಎಚ್ ಸೇವೆ ಅತ್ಯಂತ ವೇಗವಾಗಿ, ಬೃಹತ್‌ ಆಗಿ ಬೆಳೆಯುತ್ತಿದೆ. ಅದರ ಜೊತೆಗೆ ನಾವು ಒಟಿಟಿ ಸೇವೆಯೂ ಬೆಳೆಯಲಿದೆ. ಜೊತೆಗೆ ಅಂತರ್ಜಾಲ (ಬ್ರಾಡ್‌ಬ್ಯಾಂಡ್) ಸೇವೆಯಲ್ಲಿಯೂ ನಾವು ಪ್ರತ್ಯೇಕ ಗುರುತು ಸಾಧಿಸಲಿದ್ದೇವೆ'' ಎಂಬ ವಿಶ್ವಾಸವನ್ನು ಸಿಇಓ ಹರಿತ್ ನಾಗ್‌ಪಾಲ್ ವ್ಯಕ್ತಪಡಿಸಿದ್ದಾರೆ.

    2004ರಲ್ಲಿ ಟಾಟಾ ಸ್ಕೈ ಪ್ರಾರಂಭವಾಯಿತು. ಆಗ ಟಾಟಾ ಸ್ಕೈನ 80% ಮಾಲಿಕತ್ವ ಟಾಟಾ ಗ್ರೂಪ್‌ ಬಳಿಯೂ 20% ಮಾಲೀಕತ್ವ ಜಗತ್‌ ವಿಖ್ಯಾತ ಸೆಂಚುರಿ ಫಾಕ್ಸ್‌ ಸಂಸ್ಥೆಯ ಸೋದರ ಸಂಸ್ಥೆ ರುಪೆರ್ಟ್ ಮರ್ಡಾಕ್ ಬಳಿಯೂ ಇತ್ತು. ಬಳಿಕ ಸೆಂಚುರಿ ಫಾಕ್ಸ್ ಹಾಗೂ ಟಾಟಾ ಸಂಸ್ಥೆಯು ಜೊತೆಗೂಡಿ ಟಿಎಸ್ ಇನ್‌ವೆಸ್ಟ್‌ಮೆಂಟ್ ಪ್ರಾರಂಭ ಮಾಡಿದಾಗ ಟಾಟಾ ಸ್ಕೈನ 20% ಪಾಲುದಾರಿಕೆಯನ್ನು ಹೊಸ ಸಂಸ್ಥೆಗೆ ನೀಡಲಾಯಿತು. ಅದರ ಮೂಲಕ ಸೆಂಚುರಿ ಫಾಕ್ಸ್ ಸಂಸ್ಥೆಯು 9.8% ಹೆಚ್ಚು ಪಾಲುದಾರಿಕೆಯನ್ನು ಟಾಟಾ ಸ್ಕೈನಲ್ಲಿ ಪಡೆದುಕೊಂಡಿತು. ಫಾಕ್ಸ್ ಬಳಿ ಟಾಟಾ ಸ್ಕೈನ 29.8% ಪಾಲುದಾರಿಕೆ ಇತ್ತು. ಬಳಿಕ ಫಾಕ್ಸ್‌ನ ಮನೊರಂಜನೆ ಸಂಬಂಧಿತ ಉದ್ಯಮವನ್ನು ಜಗತ್‌ ವಿಖ್ಯಾತ ವಾಲ್ಟ್ ಡಿಸ್ನಿಗೆ ಮಾರಾಟ ಮಾಡಿದಾಗ ಟಾಟಾ ಸ್ಕೈನ ಪಾಲುದಾರಿಕೆ ಸಹ ವಾಲ್ಟ್ ಡಿಸ್ನಿಗೆ ಸೇರಿಕೊಂಡಿತು. ಟಾಟಾ ಸ್ಕೈ (ಈಗ ಟಾಟಾ ಪ್ಲೇ)ನ ಮಾಲೀಕತ್ವವು ಟಾಟಾ ಗ್ರೂಪ್‌ ಹಾಗೂ ವಾಲ್ಟ್ ಡಿಸ್ನಿ ಬಳಿ ಇದೆ.

    Read more about: ott tv ಒಟಿಟಿ ಟಿವಿ
    English summary
    Famous DTH service provider Tata Sky changed its band name to Tata Play and offering 14 different leading OTT platform content to its users.
    Wednesday, January 26, 2022, 23:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X