For Quick Alerts
  ALLOW NOTIFICATIONS  
  For Daily Alerts

  'ತಾಂಡವ್' ವೆಬ್ ಸರಣಿ ನಿರ್ಮಾಪಕರಿಗಾಗಿ ಪೊಲೀಸರ ಹುಡುಕಾಟ

  |

  ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ 'ತಾಂಡವ್' ವೆಬ್ ಸರಣಿ ಮೇಲೆ ಹೊರಿಸಲಾಗಿದ್ದು. ಈಗಾಗಲೇ ದೂರು ಸಹ ದಾಖಲಾಗಿದೆ.

  ಇಂದು ಉತ್ತರ ಪ್ರದೇಶ ಪೊಲೀಸರು ಮುಂಬೈಗೆ ಬಂದು 'ತಾಂಡವ್' ವೆಬ್ ಸರಣಿಯ ನಿರ್ಮಾಪಕರ ಕಚೇರಿಗೆ ಭೇಟಿ ನೀಡಿ ನೊಟೀಸ್ ನೀಡಲು ಯತ್ನಿಸಿದರಾದರೂ ನಿರ್ಮಾಪಕ ಕೈಗೆ ಸಿಕ್ಕಿಲ್ಲ. ಅವರು ಕಚೇರಿಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬುದು ಗೊತ್ತಾಗಿದೆ.

  ಮಿರ್ಜಾಪುರ್ ನಿರ್ಮಾಪಕರಿಗೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್

  ನೊಟೀಸ್ ನೀಡುವ ಯತ್ನ ಮಾಡಿದ ಬಳಿಕ ಮಾತನಾಡಿದ ಪೊಲೀಸ್ ಅಧಿಕಾರಿ, ನಿರ್ಮಾಪಕ ಹಿಮಾಂಶು ಮೆಹ್ರಾ ಸಂಪರ್ಕ ಮಾಡಲು ಯತ್ನಿಸುತ್ತಿದ್ದೇವೆ ಆದರೆ ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ. ಇದೇ ದಿನ 'ತಾಂಡವ್' ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಗೆ ನೊಟೀಸ್ ಅನ್ನು ನೀಡಿದೆ ಪೊಲೀಸ್ ತಂಡ.

  ಉತ್ತರ ಪ್ರದೇಶದಲ್ಲಿ ದೂರು ದಾಖಲು

  ಉತ್ತರ ಪ್ರದೇಶದಲ್ಲಿ ದೂರು ದಾಖಲು

  'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ಭಾವನೆಗಳಿಗೆ ಧಕ್ಕೆ ತರುವಂತಹಾ ದೃಶ್ಯಗಳು ಇವೆ ಎಂದು ಆರೋಪ ಮಾಡಲಾಗಿದ್ದು, ಕೆಲವರು ಉತ್ತರ ಪ್ರದೇಶದಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

  ರಾಜಕೀಯ ವಿಷಯ ವಸ್ತು ಆಧರಿಸಿದ 'ತಾಂಡವ್'

  ರಾಜಕೀಯ ವಿಷಯ ವಸ್ತು ಆಧರಿಸಿದ 'ತಾಂಡವ್'

  'ತಾಂಡವ್' ವೆಬ್ ಸರಣಿಯು ರಾಜಕೀಯ ವಿಷಯವಸ್ತು ಆಧರಿಸಿದ ವೆಬ್ ಸರಣಿ ಆಗಿದ್ದು. ಜೆಎನ್‌ಯು ವಿದ್ಯಾರ್ಥಿ ಚಳವಳಿಯ ಕತನವನ್ನೂ ವೆಬ್ ಸರಣಿ ಒಳಗೊಂಡಿದೆ. 'ತಾಂಡವ್‌' ನ ಹಲವು ದೃಶ್ಯಗಳು ಪ್ರಸ್ತುತ ರಾಜಕೀಯದ ಕೆಲವು ಸನ್ನಿವೇಶಗಳನ್ನು ನೆನಪಿಸುತ್ತವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ವೆಬ್ ಸರಣಿ ನೆನಪಿಸುತ್ತದೆ.

  ಮಿರ್ಜಾಪುರ ವೆಬ್ ಸರಣಿ ವಿರುದ್ಧ ಮಿರ್ಜಾಪುರದಲ್ಲಿ ದೂರು ದಾಖಲು

  ಕ್ಷಮೆ ಕೇಳಿದ 'ತಾಂಡವ್' ವೆಬ್ ಸರಣಿ ತಂಡ

  ಕ್ಷಮೆ ಕೇಳಿದ 'ತಾಂಡವ್' ವೆಬ್ ಸರಣಿ ತಂಡ

  'ತಾಂಡವ್' ವಿರುದ್ಧ ದೂರು ದಾಖಲಾಗುತ್ತಿದ್ದಂತೆ, ತಾಂಡವ್ ವೆಬ್ ಸರಣಿ ತಂಡವು ಅಧಿಕೃತ ಕ್ಷಮಾಪಣೆಯನ್ನು ಕೇಳಿದೆ. ಅಷ್ಟೇ ಅಲ್ಲದೆ ಕೆಲವು ದೃಶ್ಯಗಳನ್ನು ತೆಗೆಯುವುದಾಗಿ ಸಹ ಹೇಳಿದೆ. ದೇವತೆ ಶಿವ ನ ಕುರಿತಾಗಿ ಇದ್ದ ದೃಶ್ಯವನ್ನು ತೆಗೆದಿದೆ.

  ಮಿರ್ಜಾಪುರ್ ವಿರುದ್ಧವೂ ದೂರು ದಾಖಲು

  ಮಿರ್ಜಾಪುರ್ ವಿರುದ್ಧವೂ ದೂರು ದಾಖಲು

  ಅಮೆಜಾನ್ ನ ಮತ್ತೊಂದು ವೆಬ್ ಸರಣಿ 'ಮಿರ್ಜಾಪುರ್' ವಿರುದ್ಧ ಸಹ ದೂರು ದಾಖಲಾಗಿದ್ದು, ಸುಪ್ರೀಂಕೋರ್ಟ್ ಇಂದು ಮಿರ್ಜಾಪುರ್ ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿದೆ. ಉತ್ತರ ಪ್ರದೇಶದ ಮಿರ್ಜಾಪುರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

  English summary
  Uttar Pradesh police visited Mumbai today and served notice to Tandav web series producer and director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X