ಸ್ಕ್ಯಾಮ್-1992 ವೆಬ್ ಸರಣಿಗೆ ಮೊದಲ ಆಯ್ಕೆ ವರುಣ್ ಧವನ್ ಆಗಿದ್ದರೆ?
ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆ ಆಗಿರುವ 'ಸ್ಕ್ಯಾಮ್-1992; ಹರ್ಷದ್ ಮೆಹ್ತಾ ಸ್ಟೋರಿ' ಭಾರಿ ಜನಪ್ರಿಯಗೊಂಡಿದೆ. ಹರ್ಷದ್ ಮೆಹ್ತಾ ನಿಜ ಜೀವನದ ಕತೆಯನ್ನು ಅದ್ಭುತವಾಗಿ ವೆಬ್ ಸರಣಿ ಆಗಿಸಿದ್ದಾರೆ ನಿರ್ದೇಶಕರಾದ ಹನ್ಸಲ್ ಮೆಹ್ತಾ, ಜಯ್ ಮೆಹ್ತಾ.
ಸ್ಕ್ಯಾಮ್-1992 ಭಾರಿ ಹಿಟ್ ಆಗಿದೆ. ವೆಬ್ ಸರಣಿಯಲ್ಲಿ ಹರ್ಷದ್ ಮೆಹ್ತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಪ್ರತೀಕ್ ಗಾಂಧಿ ನಟನೆಯಂತೂ ಭಾರಿ ಮೆಚ್ಚುಗೆ ಗಳಿಸಿದೆ. ಸ್ಕ್ಯಾಮ್-1992 ಪ್ರತೀಕ್ ಗಾಂಧಿಗೆ ಹಲವು ಅವಕಾಶಗಳ ಬಾಗಿಲು ತೆರೆಯುತ್ತಿದೆ.
ಆದರೆ ಸ್ಕ್ಯಾಮ್-1992 ವೆಬ್ ಸರಣಿಯಲ್ಲಿ ಹರ್ಷದ್ ಮೆಹ್ತಾ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದಿದ್ದು, ಬಾಲಿವುಡ್‌ನ ಯುವನಟ ವರುಣ್ ಧವನ್, ಅವರು ಪಾತ್ರ ಮಾಡಲು ಬೇಡವೆಂದ ಅದನ್ನು ಪ್ರತೀಕ್ ಗಾಂಧಿಗೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹರ್ಷದ್ ಮೆಹ್ತಾ ಪಾತ್ರಕ್ಕಾಗಿ ವರುಣ್ ಧವನ್ ಅನ್ನು ಸಂಪರ್ಕಿಸಲಾಗಿತ್ತು, ಆದರೆ, ವೆಬ್ ಸರಣಿಯ ನಿರ್ದೇಶಕರಲ್ಲಿ ಒಬ್ಬರಾದ ಹನ್ಸಲ್ ಮೆಹ್ತಾ, ಪ್ರತೀಕ್ ಗಾಂಧಿಯನ್ನು ಆಯ್ಕೆ ಮಾಡಿದರು ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ನಟ ವರುಣ್ ಧವನ್ ಸ್ಪಷ್ಟನೆ ನೀಡಿದ್ದಾರೆ.
Recommended Video
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ವರುಣ್ ಧವನ್, 'ಇಲ್ಲ ಖಂಡಿತ ನಾನು ಮೊದಲ ಆಯ್ಕೆ ಆಗಿರಲಿಲ್ಲ, ವೆಬ್ ಸರಣಿಯ ಮೊದಲ ಆಯ್ಕೆ ಪ್ರತೀಕ್ ಗಾಂಧಿ, ಆತನೇ ಆ ಪಾತ್ರಕ್ಕೆ ಸೂಕ್ತ, ಅವರು ಅದ್ಭುತವಾಗಿ ನಟಿಸಿದ್ದಾರೆ. ನಾನು ಸ್ಕ್ಯಾಮ್ 1992 ನ ಅಭಿಮಾನಿ ಆಗಿದ್ದೇನೆ' ಎಂದಿದ್ದಾರೆ ವರುಣ್.


Click it and Unblock the Notifications











