For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಸಾಹಸಕ್ಕೆ ಮುಂದಾದ ವಿಜಯ್ ದೇವರಕೊಂಡ

  |

  ನಟ ವಿಜಯ್ ದೇವರಕೊಂಡ ಅತ್ಯಲ್ಪ ಅವಧಿಯಲ್ಲಿಯೇ ಸ್ಟಾರ್ ಪಟ್ಟ ಗಳಿಸಿಕೊಂಡವರು. 'ಅರ್ಜುನ್ ರೆಡ್ಡಿ' ಸಿನಿಮಾ ಒಂದರ ಮೂಲಕವೇ ಬಹುದೊಡ್ಡ ಅಭಿಮಾನಿ ವರ್ಗವನ್ನು ತಮ್ಮದಾಗಿಸಿಕೊಂಡರು.

  'ಅರ್ಜುನ್ ರೆಡ್ಡಿ' ಪ್ರಭಾವದಿಂದ ಹೊರಗೆ ಬಂದು ಭಿನ್ನ ಮಾದರಿ ಪಾತ್ರಗಳಲ್ಲಿಯೂ ನಟಿಸಿರುವ ವಿಜಯ್ ದೇವರಕೊಂಡ ಈಗ ತೆಲುಗು ಚಿತ್ರರಂಗ ದಾಟಿ ಬಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ನಟನೆ ಮಾತ್ರವಲ್ಲದೆ ಇನ್ನಷ್ಟು ಸಾಹಸಗಳಿಗೂ ದೇವರಕೊಂಡ ಕೈ ಹಾಕಿದ್ದಾರೆ.

  ವಿಜಯ್ ದೇವರಕೊಂಡ ಈಗಾಗಲೇ ನವೋದ್ಯಮಿ ಎನಿಸಿಕೊಂಡಿದ್ದು, ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಒಂದನ್ನು ಹೊಂದಿದ್ದಾರೆ. ಅದರ ಜೊತೆಗೆ ಸೋಲಾರ್ ಹಾಗೂ ಬ್ಯಾಟರಿ ಸಂಬಂಧಿ ಉದ್ಯಮವೊಂದರಲ್ಲಿ ಪಾಲುದಾರರಾಗಿ ಹಣ ತೊಡಗಿಸಿದ್ದಾರೆ. ಇದೀಗ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ವಿಜಯ್, ವೆಬ್ ಸರಣಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

  ಕಿಂಗ್ ಆಫ್‌ ದಿ ಹಿಲ್ಸ್ ಪ್ರೊಡಕ್ಷನ್ ಹೌಸ್

  ಕಿಂಗ್ ಆಫ್‌ ದಿ ಹಿಲ್ಸ್ ಪ್ರೊಡಕ್ಷನ್ ಹೌಸ್

  ವಿಜಯ್ ದೇವರಕೊಂಡ ಈಗಾಗಲೇ 'ಕಿಂಗ್ ಆಫ್‌ ದಿ ಹಿಲ್ಸ್' ಹೆಸರಿನ ಪ್ರೊಡಕ್ಷನ್ ಸಂಸ್ಥೆಯನ್ನು ಹೊಂದಿದ್ದಾರೆ. ಆ ನಿರ್ಮಾಣ ಸಂಸ್ಥೆಯ ಮೂಲಕ 2019 ರಲ್ಲಿ 'ಮೀಕು ಮಾತ್ರಮೇ ಚಪ್ತಾ' ಹೆಸರಿನ ಹಾಸ್ಯಮಯ ಸಿನಿಮಾ ಒಂದನ್ನು ನಿರ್ಮಾಣವೂ ಮಾಡಿದ್ದಾರೆ. ಇದೀಗ ಅದೇ ನಿರ್ಮಾಣ ಸಂಸ್ಥೆಯ ಮೂಲಕ ಸಹೋದರ ಆನಂದ್ ದೇವರಕೊಂಡರವರ ಹೊಸ ಸಿನಿಮಾ 'ಪುಷ್ಪಕ ವಿಮಾನಂ'ವನ್ನು ಅರ್ಪಿಸಿದ್ದಾರೆ.

  ವೆಬ್ ಸರಣಿ ನಿರ್ಮಿಸಲಿರುವ ವಿಜಯ್ ದೇವರಕೊಂಡ

  ವೆಬ್ ಸರಣಿ ನಿರ್ಮಿಸಲಿರುವ ವಿಜಯ್ ದೇವರಕೊಂಡ

  ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ವಿಜಯ್ ದೇವರಕೊಂಡ ತಮ್ಮ ಪ್ರೊಡಕ್ಷನ್ ಹೌಸ್‌ ಮೂಲಕ ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಲಿದ್ದಾರೆ. ಹೊಸ ನಿರ್ದೇಶಕರೊಬ್ಬರಿಗೆ ಅವಕಾಶ ನೀಡಲಿರುವುದಾಗಿ ಹೇಳಿರುವ ದೇವರಕೊಂಡ, ಕತೆಯನ್ನು ಅಂತಿಮಗೊಳಿಸಿದ್ದು ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭ ಮಾಡಿಸಲಿದ್ದಾರೆ. ವೆಬ್ ಸರಣಿಗೆ ವಿಜಯ್ ದೇವರಕೊಂಡ ನಿರ್ಮಾಪಕ ಮಾತ್ರವೇ ಆಗಿರಲಿದ್ದಾರೆ, ಪಾತ್ರ ಮಾಡುವುದಿಲ್ಲ.

  ಆಹಾನಲ್ಲಿ ಬಿಡುಗಡೆ ಸಾಧ್ಯತೆ

  ಆಹಾನಲ್ಲಿ ಬಿಡುಗಡೆ ಸಾಧ್ಯತೆ

  ವಿಜಯ್ ದೇವರಕೊಂಡ ಹಾಗೂ ನಟ ಅಲ್ಲು ಅರ್ಜುನ್ ಬಹಳ ಆಪ್ತರು. ಹಾಗಾಗಿ ಅಲ್ಲು ಅರ್ಜುನ್ ಒಡೆತನದ 'ಆಹಾ' ಒಟಿಟಿಯಲ್ಲಿಯೇ ವಿಜಯ್ ದೇವರಕೊಂಡ ನಿರ್ಮಿಸುತ್ತಿರುವ ವೆಬ್ ಸರಣಿ ಪ್ರಸಾರವಾಗುವ ಸಾಧ್ಯತೆ ದಟ್ಟವಾಗಿದೆ. 'ಆಹಾ' ಒಟಿಟಿ ವೇದಿಕೆಯಲ್ಲಿ ಈಗಾಗಲೇ ಕೆಲವು ವೆಬ್ ಸರಣಿಗಳು ಪ್ರಸಾರವಾಗಿವೆ. ಅದರಲ್ಲಿ ಕನ್ನಡದ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶಿಸಿದ್ದ 'ಕುಡಿ ಎಡಮೈತೆ' ಸಹ ಒಂದು.

  ಚಿತ್ರಮಂದಿರ ನಿರ್ಮಿಸಿದ ವಿಜಯ್ ದೇವರಕೊಂಡ

  ಚಿತ್ರಮಂದಿರ ನಿರ್ಮಿಸಿದ ವಿಜಯ್ ದೇವರಕೊಂಡ

  ವಿಜಯ್ ದೇವರಕೊಂಡ ಕೆಲವು ದಿನಗಳ ಹಿಂದಷ್ಟೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಒಂದನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ತಮ್ಮ ತಂದೆ-ತಾಯಿಯ ಸ್ವಂತ ಊರು ಮೆಹಬೂಬ್‌ನಗರದಲ್ಲಿ 'ಎವಿಡಿ' (ಏಷಿಯನ್ ವಿಜಯ್ ದೇವರಕೊಂಡ) ಹೆಸರಿನ ಐಶಾರಾಮಿ ಥಿಯೇಟರ್ ಮಲ್ಟಿಫ್ಲೆಕ್ಸ್ ಅನ್ನು ವಿಜಯ್ ದೇವರಕೊಂಡ ಪ್ರಾರಂಭ ಮಾಡಿದ್ದಾರೆ. ಮೆಹಬೂಬನಗರ ಪ್ರಜೆಗಳು ನಿಮ್ಮ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಹಬ್ಬಗಳಿಗೆ, ರಜೆಗಳಿಗೆ ಹೊರಗೆ ಹೋಗಬೇಕೆಂದುಕೊಂಡಾಗ ದಯವಿಟ್ಟು ಎವಿಡಿಗೆ ಭೇಟಿ ನೀಡಿ. ನಿಮಗೆ, ನಿಮ್ಮ ಕುಟುಂಬಕ್ಕೆ ಒಂದು ಅತ್ಯುತ್ತಮ ಮಲ್ಟಿಫ್ಲೆಕ್ಸ್ ಅನುಭವವನ್ನು ನೀಡುವ ದೃಷ್ಟಿಯಿಂದ ಎವಿಡಿಯನ್ನು ಪ್ರಾರಂಭಿಸಿದ್ದೇವೆ. ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದಿಂದ ನಾವು ಎವಿಡಿಯನ್ನು ನಿರ್ಮಿಸಿದ್ದೇವೆ ಎಂದು ವಿಜಯ್ ದೇವರಕೊಂಡ ಹೇಳಿದ್ದರು. ತಮ್ಮ ಚಿತ್ರಮಂದಿರದಲ್ಲಿ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಮಾಡಿದ್ದರು. ವಿಜಯ್ ದೇವರಕೊಂಡ ಪ್ರಸ್ತುತ 'ಲೈಗರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಚಾರ್ಮಿ ಮತ್ತು ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಸಿನಿಮಾದ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದು, ಸಿನಿಮಾದಲ್ಲಿ ಸ್ಟಾರ್ ಬಾಕ್ಸರ್ ಮೈಕಲ್ ಟೈಸನ್ ನಟಿಸುತ್ತಿದ್ದಾರೆ.

  English summary
  Vijay Devarakonda producing Telugu web series for OTT from his production house King of Hills. Vijay Produced one movie from his production house in 2019.
  Monday, November 8, 2021, 9:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X