»   » 'ನಿರಂತರ' ತಿರುಳಿಲ್ಲ, ಹುರುಳಿಲ್ಲ ಒಂಥರಾ ವಿಚಿತ್ರ ಕತೆ

'ನಿರಂತರ' ತಿರುಳಿಲ್ಲ, ಹುರುಳಿಲ್ಲ ಒಂಥರಾ ವಿಚಿತ್ರ ಕತೆ

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಇದು ಜಗತ್ತಿನ ಏಕೈಕ ಸಂಭಾಷಣೆಯ ಚಿತ್ರ. ಮಾತು ಕೊನೆತನಕ ಮ್ಯೂಟ್ ಆಗಿರುತ್ತದೆ. ನಿರಂತರ, ಹೆಸರೇ ಹೇಳುವಂತೆ ಇದು ಒಂಥರಾ ವಿ-ಚಿತ್ರ ಕತೆ. ತಿರುಳಿಲ್ಲ, ಹುರುಳಿಲ್ಲ. ಒಬ್ಬ ಅಮಾಯಕ ಹುಡುಗನ ಹಿಂದೆ ಒಂದಷ್ಟು ಮಂದಿ ಬೀಳುತ್ತಾರೆ. ಹಾಗೇ ಸುಮ್ಮನೆ ತರಲೆ, ಹಿಂಸೆ ಮಾಡುತ್ತಾರೆ. ಕಾರಣ ಗೊತ್ತಿಲ್ಲ. ಮತ್ತೆ ಮಾತಿಲ್ಲದ ಮೆರವಣಿಗೆ.

ಸಂಗೀತದ ಅಬ್ಬರ ಕೆಲವು ಕಡೆ ಹೆಚ್ಚಾಗಿದೆ. ಎಲ್ಲ ಪಾತ್ರಗಳೂ ಹಾವಭಾವದ ಮೂಲಕ ಪ್ರಶ್ನೆಗೆ ಉತ್ತರಿಸುತ್ತಾರೆ. ರೀ ರೆಕಾರ್ಡಿಂಗ್‌ನಲ್ಲಿ ತಬಲಾಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಉಳಿದಂತೆ ಹಾಡಿಲ್ಲ, ಮೂಡಿಲ್ಲ, ಅರ್ಥವಿಲ್ಲ,ಸ್ವಾರ್ಥವಿಲ್ಲ... ಮೌನವೇ ಆಭರಣ.

ಚಿತ್ರದ ಕೊನೆಯಲ್ಲಿ ರವಿಶಂಕರ್ ಗುರೂಜಿ ಒಂದೇ ಒಂದು ಡೈಲಾಗ್ ಹೇಳುವ ಹೊತ್ತಿಗೆ ಪ್ರೇಕ್ಷಕನ ಕಣ್ಣು ಕೆಂಪಾಂಬುದಿ ಕೆರೆಯಾಗಿರುತ್ತದೆ! ಇದು ಹಿಂದೆ-ಮುಂದೆ ಇನ್ನೆಂದೂ ಬಂದಿರದ ಸೈಲೆಂಟ್ ಥ್ರಿಲ್ಲರ್-ಕಿಲ್ಲರ್-ಸೌಂಡ್‌ಲೆಸ್ ಪ್ರೆಜರ್ ಕುಕ್ಕರ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada