twitter
    For Quick Alerts
    ALLOW NOTIFICATIONS  
    For Daily Alerts

    ನಾ ನೋಡಿದ ಕನ್ನಡ ಸಿನಿಮಾ - ಅಣ್ಣಾಬಾಂಡ್

    By *ಬಾಲರಾಜ್ ತಂತ್ರಿ
    |

    ಸಹದ್ಯೋಗಿಗಳೊಂದಿಗೆ ಕೆ ಎಚ್ ರಸ್ತೆಯಲ್ಲಿರುವ ವಿಷನ್ ಸಿನಿಮಾಸ್ ನಲ್ಲಿ ಚಿತ್ರ ನೋಡಿದೆ. ಪುನೀತ್, ರಂಗಾಯಣ ರಘು, ನಾಯಕಿಯರುಗಳನ್ನು ಹತ್ತಿರದಿಂದ ನೋಡುವ ಭಾಗ್ಯ ನನ್ನದಾಗಿತ್ತು . ಅಂದರೆ ಸ್ಕ್ರೀನ್ ಎದುರಿನ ಮೊದಲ ಸಾಲಿನಲ್ಲಿ ಕೂತು ಚಿತ್ರ ನೋಡಬೇಕಾಯಿತು. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಒಂದು ಮಟ್ಟಿಗೆ ನಿಮಗೆ ನಿರಾಶೆ ಸಹಜ, ಏನೂ ನಿರೀಕ್ಷೆ ಇಟ್ಟುಕೊಳ್ಳದೇ ಚಿತ್ರ ನೋಡಲು ಹೋದರೆ ಪಕ್ಕಾ ಪೈಸಾ ವಸೂಲ್ ಚಿತ್ರ.

    ಚಿತ್ರದಲ್ಲಿ ನನಗೆ ಇಷ್ಟವಾಗದೇ ಇದ್ದಿದ್ದು

    1.ಕೊನೆಯ ಹಾಡಿನ ನಂತರ ಕ್ಲೈಮ್ಯಾಕ್ಸ್ ಮೊದಲಿನ ಅವಧಿಯ ದೃಶ್ಯಗಳಿಗೆ 5-10 ನಿಮಿಷದಷ್ಟು ಕತ್ತರಿ ಹಾಕಬಹುದಿತ್ತು. ಇಂಟರ್ವಲ್ ನಂತರ ಕೆಲಕಡೆ ಚಿತ್ರ ಸ್ವಲ್ಪ ಬೋರ್ ಹೊಡಿಸುತ್ತದೆ.
    2 ಜಾಕಿಶ್ರಾಫ್ ಅವರ ಕನ್ನಡ ಉಚ್ಚಾರಣೆ ಬಹಳಷ್ಟು ಕಡೆ ಅರ್ಥಾನೆ ಆಗುವುದಿಲ್ಲ. ಅವರು ಹಿಂದಿಯಲ್ಲೇ ಡೈಲಾಗ್ ಹೇಳಿದ್ದರೆ ಪಾತ್ರಕ್ಕೆ ಇನ್ನಷ್ಟು ತೂಕ ಬರುತ್ತಿತ್ತು.
    3.ಚಿತ್ರದುದ್ದಕ್ಕೂ ಬುಲೆಟ್ ಸದ್ದು ಅವಶ್ಯಕತೆಗಿಂತ ಜಾಸ್ತೀನೆ ಇತ್ತು.
    4.ನಾಯಕನಿಗೆ ಹೋಲಿಸಿದರೆ ಪ್ರಿಯಾಮಣಿ ಒಸಿ ದಪ್ಪ ಜಾಸ್ತಿ ಆಯಿತು ಅನ್ನೊದು.

    ಚಿತ್ರದಲ್ಲಿ ನನಗೆ ಇಷ್ಟವಾಗಿದ್ದು

    1.ಮತ್ತೆ ವರ್ಕ್ ಔಟ್ ಆದ ಪುನೀತ್ - ರಂಗಾಯಣ ರಘು ಕಾಂಬಿನೇಶನ್
    2.ಎರಡನೇ ಹಾಡಿನಲ್ಲಿ ಸೈಕಲ್ ಸವಾರಿ ದೃಶ್ಯಗಳನ್ನು ಬಳಸಿಕೊಂಡಿದ್ದು
    3.ಕಾಣದಂತೆ ಮಾಯವಾದನು ಹಾಡಿಗೆ ಪುನೀತ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ ಡ್ಯಾನ್ಸ್ ಮತ್ತು ಕಾಸ್ಟ್ಯೂಮ್ಸ್
    4. ಚಿತ್ರದುದ್ದಕ್ಕೂ ಅದ್ದೂರಿಯಾಗಿ ಕಾಣಿಸಿಕೊಳ್ಳುವ ಸ್ಕೆಲೆಟಿನ್ ಬೈಕ್
    5. ಡುಯೆಟ್ ಹಾಡಿಗೆ ಬಳಸಿಕೊಂಡ ಲೋಕೇಶನ್
    6. ಸತ್ಯ ಹೆಗಡೆ ಅವರ ಕ್ಯಾಮೆರಾ ಕೆಲಸ, ಇಮ್ರಾನ್ ಸರ್ದಾರಿಯಾ ಅವರ ಕೊರಿಯಾಗ್ರಫಿ
    7. ಯಾವುದೇ ಭಾಷೆಯವರು ನಾಚಿಸುವಂತ ಮೈನವೇರೆಳಿಸುವ ಕ್ಲೈಮ್ಯಾಕ್ಸ್ ಫೈಟ್ . Thanks to Ravi Varma and Different Danny

    ಚಿತ್ರ ಬಿಡುಗಡೆಗೆ ಎರಡು ದಿನ ಮುನ್ನ ನಿರ್ದೇಶಕ ಸೂರಿ ಹೇಳಿದ್ರು, ನಿಮ್ಮ ಜೀವನದ ಅಮೂಲ್ಯ ಎರಡು ಗಂಟೆಯನ್ನು ನನ್ನ ಚಿತ್ರಕ್ಕೆ ಮೀಸಲಿಡುತ್ತೀರಿ. ನಿಮ್ಮ ಎರಡು ಗಂಟೆಗೆ ನಾನು ನ್ಯಾಯ ಒದಗಿಸುತ್ತೇನೆ. ಬಹಳಷ್ಟು ಹೈಪ್ ಇಟ್ಟು ಕೊಳ್ಳಬೇಡಿ ಎಂದು ಕೂಡಾ ಅಂದಿದ್ದರು. ಸೂರಿ ಅವರ ಮಾತಿನಂತೆ ನಡೆದುಕೊಂಡಿದ್ದಾರೆ. ನೂರಕ್ಕೆ ಎಪ್ಪತ್ತು ಅಂಕ ಕೊಡಬಹುದಾದ ಚಿತ್ರವಿದು.

    ಎಲ್ಲದಕ್ಕಿಂತ ನನಗೆ ಖುಷಿ ಕೊಟ್ಟಿದ್ದು, ಚಿತ್ರಮಂದಿರದಲ್ಲಿ ಒಂದು ರೀತಿಯ ಜಾತ್ರೆಯ ವಾತಾವರಣವಿತ್ತು. ಮಲ್ಟಿಪ್ಲೆಕ್ಸ್ ನಲ್ಲೂ ಸಿಳ್ಳೆ ಹೊಡೆಯುವುದು ಕುಣಿಯೋದು, ಇತರ ಭಾಷೆಯ ಜನರೂ ಚಿತ್ರ ನೋಡಲೂ ಬಂದಿದ್ದು ನನಗೆ ಗಮನ ಸೆಳೆದ ಇತರ ಅಂಶಗಳು.

    English summary
    The best part and not so best part of the Kannada movie Anna Bond. Puneeth Rajkumar, Priyamani, Nidhi Subbaiah, Jackie Shroff in the lead role. Duniya Soori has directed this movie and movie produced by Smt. Parvatamma Rajkumar.
    Wednesday, May 2, 2012, 14:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X